ಒಂದು ತಿಂಗಳು ಸರಿಯಾಗಿ ನಿದ್ದೆ ಮಾಡದಿದ್ದರೆ ಏನಾಗುತ್ತೆ ಗೊತ್ತಾ?: ದೇಹದಲ್ಲಿ ಆಗುವ ಬದಲಾವಣೆಗಳೇನು? 

Health Risks of Poor Sleep: ನಿದ್ರಾಹೀನತೆಯು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ನಿದ್ರಾಹೀನತೆಯ ಸಮಸ್ಯೆಗಳಿಂದ ಯಾವ ರೀತಿಯ ಸಮಸ್ಯೆಗಳು ಉದ್ಭವಿಸಬಹುದು ಎಂದು ನಿಮಗೆ ತಿಳಿದಿದೆಯೇ? ಸಂಶೋಧನೆ ಏನು ಹೇಳುತ್ತದೆ? ಒಂದು ದಿನ, ಒಂದು ವಾರ ಅಥವಾ ಒಂದು ತಿಂಗಳ ಕಾಲ ನಿದ್ರಾಹೀನತೆಯ ಸಮಸ್ಯೆ ಇದ್ದರೆ ಯಾವೆಲ್ಲಾ ತೊಂದರೆಗಳು ಉಂಟಾಗುತ್ತದೆ ಎಂಬುದನ್ನು ಈ ವರದಿಯಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

Health Risks of Poor Sleep: ಒಬ್ಬ ವ್ಯಕ್ತಿ ಆರೋಗ್ಯವಾಗಿರಬೇಕು ಎಂದರೆ ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎನ್ನವುದು ತಜ್ಞರ ಅಭಿಮತ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲಸ, ಇತರ ಕಾರ್ಯಗಳು ಮತ್ತು ಮಾನಸಿಕ ಸಮಸ್ಯೆಗಳಿಂದ ಕೆಲವರಿಗೆ ನಿದ್ದೆ ಬರುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಇಂಥವರು ಮಲಗುವುದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಮತ್ತು ವಿಡಿಯೋ ನೋಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ನಿದ್ದೆಯ ಕೊರತೆಯಿಂದ ಜೀವನ ಮುಂದುವರಿಸಿದರೆ ಕೆಲವೇ ದಿನಗಳಲ್ಲಿ ಆರೋಗ್ಯಕ್ಕೆ ಹಾನಿಯಾಗುವ ಅಪಾಯವಿದೆ ಎನ್ನುತ್ತಾರೆ ಸಂಶೋಧಕರು. ಈ ಹಿನ್ನೆಲೆಯಲ್ಲಿ ಒಟ್ಟಿ ಎಂಬ ಮ್ಯಾಟ್ರೆಸ್ ಕಂಪನಿಯು ನಿದ್ರಾಹೀನತೆಯ ಸಮಸ್ಯೆಗಳ ಕುರಿತು ಮೆಡಿಸಿನ್ ಡೈರೆಕ್ಟ್ ಎಂಬ ಕಂಪನಿಯ ಸಹಯೋಗದಲ್ಲಿ ಸಂಶೋಧನೆ ನಡೆಸಿದೆ. ನಿದ್ದೆಯ ಕೊರತೆಯಿದ್ದರೆ ಎಷ್ಟು ದಿನಗಳವರೆಗೆ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬರುತ್ತವೆ ಎಂಬ ವರದಿಯನ್ನು ಬಹಿರಂಗಪಡಿಸಿದೆ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

24 ಗಂಟೆಗಳಿಗೂ ಹೆಚ್ಚು ಕಾಲ ನಿದ್ರಾಹೀನತೆ: 24 ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರಾಹೀನತೆ ಹೊಂದಿರುವ ಜನರು ಕುಳಿತಲ್ಲೇ ತೂಕಡಿಕೆ ಅನುಭವಿಸುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮೆದುಳಿನ ಕಾರ್ಯವು ನಿಧಾನವಾಗುವುದರ ಜೊತೆಗೆ ಏಕಾಗ್ರತೆಯೂ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಚಿಕ್ಕ ಚಿಕ್ಕ ವಿಷಯಗಳಿಗೂ ಸಿಟ್ಟಿಗೆದ್ದು ಮೂಡ್ ಸ್ಥಿರವಾಗಿಲ್ಲದಿರುವುದು ಕಂಡು ಬರುತ್ತದೆ. ಈ ಹಂತದಲ್ಲಿ ಕಣ್ಣುಗಳು ಉಬ್ಬಿದಂತೆ ಕಾಣುತ್ತವೆ. ದೇಹದಲ್ಲಿನ ನರಮಂಡಲದ ಸಮತೋಲನ ತಪ್ಪುತ್ತದೆ. ಸ್ನಾಯು ನೋವು ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಕೆಲಸದ ಒತ್ತಡದಿಂದ ರಾತ್ರಿ ನಿದ್ದೆಯಿಲ್ಲದವರೂ ಇದೇ ರೀತಿಯ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.

