ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. ೦೭ ಭಗವತಿಯನ್ನು ಯಾರು ಆರಾಧನೆ ಮಾಡುತ್ತಾರೊ, ಅವರಿಗೆ ಏನ್ನೇಲಾ ಸಂಪತ್ತು, ಆರೋಗ್ಯ ಐಶ್ವರ್ಯ, ಧನ ಕನಕಗಳು
ಲಭ್ಯವಾಗುತ್ತವೆ, ನಿಶ್ಚಲವಾದ ಮನಸ್ಸಿನಿಂದ ದೇವಿಯ ಆರಾಧನೆಯನ್ನು ಮಾಡುವುದರ ಮೂಲಕ ಆಕೆಯನ್ನು ಬಲಿಸಿಕೊಳ್ಳಬಹುದಾಗಿದೆ
ಎಂದು ನಗರದ ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ರೀ ಕಬೀರಾನಂದಾಶ್ರಮದ ಶ್ರೀ ಭಗವತಿ ಬಗಳಾಂಬಿಕಾದೇವಿಯ ದೇವಸ್ಥಾನದ
ಆವರಣದಲ್ಲಿ ಸೋಮವಾರ ನಡೆದ ಚಂಡಿಕಾ ಹೋಮದ ಪೂರ್ಣಾಹುತಿಯನ್ನು ನೀಡಿ ಮಾತನಾಡಿದ ಶ್ರೀಗಳು, ಭಗವತಿಯ ಆರಾಧನೆ
ಎಲ್ಲದಕ್ಕಿಂತಲೂ ಶ್ರೇಷ್ಠವಾದದು, ಇಂದಿನ ದಿನಮಾನದಲ್ಲಿ ತಪ್ಪುಗಳನ್ನು ಮಾಡದವರು ಯಾರೂ ಇಲ್ಲ, ಈ ತಪ್ಪುಗಳನ್ನು ಮನ್ನಿಸಿ
ನಮ್ಮನ್ನು ಸರಿ ದಾರಿಗೆ ಕರೆದುಕೊಂಡು ಹೋಗುವವಳು ತಾಯಿಯಾಗಿದ್ದಾಳೆ. ಅವಳು ಜಗತ್ತಿಗೆ ಶಕ್ತಿಯಾಗಿದ್ದಾಳೆ. ಶಕ್ತಿಗೆ ಹೆಣ್ಣು
ರೂಪವನ್ನು ನೀಡುವುದರ ಮೂಲಕ ಭಗವಂತ ಸೃಷ್ಟಿ ಮಾಡಿದ್ದಾನೆ. ಮನಸ್ಸಿಗೆ ಯಾವುದೇ ಲಿಂಗ ಬೇಧ ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ
ಭಗವತಿಗೆ ರೂಪವನ್ನು ನೀಡಬೇಕಿತ್ತು ಈ ಹಿನ್ನಲೆಯಲ್ಲಿ ಹೆಣ್ಣು ರೂಪವನ್ನು ನೀಡಿ ಆರಾಧನೆಯನ್ನು ಮಾಡಲಾಗುತ್ತಿದೆ ಎಂದರು.
ವಿಜಯದಶಮಿಯಿಂದ ಕಳೆದ ಐದು ದಿನಗಳ ಕಾಲ ರ್ನಿಭಿಗ್ನವಾಗಿ ಚಂಡಿಕಾಯಾಗವನ್ನು ನಡೆಸಲಾಗುತ್ತಿದ್ದು ಇಂದು ಅದನ್ನು ಪೂರ್ಣ
ಮಾಡಲಾಗಿದೆ. ಚೈತನ್ಯಕ್ಕೆ ಯಾವುದೆ ಲಿಂಗದ ಭೇದ ಇಲ್ಲ ಅದು ಅಗೋಚರವಾಗಿ ಎಲ್ಲರನ್ನು ಕಾಪಾಡುವ ಶಕ್ತಿಯಾಗಿದೆ. ಅದನ್ನು
ಆಹ್ವಾನಿಸಿ ಪೂಜೆ ಮಾಡುವುದರ ಮೂಲಕ ಭಗವಂತನ ಆರಾಧನೆಯನ್ನು ಮಾಡಬೇಕಿದೆ. ಈ ನವರಾತ್ರಿ ಸಮಯದಲ್ಲಿ ಭಗವತಿಯ
ಆರಾಧನೆ ಅತಿ ಶ್ರೇಷ್ಠವಾಗಿದೆ. ನಮ್ಮ ಸಂಸ್ಕೃತ ಪಾಠ ಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ನಮ್ಮ ಮಠದ ಅರ್ಚಕರಾಗಿ ಸುಬ್ರಾರಾಯ್
ಭಟ್ಟರು ಕೆಲಸವನ್ನು ಮಾಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಒಬ್ಬ ಒಳ್ಳೆಯ ಪರೋಹಿತ, ಒಳ್ಳೆಯ ಶಿಕ್ಷಕ ಹಾಗೂ ಮಠಕ್ಕೆ ಒಳ್ಳೆಯ ಸ್ವಾಮಿ ಸಿಗುವುದು ಪುಣ್ಯದ ಕೆಲಸವಾಗಿದೆ. ಪುರೋಹಿತ ಎಂದರೆ
ಪುರದ ಹಿತವನ್ನು ಕಾಯುವವನು ಜನರಿಗೆ ಹಿತವನ್ನು ಭಯಸುವವನು ಪರೋಹಿತ ಎನ್ನಲಾಗುತ್ತಿದೆ ಆದರೆ ಇಂದಿನ ದಿನಮಾನದಲ್ಲಿ ಇದಕ್ಕೆ
ಬೇರೆ ರೀತಿಯ ಅರ್ಥವನ್ನು ನೀಡಲಾಗುತ್ತಿದೆ ಎಂದ ಶ್ರೀಗಳು, ನಮ್ಮ ಆಶ್ರಮದಲ್ಲಿ ಹಲವಾರು ವರ್ಷಗಳಿಂದ ದೇವಿಯ ಆರಾಧನೆ ಕಾರ್ಯ
ನಡೆಯುತ್ತಿದೆ. ನಾನು ೭ನೇ ತರಗತಿಯಿಂದಲೂ ದೇವಿಯ ಪುರಾಣವನ್ನು ಅಭ್ಯಾಸ ಮಾಡುತ್ತಾ ಬಂದಿದ್ದೇನೆ, ಎಂದ ಸ್ವಾಮೀಜಿಯವರು,
ನಮ್ಮ ನಾಡಿನಲ್ಲಿ ಹಲವಾರು ಜನತೆ ದೇವಿಯನ್ನು ಆರಾಧನೆ ಮಾಡುವುದರ ಮೂಲಕ ಆಕೆಯ ಕೃಪಾಕಟಾಕ್ಷಕ್ಕೆ ಬಳಗಾಗಿದ್ದರು ಇದರಿಂದ
ಹಲವಾರು ಪವಾಡಗಳನ್ನು ಸಹಾ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅರ್ಚಕರಾಗಿ ಸುಬ್ರಾರಾಯ್ ಭಟ್ಟರು ಚಂಡಿಕಾ ಯಾಗವನ್ನು ನೇರವೇರಿಸಿ ಕೊಟ್ಟರು. ಈ ಸಮಯದಲ್ಲಿ ಗಣಪತಿ
ಶಾಸ್ತ್ರಿ, ತಿಪ್ಪೇಸ್ವಾಮಿ, ಸೇರಿದಂತೆ ಇತರರು ಭಾಗವಹಿಸಿದ್ದರು.