ರಾಮಾಯಣದ ಮೌಲ್ಯಗಳು ಇಂದಿನ ಬದುಕಿಗೆ ದಾರಿದೀಪ: ಶಾಂತಾ ಗೋಪಾಲ್ | ಚಿತ್ರದುರ್ಗದಲ್ಲಿ ವಿಶೇಷ ಉಪನ್ಯಾಸ.

ಚಿತ್ರದುರ್ಗ ನ. 12

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಯುವ ಸಮುದಾಯವು ಇಂದಿಗೂ ಪ್ರಾಚೀನ ಕಾವ್ಯಗಳನ್ನು ಹೊಸ ಸಮಸ್ಯೆಗಳ ದೃಷ್ಟಿಕೋನದಿಂದ ಹಾಗೂ ಅದರ ಮೂಲದಿಂದ ನೋಡಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ರಾಮಾಯಣ ಮಹಾಕಾವ್ಯವು ಯಾವುದೇ ಒಂದು ಜಾತಿ, ವರ್ಗ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲದೆ, ಅದು ದೇಶದ ಸಾಂಸ್ಕೃತಿಕ ಮೂಲವಾಗಿದೆ ಎಂದು ವಿದ್ವಾಂಸರು ಮತ್ತು ವ್ಯಾಖ್ಯಾನಕಾರರಾದ ಶ್ರೀಮತಿ ಶಾಂತಾ ಗೋಪಾಲ್ ತಿಳಿಸಿದರು.

ಸಂಸ್ಕಾರ ಭಾರತೀ, ಕರ್ನಾಟಕ ದಕ್ಷಿಣ ಪ್ರಾಂತ ಸಾಹಿತ್ಯ ವಿಭಾಗ ಸಂಸ್ಕಾರ ಭಾರತೀ, ಚಿತ್ರದುರ್ಗ ಜಿಲ್ಲಾ ಸಮಿತಿ ಮತ್ತು ಎಸ್.ಆರ್.ಎಸ್ ಬಿ.ಎಡ್. ಮಹಾವಿದ್ಯಾಲಯ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಎಸ್ ಆರ್.ಎಸ್.ಬಿಎಡ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆದಿಕವಿ, ರಸಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀಮದ್ ರಾಮಾಯಣದ ಪ್ರಸ್ತುತತೆ: ಅಂದು – ಇಂದು ವಿಶೇಷ ಭಾಷಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಧುನಿಕ ಯುಗದಲ್ಲೂ ಕೂಡ ರಾಮಾಯಣ ಮತ್ತು ಮಹಾಭಾರತದಂತಹ ರಾಷ್ಟ್ರೀಯ ಮಹಾಕಾವ್ಯಗಳು ನಮ್ಮ ಬದುಕಿಗೆ ಹೇಗೆ ದಾರಿದೀಪವಾಗಿವೆ ಹಾಗೂ ಇಂದಿನ ಯುವ ಪೀಳಿಗೆಗೆ ಅವುಗಳ ಮಹತ್ವವೇನು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಮಾತನಾಡಿದ ಅವರು, ಇಂದಿನ ಅಧುನಿಕ ಬದುಕಿನಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಮೌಲ್ಯಗಳನ್ನು ಬಿತ್ತುವಲ್ಲಿ ಈ ಮಹಾಕಾವ್ಯಗಳ ಪಾತ್ರ ಹಿರಿದಾಗಿದೆ. ರಾಮನು ಸೀತೆಯನ್ನು ಕಾಡಿಗೆ ಕಳುಹಿಸುವುದು ಮತ್ತು ಆಕೆಯನ್ನು ತ್ಯಾಗ ಮಾಡುವುದು ರಾಜಧರ್ಮದ ಅಡಿಯಲ್ಲಿ ಬರುತ್ತದೆ ಆದರೆ ವೈಯಕ್ತಿಕವಾಗಿ ನೋಡಿದಾಗ ಇದು ಅನ್ಯಾಯವೆನಿಸಿದರೂ, ಸಮಗ್ರ ಸಮಾಜದ ಹಿತದೃಷ್ಟಿಯಿಂದ ರಾಜಧರ್ಮವು ವಿಭಿನ್ನವಾಗಿರುತ್ತದೆ ಎಂದರು.