ಮೂರು ದಿನ ನಿದ್ದೆ ಬರದಿದ್ದರೆ ಏನಾಗುತ್ತೆ?: ಮೂರು ದಿನಕ್ಕಿಂತ ಹೆಚ್ಚು ನಿದ್ದೆಯಿಲ್ಲದಿದ್ದರೆ ಅಂತಹವರಲ್ಲಿ ಮೆದುಳು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ಅಂತಹವರು ತೀವ್ರ ಭ್ರಮೆಯಿಂದ ಬಳಲುತ್ತಾರೆ. ನಿದ್ರಾಹೀನತೆ, ಅಸ್ಥಿರತೆ ಮತ್ತು ಇಂದ್ರಿಯಗಳ ಮೇಲೆ ಹಿಡಿತವನ್ನು ಕಳೆದುಕೊಂಡಂತೆ ಅವರಿಗೆ ಭಾಸವಾಗುತ್ತಿದೆ. ಚರ್ಮವು ಸುಕ್ಕಗಟ್ಟುತ್ತದೆ, ದೃಷ್ಟಿ ಮಂಜಾಗುತ್ತದೆ. ಕಣ್ಣುಗಳು ನೋಯುತ್ತವೆ ಮತ್ತು ಸ್ನಾಯುಗಳು ಸಂಕುಚಿತಗೊಂಡಂತೆ ಭಾಸವಾಗುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.

ಒಂದು ವಾರ ನಿದ್ದೆ ಮಾಡದಿದ್ದರೆ ಏನಾಗುತ್ತದೆ?: ಒಂದು ವಾರಕ್ಕಿಂತ ಹೆಚ್ಚು ಕಾಲ ನಿದ್ರಾಹೀನನಾಗಿದ್ದರೆ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ನಿದ್ದೆಯ ಕೊರತೆಯಿಂದ, ಮನುಷ್ಯನು ತಾನು ಏನನ್ನಾದರೂ ಕಳೆದುಕೊಂಡಿದ್ದೇನೆ ಎಂದು ಭಾವ ಅವರಲ್ಲಿ ಮೂಡುತ್ತದೆ. ದೇಹದಲ್ಲಿ ತೇವಾಂಶದ ಮಟ್ಟವು ಕಡಿಮೆಯಾಗುತ್ತದೆ. ಮತ್ತು ಇದರಿಂದ ಚರ್ಮವು ಒಣಗುತ್ತದೆ. ನಂತರ ಸುಕ್ಕುಗಳು ಸಹ ಪ್ರಾರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ದೇಹದಲ್ಲಿನ ಪಿಹೆಚ್ ಸಮತೋಲನದ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ತಿಂಗಳವರೆಗೆ ನಿದ್ದೆ ಮಾಡದಿದ್ದರೆ ಏನಾಗುತ್ತೆ?: ಸರಿಯಾಗಿ ನಿದ್ದೆಯಿಲ್ಲದೆ ತಿಂಗಳು ಕಳೆದರೆ ವ್ಯಕ್ತಿಯ ಮಾನಸಿಕ ಸ್ಥಿತಿ ಸಂಪೂರ್ಣ ಹಾಳಾಗುತ್ತದೆ. ನಿದ್ರೆಯ ಕೊರತೆಯಿಂದ ತೀವ್ರ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಗಾಬರಿಯಿಂದ ನಡುಗುತ್ತಾರೆ. ನಿಧಾನವಾಗಿ ಭ್ರಮೆಗಳು ಮುಂದುವರಿದು ಯಾವುದು ನಿಜ, ಯಾವುದು ಭ್ರಮೆ ಎಂದು ನಿರ್ಧರಿಸಲಾಗದ ಸ್ಥಿತಿಗೆ ತಲುಪುತ್ತವೆ ಎನ್ನುತ್ತಾರೆ ತಜ್ಞರು. ಅವರ ಮೆದುಳಿಗೆ ಗೊತ್ತಿಲ್ಲದೆಯೇ ಕೆಲವು ಆಲೋಚನೆಗಳು ಬರುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

ಬೆವರುವುದು, ತ್ವರಿತ ತೂಕ ನಷ್ಟ, ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನ ಮತ್ತು ಕೆಲವು ಸಂದರ್ಭಗಳಲ್ಲಿ ಹಠಾತ್ ಋತುಬಂಧ ಆಗುತ್ತದೆ. ಒಟ್ಟಿ ಮೆಡಿಸಿನ್ ಡೈರೆಕ್ಟ್ ನಡೆಸಿದ ಸಂಶೋಧನೆಯಲ್ಲಿ ಈ ಎಲ್ಲಾ ವಿಷಯಗಳು ಬಹಿರಂಗವಾಗಿವೆ. ಆದ್ದರಿಂದ, ನಿದ್ರಾಹೀನತೆಯಿಂದ ಬರುವ ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಿದ್ರೆಗೆ ಸಾಕಷ್ಟು ಸಮಯವನ್ನು ನಿಗದಿಪಡಿಸಬೇಕು ಎಂದು ಸಂಶೋಧಕರು ಸೂಚಿಸುತ್ತಾರೆ.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ಒದಗಿಸಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ.

Source : https://www.etvbharat.com/kn/!health/what-causes-sleep-disorders-health-risks-of-poor-sleep-kas24092702123

Leave a Reply

Your email address will not be published. Required fields are marked *