
ಮಹಾರಾಷ್ಟ್ರದ 13 ವರ್ಷದ ಉದಯೋನ್ಮುಖ ಕ್ರಿಕೆಟರ್ (Maharashtra cricketer) 178 ಎಸೆತಗಳಲ್ಲಿ ಔಟಾಗದೇ 508 ರನ್ ಗಳಿಸುವ ಮೂಲಕ ರಾಷ್ಟ್ರೀಯ ದಾಖಲೆಯೊಂದನ್ನು ಮುರಿದಿದ್ದಾರೆ. ಜೊತೆಗೆ ಕ್ರಿಕೆಟ್9 cricket) ಇತಿಹಾಸದಲ್ಲೇ 500ಕ್ಕೂ ಹೆಚ್ಚು ರನ್ ಗಳಿಸಿದ 10ನೇ ಬ್ಯಾಟ್ಸ್ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೌದು.. ಮುಂಬೈ ಇಂಡಿಯನ್ಸ್‌ನ (Mumbai Indians) ಕಿರಿಯರ ಅಂತರ್ ಶಾಲಾ (14 ವರ್ಷದೊಳಗಿನವರ) ಕ್ರಿಕೆಟ್ ಕಪ್ ಟೂರ್ನಿ ಶುಕ್ರವಾರ ನಾಗ್ಪುರದ ‘ಜುಲೇಲಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಸರಸ್ವತಿ ವಿದ್ಯಾಲಯದ 13 ವರ್ಷದ ಯಶ್ ಚಾವ್ಡೆ, ಸಿದ್ಧೇಶ್ವರ ವಿದ್ಯಾಲಯದ ವಿರುದ್ಧ 81 ಬೌಂಡರಿಗಳು ಮತ್ತು 18 ಸಿಕ್ಸರ್‌ಗಳ ನೆರವಿನೊಂದಿಗೆ ಅಜೇಯ 508 ರನ್ ಬಾರಿಸಿ ಗಮನ ಸೆಳೆದರು. ಅಲ್ಲದೇ ಅಂತರ್ ಶಾಲಾ ಕ್ರಿಕೆಟ್‌ನಲ್ಲಿ ಸೀಮಿತ ಓವರ್‌ಗಳಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿ ದಾಖಲೆ ಬರೆದರು.
ಅಲ್ಲದೇ ಸಹ ಆಟಗಾರ ತಿಲಕ್ ವಾಕೋಡೆ (97 ಎಸೆತಗಳಲ್ಲಿ 127) ಅವರೊಂದಿಗೆ ಜತೆಗೂಡಿ ಚಾವ್ಡೆ 40 ಓವರ್‌ಗಳಲ್ಲಿ 714 ರನ್ ಗಳಿಸುವ ಮೂಲಕ ಅತ್ಯಧಿಕ ಜೊತೆಯಾಟದ ದಾಖಲೆಯನ್ನೂ ಸಹ ಮುರಿದರು.
ಅಂತರ್ ಶಾಲಾ ಪಂದ್ಯದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಚಾವ್ಡೆ ಸೇರಿದ್ದಾರೆ. ಅತಿ ಹೆಚ್ಚು ರನ್ ಪೇರಿಸಿದ ಭಾರತೀಯರ ಮೊದಲ ಮೂರು ಸ್ಥಾನಗಳಲ್ಲಿ ಪ್ರಣವ್ ಧನವಾಡೆ (ಅಜೇಯ 1009), ಪ್ರಿಯಾಂಶು ಮೊಲಿಯಾ (ಅಜೇಯ 556), ಪೃಥ್ವಿ ಶಾ (546) ಮತ್ತು ಡ್ಯಾಡಿ ಹವೇವಾಲಾ (515) ಅವರಿದ್ದಾರೆ. ಇದೀಗ ಚಾವ್ಡೆ ಅಜೇಯ 508 ರನ್ ಸಿಡಿಸುವ ಮೂಲಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಚಾವ್ಡೆ ಪಾತ್ರರಾಗಿದ್ದಾರೆ. 2022ರ ಆಗಸ್ಟ್‌ನಲ್ಲಿ ನಡೆದ 15 ವರ್ಷದೊಳಗಿನವರ ಅಂತರ್ ಶಾಲಾ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಬ್ಯಾಟ್ಸ್ಮನ್ ಚಿರತ್ ಸೆಲ್ಲೆಪೆರುಮಾ ಎನ್ನುವರು 553 ರನ್ ಗಳಿಸಿದ್ದರು.
ಯಶ್ ಚಾವ್ಡೆ ಎರಡು ಶತಕಗಳ ಜೊತೆಗೆ 1000 ರನ್ ಗಳಿಸುವ ಮೂಲಕ ಈ ಋತುವಿನ U-16 VCA ಟೂರ್ನಿಯ ಸ್ಟಾರ್ ಆಟಗಾರ ಆಗಿದ್ದಾರೆ. ಇನ್ನು ಯಶ್ ಚಾವ್ಡೆ ಆಟದ ವೈಖರಿಯನ್ನು ಮುಂಬೈ ಇಂಡಿಯನ್ಸ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ.
Yash Chawde
5⃣0⃣8⃣* (178)
Paltan, yes you read it right! Yash from Saraswati Vidyalaya, Nagpur bagged this mammoth score in the U14 category of #MIJunior
Here are some more
of our prodigies from the tournament
#OneFamily #DilKholKe #MumbaiIndians pic.twitter.com/2npBWAprZ6
— Mumbai Indians (@mipaltan) January 13, 2023
ಇನ್ನಷ್ಟು ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