ದಿನನಿತ್ಯವೂ ಉತ್ತಮ ಆರಂಭ ಪಡೆದರೆ ನಮ್ಮ ಇಡೀ ದಿನವು ಲವಲವಿಕೆಯಿಂದ ಚೆನ್ನಾಗಿ ಸಾಗುತ್ತದೆ ಎಂಬುದು ಎಲ್ಲರಿಗೂ ವೇದ್ಯವಾಗಿರುವ ಸಂಗತಿ. ಆದರೆ ಇಂದಿನ ಬಿಡುವಿಲ್ಲದ ಜೀವನದ ಜಂಜಾಟದಲ್ಲಿ ನಾವು ದಿನದ ಪ್ರಮುಖ ಉಪಹಾರವಾದ ಬೆಳಗಿನ ಉಪಾಹಾರದ ಬಗ್ಗೆ ಹೆಚ್ಚು ಗಮನ/ ಒತ್ತು ಕೊಡುವುದು ಅನಿವಾರ್ಯ ಸಂಗತಿಯಾಗಿದೆ. ಆದರೆ ಅನೇಕರು ಬೆಳಗಿನ ಉಪಾಹಾರವನ್ನು ತ್ಯಜಿಸುತ್ತಾರೆ. ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರಿದರೆ, ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ಉಂಟುಮಾಡುತ್ತದೆ. ಕ್ರಮೇಣ ನಮ್ಮ ದೇಹವು ರೋಗಗಳ ಗೂಡಾಗುತ್ತದೆ.

ತಜ್ಞರ ಪ್ರಕಾರ.. ಬೆಳಿಗ್ಗೆ ಉಪಹಾರ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅತ್ಯಗತ್ಯವಾದ ಗ್ಲೂಕೋಸ್ ಸಿಗುತ್ತದೆ. ಇದು ದೇಹದಲ್ಲಿನ ರಕ್ತದ ಸಕ್ಕರೆಯ ಮಟ್ಟವನ್ನು ಕಾಪಾಡುತ್ತದೆ. ಅದೇ ಸಮಯದಲ್ಲಿ, ದೀರ್ಘಕಾಲದವರೆಗೆ ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಬಿಡುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಂದು ತಿಂಗಳ ಕಾಲ ನಿರಂತರವಾಗಿ ಬೆಳಗಿನ ಉಪಾಹಾರವನ್ನು ತ್ಯಜಿಸುವುದು ನಮ್ಮ ಆರೋಗ್ಯದ ಮೇಲೆ ಹೇಗೆ ಮತ್ತು ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಳ್ಳೋಣ.
’ರಾಜನಂತೆ ಉಪಹಾರ ಸೇವಿಸಿ: Eat breakfast like a king, lunch like a prince and dinner like a beggar: ಉಪಹಾರವನ್ನು ರಾಜನಂತೆ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆ ಮತ್ತು ರಾತ್ರಿಯ ಊಟವನ್ನು ಭಿಕ್ಷುಕನಂತೆ ಸೇವಿಸಿ – ಈ ನಾಣ್ಣುಡಿ ಎಲ್ಲವನ್ನೂ ಹೇಳುತ್ತದೆ.
ಕಸಿವಿಸಿ/ ಹತಾಶೆ: ತಜ್ಞರ ಪ್ರಕಾರ ನ್ಯೂರೋಟ್ರಾನ್ಸಿಟರ್ ಸಿರೊಟೋನಿನ್ (neurotransmitter serotonin) ನಮ್ಮ ಮನಸ್ಥಿತಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಇದು ನಮ್ಮ ಉಪಹಾರದಿಂದ ಪ್ರಭಾವಿತವಾಗಿರುತ್ತದೆ. ಒಂದು ತಿಂಗಳ ಕಾಲ ನಿರಂತರವಾಗಿ ಬೆಳಗಿನ ಉಪಾಹಾರ ಸೇವಿಸದಿದ್ದರೆ, ಸಿರೊಟೋನಿನ್ ಮಟ್ಟವು ಹಾನಿಗೊಳಗಾಗುತ್ತದೆ. ಈ ಕಾರಣದಿಂದಾಗಿ ಕಿರಿಕಿರಿ, ಆತಂಕ ಮತ್ತು ಖಿನ್ನತೆಯ ಲಕ್ಷಣಗಳು ಸಹ ಹೆಚ್ಚಾಗುತ್ತವೆ.
ತೂಕ ಹೆಚ್ಚಳ: ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ತೂಕ ನಷ್ಟಕ್ಕಿಂತ, ಅನಾರೋಗ್ಯಕರ ತೂಕವೇ ಹೆಚ್ಚಾಗುವ ಅಪಾಯವಿದೆ. ಉಪಾಹಾರದ ಅನುಪಸ್ಥಿತಿಯಲ್ಲಿ, ನಾವು ಸಾಮಾನ್ಯವಾಗಿ ಊಟದ ಸಮಯದಲ್ಲಿ ಅತಿಯಾಗಿ ತಿನ್ನುತ್ತೇವೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.
ಮೆಟಾಬಾಲಿಕ್ ಸಿಂಡ್ರೋಮ್: ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು ಮೆಟಬಾಲಿಕ್ ಸಿಂಡ್ರೋಮ್ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಹೃದ್ರೋಗದ ಅಪಾಯ: ಬೆಳಗಿನ ಉಪಾಹಾರ ಸೇವಿಸದವರಿಗೆ ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯ ಹೆಚ್ಚು. ಆದ್ದರಿಂದ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಬೆಳಗಿನ ಉಪಾಹಾರವನ್ನು ಮರೆಯಬೇಡಿ.
ಟೈಪ್ 2 ಮಧುಮೇಹ: ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ದೇಹದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿರುವುದಿಲ್ಲ. ಇದು ಮಧುಮೇಹದ ಅಪಾಯಕ್ಕೆ ಕಾರಣವಾಗುತ್ತದೆ.