ಚಿತ್ರದುರ್ಗ : ಡೆತ್ ನೋಟ್ ಬರೆದಿಟ್ಟು ಅಡಿಕೆ ವ್ಯಾಪಾರಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗದ ಸಿದ್ದಾಪುರ ಬಳಿ ನಡೆದಿದೆ. ಸಿದ್ದಾಪುರ ಸಮೀಪದಲ್ಲಿರುವ ಗೋದಾಮಿನಲ್ಲಿ ಶೈಲೇಶ್ (45) ಎನ್ನುವ ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಡೆತ್ ನೋಟ್ ನಲ್ಲಿ ಉಲ್ಲೆಖಿಸಿರುವ ಶೈಲೇಶ್, ಅಡಿಕೆ ವರ್ತಕ ಉದಯ ಶೆಟ್ಟಿ ವಿರುದ್ಧ ವಂಚನೆ ಹಾಗೂ ನಿಂದನೆ ಆರೋಪ ಮಾಡಿದ್ದಾರೆ. ವ್ಯಾಪಾರಿ ಶೈಲೇಶ್ ಬಳಿ ಉದಯಶೆಟ್ಟಿ ಅಡಿಕೆಯನ್ನು ಖರೀದಿಸಿದ್ದರು. ಸುಮಾರು 6.60 ಕೋಟಿ ಮೌಲ್ಯದ ಅಡಿಕೆಯನ್ನು ಉದಯಶಟ್ಟಿ ಶೈಲೇಶ್ ಬಳಿ ಖರೀದಿಸಿದ್ದರು.
ಅಡಿಕೆ ಖರೀದಿ ಮಾಡಿದ್ದರ ಹಣ ಕೇಳಲು ಹೋದಾಗ ಉದಯಶೆಟ್ಟಿ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಶೈಲೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಉದಯಶೆಟ್ಟಿ ಕಾರಣ ಎಂದು ಡೆತ್ ನೋಟ್ ನಲ್ಲಿ ಹೆಸರು ಉಲ್ಲೆಖಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.