ಯೋಗ ಮ್ಯಾಟ್ ಹಾಕಿಕೊಂಡು ಕುಳಿತು ಯೋಗ ಮಾಡುತ್ತಿದ್ದಾಗ ಏಕಾಏಕಿ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಿದೆ. ಒಂದು ದೊಡ್ಡ ಅಲೆಯು ನಟಿಯನ್ನ ಸಮುದ್ರಕ್ಕೆ ಎಳೆದುಕೊಂಡು ಹೋಗಿದೆ.

ಸಾವು ಹೇಗೆ ಬರುತ್ತೆ ಅನ್ನೋದನ್ನು ಊಹೆ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ಕಡಲ ತೀರದಲ್ಲಿ ಕುಳಿತು ಯೋಗ ಮಾಡಲು ಹೋದ ನಟಿ (Actress) ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಚಿತ್ರರಂಗದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, 24 ವರ್ಷದ ಯುವ ನಟಿ ಸಾವನ್ನಪ್ಪಿದ್ದಾರೆ. ಯೋಗ ಮಾಡಲು ಸಮುದ್ರ (Beach) ತೀರಕ್ಕೆ ಹೋಗಿದ್ದ ನಟಿ ಒಂದು ದೊಡ್ಡ ಬಂಡೆಯ ಮೇಲೆ ಕುಳಿತು ಯೋಗ (Yoga) ಮಾಡುತ್ತಿದ್ರು. ಇದೇ ವೇಳೆ ದೊಡ್ಡ ಅಲೆಯೊಂದು ನಟಿ ಮೇಲೆ ಅಪ್ಪಳಿಸಿದೆ. ನೀರನ ಜೊತೆಗೆ ನಟಿ ಕೊಚ್ಚಿ ಹೋಗಿ ಕಣ್ಮರೆಯಾದ್ರು. ನಟಿ ಅಲೆಯಲ್ಲಿ ಕೊಚ್ಚಿ ಹೋದ ವಿಡಿಯೋ ಕೂಡ ವೈರಲ್ (Video Viral) ಆಗ್ತಿದೆ.
ಯೋಗ ಮಾಡಲು ಹೋಗಿದ್ದ ನಟಿ!
ರಷ್ಯಾದ ನಟಿ ಕ್ಯಾಮಿಲ್ಲಾ ಬೆಲ್ಯಾಟ್ಸ್ಕಯಾ (24) ಇತ್ತೀಚೆಗೆ ತನ್ನ ಬಾಯ್ಫ್ರೆಂಡ್ ಜೊತೆ ಥಾಯ್ಲೆಂಡ್‌ನ ಪ್ರಸಿದ್ಧ ರೆಸಾರ್ಟ್ ಕೊಹ್ ಸಮುಯಿ ದ್ವೀಪಕ್ಕೆ ಹೋಗಿದ್ದರು. ಬೀಚ್‌ನಲ್ಲಿ ತನ್ನ ನೆಚ್ಚಿನ ಸ್ಥಳದಲ್ಲಿ ಯೋಗ ಮಾಡಲು ಅವಳು ತನ್ನ ಕಾರಿನಲ್ಲಿ ಒಬ್ಬಳೇ ಹೋದ್ರು. ಕ್ಯಾಮಿಲ್ಲಾ ಹಿಂದೆ ಹಲವು ಬಾರಿ ಅಲ್ಲಿಗೆ ಬಂದಿದ್ದಾರೆ.
ಅಲೆಯಲ್ಲೇ ಕೊಚ್ಚಿದ ನಟಿ!
ಆದ್ರೆ ಘಟನೆ ನಡೆದ ದಿನ ಸಮುದ್ರ ತೀರದ ಬಂಡೆಯ ಮೇಲೆ ಯೋಗ ಮ್ಯಾಟ್ ಹಾಕಿಕೊಂಡು ಕುಳಿತು ಯೋಗ ಮಾಡುತ್ತಿದ್ದಾಗ ಏಕಾಏಕಿ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಿದೆ. ಒಂದು ದೊಡ್ಡ ಅಲೆಯು ಕ್ಯಾಮಿಲ್ಲಾವನ್ನು ಸಮುದ್ರಕ್ಕೆ ಎಳೆದುಕೊಂಡು ಹೋಗಿದೆ. ಆಕೆ ಸಮುದ್ರದಲ್ಲಿ ಕಾಣೆಯಾದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.
https://twitter.com/vincent31473580/status/1863367392749129955
ದೂರದಲ್ಲಿ ನಟಿಯ ಮೃತದೇಹ ಪತ್ತೆ!