ರಾಮಾಯಣ ಹಾಗೂ ಮಹಾಭಾರತಗಳು ಕೇವಲ ಧಾರ್ಮಿಕ ಗ್ರಂಥಗಳಲ್ಲದೆ, ಭಾರತೀಯ ಸಂಸ್ಕೃತಿಯ ಸಾರ್ವಕಾಲಿಕ ಧ್ವನಿಯಾಗಿವೆ. ಅವುಗಳು ಕಾವ್ಯಗಳ ಸಾರ್ವಕಾಲಿಕ ಪ್ರಸ್ತುತವಾಗಿವೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಕೇವಲ ಹಿಂದಿನ ಕಾಲದ ಕಥೆಗಳಲ್ಲದೆ, ಇಂದಿನ ಆಧುನಿಕ ಬದುಕಿಗೂ ನೈತಿಕತೆ ಮತ್ತು ಮಾರ್ಗದರ್ಶನ ನೀಡುವ ಮಹಾನ್ ಗ್ರಂಥಗಳಾಗಿವೆ. ಇವುಗಳನ್ನು ಕೇವಲ ಸಾಹಿತ್ಯಿಕ ದೃಷ್ಟಿಯಿಂದ ನೋಡದೆ, ಜೀವನದ ಮೌಲ್ಯಗಳ ರೂಪದಲ್ಲಿ ಅಳವಡಿಸಿಕೊಳ್ಳಬೇಕು ಜೀವನದಲ್ಲಿ ಎದುರಾಗುವ ಸಕಲ ಕಷ್ಟಗಳು, ಸಂಕಷ್ಟಗಳು ಹಾಗೂ ಪರೀಕ್ಷೆಗಳನ್ನು ಎದುರಿಸಿ ಮರ್ಯಾದಾ ಪುರುಷೋತ್ತಮನ ಮಟ್ಟಕ್ಕೆ ಏರಲು ರಾಮಾಯಣ ಮಹಾಕಾವ್ಯವೇ ನಮಗೆ ಆದರ್ಶಅಂದರೆ ರಾಮಾಯಣವನ್ನು ಓದಿ ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಮಹಾಕಾವ್ಯಗಳು ತಿಳಿಸಿ ಕೊಡುತ್ತವೆ ಪ್ರತಿಯೊಬ್ಬರ ನಡುವೆ ಇರಬೇಕಾದ ಪಾತ್ರಗಳ ಪ್ರೇಮವನ್ನು ನಾವು ಗಮನಿಸಬೇಕು. ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಎಲ್ಲರೂ ದೊಡ್ಡವರು ಮಾಡಿದ ತಪ್ಪನ್ನು ತಿದ್ದಿಕೊಂಡು ಎಲ್ಲಿಯೂ ದ್ವೇಷವನ್ನು ಬೆಳೆಯಲು ಬಿಡಲಿಲ್ಲ. ರಾಮನು ಅತ್ಯಂತ ಜನಪ್ರಿಯನಾಗಿದ್ದನು ರಾಮಾಯಣ ಮತ್ತು ಮಹಾಭಾರತ ಕೇವಲ ಕಾವ್ಯಗಳಲ್ಲ, ಅವು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ನಮಗೆ ಮಾರ್ಗದರ್ಶನ ನೀಡುವ ಮೌಲ್ಯಯುತ ಗ್ರಂಥಗಳಾಗಿವೆ. ವ್ಯಕ್ತಿಯು ತನ್ನ ಜೀವನದಲ್ಲಿ ಹಿರಿಯರ ಮಾರ್ಗದರ್ಶನವನ್ನು ಪಡೆದು, ದ್ವೇಷ-ಅಸೂಯೆಗಳನ್ನು ತೊರೆದು ಧರ್ಮದ ಹಾದಿಯಲ್ಲಿ ಸಾಗುವುದೇ ಜೀವನದ ಸಾರ್ಥಕತೆ ಎಂದು ತಿಳಿಸಿದರು.

