ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 01: ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ ಚಿತ್ರದುರ್ಗ ಜಿಲ್ಲಾ ಘಟಕದವತಿಯಿಂದ : 1-7-2022ರಿಂದ 31-7-2024ರ ಅವಧಿಯಲ್ಲಿ ವಿವೃತ್ತರಾದ ನೌಕರರಿಗೆ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ
ಲೆಕ್ಕಾಚಾರದಲ್ಲಿ ನೀಡಬೇಕೆಂದು ಹಾಗೂ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ
ಕಪ್ಪು ಪಟ್ಟಿಯನ್ನು ಧರಿಸಿ ಧರಣಿ ಸತ್ಯಾಗ್ರಹವನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ
ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಮಹಾಪ್ರಧಾನ ಸಂಚಾಲಕರಾದ
ಎಂ.ಪಿ.ಎಂ.ಷಣ್ಮುಖಯ್ಯ ದಿನಾಂಕ 01-07-2022 ರಿಂದ 31-07-2024 ರ ಅವಧಿಯಲ್ಲಿ ನಿವೃತ್ತರಾದ, ನಿಧನರಾದ ಅಧಿಕಾರಿಗಳೂ
ಹಾಗೂ ನೌಕರರಿಗೂ ಸಹ ದಿನಾಂಕ : 01-07-2022 ರಿಂದ ವೇತನ ನಿಗದಿಗೊಳಿಸಿ ನಿವೃತ್ತಿ ವೇತನವನ್ನು ಪುನರ್ ನಿಗದಿಗೊಳಿಸಿ ಆರ್ಥಿಕ
ಸೌಲಭ್ಯವು ದಿನಾಂಕ : 01-08-2024 ರಿಂದ ದೊರೆಯುವಂತೆ ಆದೇಶಿಸಿದೆ. ಆದರೆ ಈ ಅವಧಿಯಲ್ಲಿ ನಿವೃತ್ತರಾದ/ ನಿಧನರಾದ
ಅಧಿಕಾರಿಗಳೂ ಹಾಗೂ ನೌಕರರಿಗೆ 07 ನೇ ವೇತನ ಆಯೋಗದ ವರದಿಯನುಸಾರ ಕೇವಲ ನಿವೃತ್ತಿ ವೇತನ ಸೌಲಭ್ಯವನ್ನು ಮಾತ್ರ
ನೀಡಿ, ಡಿ.ಸಿ.ಆರ್.ಜಿ. ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಕ್ಕೆ ಸಂಬಂಧಿಸಿದ ಆರ್ಥಿಕ ಸೌಲಭ್ಯವನ್ನು 2018 ರಲ್ಲಿ ಜಾರಿಗೆ
ತರಲಾದ ಆರನೇ ವೇತನ ಆಯೋಗದ ಅನುಸಾರ ನೀಡಲು ಆದೇಶಿಸಿದೆ. ಇದರಿಂದ ನಮಗೆ ಅನ್ಯಾಯವಾಗಿದೆ. ನಮಗೆ ನ್ಯಾಯವಾಗಿ
ದೊರಕಬೇಕಾದ 07 ನೇ ವೇತನ ಆಯೋಗದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣ
ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಸರ್ಕಾರದ ಗಮನ ಸೆಳೆಯಲು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ
ಸಲ್ಲಿಸಲು ವಿಶ್ವ್ತ ಹಿರಿಯ ನಾಗರೀಕರ ದಿನಾಚರಣೆಯ ದಿನವಾದ ಇಂದು ನಡೆಸಲಾಗುತ್ತಿದೆ ಎಂದರು.
ದಿ.1-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಏಳನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ
ಸೌಲಭ್ಯದಿಂದ ವಂಚಿತರಾಗಿ, ಅರನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲಾಗಿದೆ.ನಮಗೆ ನಷ್ಟವಾದ ನಿವೃತ್ತಿ
ಆರ್ಥಿಕ ಸೌಲಭ್ಯವನ್ನು ಡಿ.ಸಿ.ಆರ್.ಜಿ., ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣ ಮೊತ್ತವನ್ನು ಏಳನೇ ವೇತನ ಆಯೋಗದ
ಲೆಕ್ಕಾಚಾರದಲ್ಲಿ ನೀಡಬೇಕಿದೆ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಅಡಿಯಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ ಹನ್ನೆರಡು
ಸಾವಿರ ನಿವೃತ್ತ ನೌಕರರು ಸಮಾವೇಶಗೊಂಡು ನಮ್ಮ ಬೇಡಿಕೆ ಕುರಿತು ಹಕ್ಕೊತ್ತಾಯದ ಚಿನ್ನವತ್ತಳೆ ಸಲ್ಲಿಸಲಾಗಿತ್ತು. ದಿ.20-9-2024
ರಂದು ಮೈಸೂರಿನಲ್ಲಿ ತಮಗೆ ನಮ್ಮ ವೇದಿಕೆಯ ನಿಯೋಗದೊಂದಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಈಗ ನಮಗೆ ಆಗಿರುವ ನಿವೃತ್ತಿ
ಆರ್ಥಿಕ ಸೌಲಭ್ಯದ ನಷ್ಟ ಕುರಿತು ತಾವುಗಳು 1-7-2022ರಿಂದ 31-7-2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಡಿ.ಸಿ.ಆರ್.ಜಿ.,
ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕೆಂದು ಹಾಗೂ ಪರಿಷ್ಕೃತ
ಆದೇಶ ಹೊರಡಿಸಬೇಕೆಂದು ಮನವಿ ಮಾಡಿ ಪರಿಷ್ಕೃತ ಆದೇಶ ಹೊರಡಿಸುವಲ್ಲಿ ಅನುಕೂಲಕಲ್ಪಿಸ ಬೇಕೆಂದು ಒತ್ತಾಯಿಸಲಾಯಿತು.
ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಭಾಗವಹಿಸಿದ್ದ ನಿವೃತ್ತ ನೌಕರರು ತಮ್ಮ ಕೈಗೆ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹದಲ್ಲಿ
ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಆಶೋಕ ಸಜ್ಜನ್, ಹೆಚ್,ಸಿ.ಪದ್ಮಾವತಿ, ರಮೇಶ್ ಮದುರಿ,
ನೀಲಕಂಠಚಾರ್, ಜಗನ್ನಾಥ್, ಹೆಚ್.ಗೋವಿಂದಯ್ಯ ಜಿಲ್ಲಾ ಸಂಚಾಲಕರಾದ ರಮೇಶ್, ತಾಲ್ಲೂಕು ಸಂಚಾಲಕರಾದ ಹನುಮಂತಪ್ಪ
ಷಡಾಕ್ಷರಪ್ಪ ಧರಣಿಯ ನೇತೃತ್ವವನ್ನು ವಹಿಸಿದ್ದರು.