ಒಂದು ಟೂತ್ ಬ್ರಷ್ ಅನ್ನು ಎಷ್ಟು ದಿನ ಬಳಸಬಹುದು..? ಬ್ರಷ್‌ಗೂ ಮುಕ್ತಾಯ ದಿನಾಂಕ ಇರುತ್ತಾ..?

  • ಕೆಲವರು ಹಾಳಾಗಿಲ್ಲ ಅಂತ ಒಂದೇ ಬ್ರಷ್‌ ಅನ್ನು ವರ್ಷಗಟ್ಟಲೇ ಬಳಸುತ್ತಾರೆ.
  • ಈ ಪದ್ದತಿ ಬಾಯಿಯ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.
  • ಒಂದು ಬ್ರಷ್‌ ಅನ್ನು ಎಷ್ಟು ದಿನ ಬಳಸಬೇಕು..?

Tooth brush expiry : ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ನಾವು ಹಲ್ಲುಜ್ಜಲು ಬಳಸುವ ಟೂತ್ ಬ್ರಶ್ ಅನ್ನು ಎಷ್ಟು ದಿನ ಬದಲಾಯಿಸಬೇಕು ಅಂತ ಹಲವರಿಗೆ ಗೊತ್ತಿಲ್ಲ.. ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ನಿಯಮಿತವಾಗಿ ಬದಲಾಯಿಸುವ ಮೂಲಕ ನಿಮ್ಮ ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಬಹುದು.

ಸಾಮಾನ್ಯವಾಗಿ, ಟೂತ್ ಬ್ರಷ್ ಅನ್ನು ಹಲ್ಲು ಮತ್ತು ಒಸಡುಗಳಲ್ಲಿ ಸಿಲುಕಿಹಾಕಿಕೊಂಡ ಪ್ಲೇಕ್ ಮತ್ತು ಆಹಾರದ ಕಣಗಳನ್ನು ತೆಗೆದುಹಾಕಲು ವಿನ್ಯಾಸಗೊಳಿಸಲಾಗಿದೆ. ಆದರೆ ಒಂದು ನಿರ್ದಿಷ್ಟ ಸಮಯದ ನಂತರ ಬ್ರಷ್‌ ಹಾಳಾಗಿ ಶುದ್ಧೀಕರಣ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.. ಆದರೂ ಅದನ್ನ ಬಳಸಿದರೆ ಹಲ್ಲು ಮತ್ತು ಒಸಡುಗಳ ಸಮಸ್ಯೆಗೆ ಕಾರಣವಾಗುಬೇಕಾಗುತ್ತದೆ..

 ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸಬೇಕು. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ರೋಗಾಣುಗಳನ್ನು ಹರಡುವುದನ್ನು ತಪ್ಪಿಸಲು ನೀವು ಚೇತರಿಸಿಕೊಂಡ ನಂತರ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಬದಲಾಯಿಸುವುದು ಉತ್ತಮ. ಇದು ಮರು ಸೋಂಕು ಹರಡುವಿಕೆಯನ್ನು ತಡೆಯುತ್ತದೆ.

ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ನಿಯಮಿತವಾಗಿ ಬದಲಾಯಿಸುವ ಪ್ರಯೋಜನಗಳು

ಟೂತ್ ಬ್ರಷ್ ಅನ್ನು ನೀವು ಆಗಾಗ್ಗೆ ಬದಲಾಯಿಸಿದಾಗ, ಹಲ್ಲು ಮತ್ತು ಒಸಡುಗಳಲ್ಲಿ ಸಿಲುಕಿಹಾಕಿಕೊಂಡಿದ್ದ ಪ್ಲೇಕ್ ಮತ್ತು ಆಹಾರದ ಕಣಗಳನ್ನು ಸರಿಯಾಗಿ ತೆಗೆದುಹಾಕುತ್ತದೆ. 

ಉತ್ತಮ ಟೂತ್ ಬ್ರಷ್ ಬಳಕೆಯಿಂದ ಹಲ್ಲು ನೋವು ಮತ್ತು ವಸಡು ಸಂಬಂಧಿತ ಕಾಯಿಲೆಗಳಿಂದ ದೂರವಿರಬಹುದು. 

ಸ್ವಚ್ಛವಾದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಕಡಿಮೆ. ಇದರಿಂದ ನಿಮಗೆ ಕೆಟ್ಟ ಉಸಿರಾಟದ ಸಮಸ್ಯೆ ಇರುವುದಿಲ್ಲ.

Source : https://zeenews.india.com/kannada/health/how-often-you-should-change-your-toothbrush-244007

 

Leave a Reply

Your email address will not be published. Required fields are marked *