ಸಾಹಿತ್ಯ ವಿಭಾಗ ಪ್ರಮುಖರು, ದಕ್ಷಿಣ ಪ್ರಾಂತ ಸಂಸ್ಕಾರ ಭಾರತೀ ಕರ್ನಾಟಕ ಸಂಚಾಲಕರಾದ ಡಾ.ಕೆ.ರಾಜೀವಲೋಚನ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವನ್ನು ತಡೆಗಟ್ಟಿ, ಮನುಷ್ಯತ್ವವನ್ನು ಹಾಗೂ ಕುಟುಂಬ ವ್ಯವಸ್ಥೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಪಠಣ ಅತ್ಯಂತ ಪ್ರಮುಖ ಹಾಗೂ ಪುಣ್ಯದಾಯಕ ಕಾರ್ಯವಾಗಿದೆ. ದೇಶದ ಸಂಸ್ಕೃತಿ ಮತ್ತು ನೆಲೆಗಟ್ಟು ಮಹಾಕಾವ್ಯಗಳ ಮೇಲೆ ನಿಂತಿದ್ದು, ಸಮಾಜವು ರಾಮಾಯಣ ಹಾಗೂ ಮಹಾಭಾರತದ ಆದರ್ಶಗಳ ಅನ್ವಯ ರೂಪುಗೊಳ್ಳಬೇಕು, ಭಾರತೀಯ ಕಲೆಗಳು ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 1993ರಲ್ಲಿ ಲಕ್ನೋದಲ್ಲಿ ಸಂಸ್ಕಾರ ಭಾರತಿ ಸಂಘಟನೆ ಆರಂಭವಾಯಿತು. ಸಾಹಿತ್ಯ, ಸಂಗೀತ, ನೃತ್ಯ, ಜಾನಪದ ಕಲೆ ಮತ್ತು ಶಿಲ್ಪಕಲೆ ಮುಂತಾದ ಮೂಲ ಕಲೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಈ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಸಾಹಿತ್ಯ ವಿಭಾಗದ ವತಿಯಿಂದ ಕಳೆದ ಒಂದು ವರ್ಷದಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಪ್ರಮುಖ ಸಾಹಿತಿಗಳ ಕುರಿತು ಅಂತರ್ಜಾಲ ಮಾಧ್ಯಮದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಡಾ. ಎಸ್.ಎಲ್. ಬೈರಪ್ಪ ಅವರ ಕೃತಿಗಳನ್ನು ಆಧರಿಸಿ ಪ್ರತಿ ತಿಂಗಳು ಮಾಸಿಕ ಉಪನ್ಯಾಸ ಮಾಲಿಕೆಯನ್ನು ಯಶಸ್ವಾಗಿ ನಡೆಸಿಕೊಡಲಾಗಿದೆ.

