ಚಲಿಸುತ್ತಿದ್ದ ಕಾರೊಂದು ಕೆರೆಗೆ ಬಿದ್ದ ಪರಿಣಾಮ, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬೊಮ್ಮನಕಟ್ಟೆ ಕೆರೆಯಲ್ಲಿ ನಡೆದಿದೆ. ಮೃತರನ್ನು ಹೊಳಲ್ಕೆರೆ ತಾಲೂಕಿನ ತಾಳ್ಯ ನಿವಾಸಿಗಳಾದ ಅನಿತಾ ಹಾಗೂ ರತ್ನಮ್ಮ ಎಂದು ಗುರುತಿಸಲಾಗಿದೆ. ಹೊಸದುರ್ಗ – ಹೊಳಲ್ಕೆರೆ ನಡುವೆ ಪ್ರಯಾಣಿಸುತ್ತಿದ್ದಾಗ ಬೊಮ್ಮನಕಟ್ಟೆ ಕೆರೆಯ ಏರಿ ಮೇಲೆ ಸಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿದೆ.
- ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
- ಹೊಸದುರ್ಗ ಹೊಳಲ್ಕೆರೆ ನಡುವೆ ಬರುವ ಬೊಮ್ಮನಕಟ್ಟೆ ಕೆರೆಯಲ್ಲಿ ನಡೆದ ದುರ್ಘಟನೆ.
- ಕೆರೆಯ ಏರಿ ಮೇಲೆ ಕಾರು ಹೋಗುವಾಗ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು.
- ಅನಿತಾ, ರತ್ನಮ್ಮ ಎಂಬುವರು ಮೃತಪಟ್ಟಿದ್ದು, ಮೃತರನ್ನು ತಾಳ್ಯ ನಿವಾಸಿಗಳೆಂದು ಗುರುತು.

ಚಿತ್ರದುರ್ಗ: ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕೆರೆಯೊಳಗೆ ಬಿದ್ದು ಇಬ್ಬರು ಸಾವನಪ್ಪಿದ ಘಟನೆ ಬೊಮ್ಮನಕಟ್ಟೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ನಿವಾಸಿಗಳಾದ ಅನಿತಾ (30) ಮತ್ತು ರತ್ನಮ್ಮ (55) ಎಂದು ಗುರುತಿಸಲಾಗಿದೆ.
ಹೊಸದುರ್ಗದಿಂದ ಹೊಳಲ್ಕೆರೆ ಕಡೆ ಬರುವಾಗ ಕಾರಿನ ಚಾಲಕ ಮಂಜುನಾಥ್ ಎನ್ನುವರು ಕಾರು ಚಲಾಯಿಸುತ್ತಿರುವಾಗ ಬೊಮ್ಮನಕಟ್ಟೆ ಕೆರೆ ಏರಿ ಮೇಲೆ ಬರುವಾಗ ನಿಯಂತ್ರಣ ಕಳೆದುಕೊಂಡ ಕೆರೆಯೊಳಗೆ ಬಿದ್ದಿದೆ. ನೀರಿನೊಳಗೆ ಇಬ್ಬರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
Views: 0