ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 25 ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾನೂನು ರೀತಿಯಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಂದು ನಗರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ವತಿಯಿಂದ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಡಳಿತಕ್ಕ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗದ ಡಾನ್ಬಾಸ್ಕೋ ಕಾಲೇಜಿನಲ್ಲಿ ಪ್ರೇಮ ಎಂಬ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇವರಿಗೆ ಕಾನೂನು
ರೀತಿಯಲ್ಲಿ ಸೂಕ್ತ ತನಿಖೆ ಮುಖಾಂತರ ನ್ಯಾಯ ಒದಗಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಭಾಗ ಸಹ ಸಂಚಾಲಕರು ಗೋಪಿ, ಜಿಲ್ಲಾ ಸಂಚಾಲಕರು ಕನಕರಾಜ್ ಕೋಡಿಹಳ್ಳಿ, ನಗರ ಸಹ ಕಾರ್ಯದರ್ಶಿ
ಸಂಜಯ್, ಚಂದನ, ಮನೋಜ್, ಸಾಮಾಜಿಕ ಜಾಲತಾಣ ಪ್ರಮುಖ್ ಆದರ್ಶ ಮಾರನಬಸರಿ, ಕಾರ್ಯಕರ್ತರು, ತಿಪ್ಪೇಶ್, ರಾಜು
ಹೊನ್ನಮರಡಿ, ಚಂದ್ರಕಲಾ, ಜೀವನ, ಧನಂಜಯ್, ರಘು, ಕಿರಣ್, ಹೇಮಂತ್ ಇನ್ನು ಇತರರು ಭಾಗವಹಿಸಿದ್ದರು