ಜಾಹೀರಾತು
ನಟಿ ಕೊಚ್ಚಿ ಹೋದ ಸುಮಾರು 15 ನಿಮಿಷಗಳ ನಂತರ ರಕ್ಷಣಾ ತಂಡ ಸ್ಥಳಕ್ಕೆ ದಾವಿಸಿದ. ಸಮುದ್ರದಲ್ಲಿ ಅಪಾಯಕಾರಿ ಅಲೆಗಳು ಎದ್ದಿದ್ದರಿಂದ ರಕ್ಷಣಾ ಕಾರ್ಯ ಸ್ಥಗಿತಗೊಂಡಿದೆ. ನಟಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ನಟಿಯ ದೇಹವು ಕೆಲವು ಕಿಲೋಮೀಟರ್ ದೂರದ ತೀರಕ್ಕೆ ಕೊಚ್ಚಿಕೊಂಡು ಹೋಗಿದೆ. ಪೊಲೀಸರು ಮೃತ ದೇಹವನ್ನು ಹೊರತೆಗೆದಿದ್ದಾರೆ. ಕ್ಯಾಮಿಲ್ಲಾ ಸಮುದ್ರದ ಬಳಿ ಅಳವಡಿಸಿದ್ದ ಸಿಸಿಟಿವಿ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?
ಮಳೆಗಾಲದಲ್ಲಿ ಪ್ರವಾಸಿಗರನ್ನು ನಿರಂತರವಾಗಿ ಎಚ್ಚರಿಸುತ್ತೇವೆ. ಇಲ್ಲಿ ಸ್ವಿಮ್ಮಿಂಗ್ಗೆ ಅವಕಾಶ ನೀಡಿಲ್ಲ. ನಟಿ ಸಾವನ್ನಪ್ಪಿದ ಸ್ಥಳವು ಹೆಚ್ಚು ಅಪಾಯಕಾರಿ, ಅನಿರೀಕ್ಷಿತ ಅಲೆಗಳ ಎದ್ದಿದ ಹಿನ್ನೆಲೆ ಈ ಅನಾಹುತ ಸಂಭವಿಸಿದೆ ಎಂದು ಕೇಂದ್ರದ ಅಧಿಕಾರಿ ಚೈಯಾಪೋರ್ನ್ ಸಬ್‌ಪ್ರೆಸರ್ಟ್ ಖೋಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದುರಂತದ ನಂತರ, ಸ್ಥಳೀಯ ಅಧಿಕಾರಿಗಳು ವ್ಯೂಪಾಯಿಂಟ್ ಕೆಳಗಿನ ಪ್ರದೇಶಕ್ಕೆ ಎಂಟ್ರಿ ಕ್ಲೋಸ್ ಮಾಡಿದ್ದಾರೆ.
ಕ್ಯಾಮಿಲ್ಲಾ ಈ ಹಿಂದೆ ಕ್ರ್ಯಾಶ್ ಸೈಟ್ ಭೂಮಿಯ ಮೇಲಿನ ಅತ್ಯುತ್ತಮ ಸ್ಥಳ ಎಂದು ಕರೆದಿದ್ರು. ಇದು ನಟಿಯ ನೆಚ್ಚಿನ ಸ್ಥಳವಾಗಿತ್ತು. ಅಲ್ಲಿಗೆ ಹಲವು ಬಾರಿ ನಟಿ ಬಂದು ಹೋಗಿದ್ರು. ಈ ದ್ವೀಪದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಾರಿ ಪೋಸ್ಟ್ ಮಾಡಿದ್ದಾರೆ. ‘ನಾನು ಸಮುಯಿ ದ್ವೀಪವನ್ನು ಪ್ರೀತಿಸುತ್ತೇನೆ. ಈ ಸ್ಥಳ, ಕಡಲತೀರದ ಬಂಡೆಗಳು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಸ್ಥಳವಾಗಿದೆ. ನಾನು ಇಲ್ಲಿಗೆ ಬಂದರೆ ನನಗೆ ತುಂಬಾ ಸಂತೋಷವಾಗುತ್ತದೆ’ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ರು. ಅಂತಿಮವಾಗಿ ಅವಳು ತನ್ನ ನೆಚ್ಚಿನ ಸ್ಥಳದಲ್ಲಿ ತನ್ನ ಮರಣವನ್ನು ತಲುಪಿದ್ರು.