ಇಂದಿನ ಆಧುನಿಕ ಸಮಾಜದಲ್ಲಿ ಪಾಶ್ಚಿಮಾತ್ಯ ಚಿಂತನೆಗಳು ಆವರಿಸಿಕೊಳ್ಳುತ್ತಿರುವುದರಿಂದ ಮಾನವೀಯ ಮೌಲ್ಯಗಳು ಮತ್ತು ಕುಟುಂಬ ವ್ಯವಸ್ಥೆಯು ಒಡೆದು ಹೋಗುತ್ತಿದೆ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವ ವಾತಾವರಣವೂ ಮಾಯವಾಗುತ್ತಿದ್ದು, ಈ ಭೀಕರ ಸನ್ನಿವೇಶವನ್ನು ಎದುರಿಸಲು ವಾಲ್ಮೀಕಿ ರಾಮಾಯಣದ ಆದರ್ಶಗಳು ಅತ್ಯಗತ್ಯವಾಗಿವೆ ಇಂದಿನ ಯುವ ಜನಾಂಗ ಹಾಗೂ ಸಮಾಜದಲ್ಲಿ ನೈತಿಕತೆ ಮತ್ತು ಕುಟುಂಬ ಮೌಲ್ಯಗಳನ್ನು ಗಟ್ಟಿಗೊಳಿಸುವ ಸದುದ್ದೇಶದಿಂದ, ಸಾಹಿತ್ಯ ವಿಭಾಗದ ಮೂಲಕ ಮಹರ್ಷಿ ವಾಲ್ಮೀಕಿ ರಾಮಾಯಣದ ಸೌಂದರ್ಯ ಹಾಗೂ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಬೃಹತ್ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ಉದ್ಘಾಟನೆಯನ್ನು ನೇರವೇರಿಸಿದ ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ತಮ್ಮ ಆರ್ಶೀವಚನದಲ್ಲಿ ಮಹರ್ಷಿ ವಾಲ್ಮೀಕಿ ಅವರು ತಮ್ಮ ತಪಶ್ಶಕ್ತಿ ಮತ್ತು ರಾಮಾಯಣ ಮಹಾಕಾವ್ಯದ ರಚನೆಯ ಮೂಲಕ ಲೋಕಕ್ಕೆ ಮಾದರಿಯಾಗಿದ್ದಾರೆ. ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಬರುವ ಕಷ್ಟ-ನಷ್ಟಗಳನ್ನು ಎದುರಿಸಿ, ಸನ್ಮಾರ್ಗದಲ್ಲಿ ನಡೆದು ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕಿದೆ. ವಾಲ್ಮೀಕಿ ಮಹರ್ಷಿಗಳು ಮೂಲತಃ ಸಾಮಾನ್ಯ ವ್ಯಕ್ತಿಯಾಗಿದ್ದರೂ, ಅವರಲ್ಲಿ ಅಪಾರವಾದ ತಪಶಕ್ತಿ ಇತ್ತು ಸಾಧುಗಳು ಅಂದರೆ ತಪಸ್ವಿಗಳು ತಪಸ್ವಿಗಳು ಅತ್ಯಂತ ದೊಡ್ಡದಾಗಿ ಆಭೂಷಣಗಳಿಂದ ಭೂಷಿತರಾಗಿರುವುದಕ್ಕಿಂತ ಹೆಚ್ಚಾಗಿ ವಿದ್ಯಾಭೂಷಣರಾಗಿರುತ್ತಾರೆ. ಮನುಷ್ಯನಿಗೆ ಕಾಡುವ ಜನ್ಮ ದುಃಖ, ಜರಾ ದುಃಖ ಮುಂತಾದ ಮಾನಸಿಕ ವೇದನೆಗಳನ್ನು ನೀಗಿಸಲು ರಾಮನಾಮ ಸ್ಮರಣೆಯೇ ದಿವ್ಯೌಷಧವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಆರ್.ಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ರವಿ.ಟಿ.ಎಸ್. ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತದ ಮಾತೃಶಕ್ತಿ ವಿಭಾಗದ ಸಹಪ್ರಮುಖಶ್ರೀಮತಿ ವರಲಕ್ಷ್ಮೀ ಎಚ್.ಎನ್., ಎಸ್.ಆರ್.ಎಸ್. ಬಿ.ಎಡ್., ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಹನುಮಂತಪ್ಪ, ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ಭಾಗವಹಿಸಿದ್ದರು.

ಸಂಸ್ಕಾರ ಭಾರತಿಯ ಕಾರ್ಯದರ್ಶಿ ಗುರುರಾಜ್ ಪ್ರಾರ್ಥಿಸಿದರು ಸಂಸ್ಕಾರ ಭಾರತೀಯ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ವಿಭಾಗದ ಸಂಚಾಲಕರಾದ ಶ್ರೀಮತಿ ಚಂದ್ರಿಕಾ ಸುರೇಶ್ ಸ್ವಾಗತಿಸಿದರು. ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಗೌರಮ್ಮ ವಂದಿಸಿದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *