ದೇಶ ತೊರೆಯುತ್ತಿದ್ದ ಸಿರಿಯಾ ಅಧ್ಯಕ್ಷನಿದ್ದ ವಿಮಾನ ಕಣ್ಮರೆ – ಕ್ಷಿಪಣಿ ದಾಳಿಗೆ ಪತನ?

ಡಮಾಸ್ಕಸ್‌: ಸಿರಿಯಾ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ (Bashar al-Assad) ಅವರಿದ್ದ ವಿಮಾನ ಪತನಗೊಂಡಿದ್ಯಾ ಹೀಗೊಂದು ದೊಡ್ಡ ಪ್ರಶ್ನೆ ಎದ್ದಿದೆ.

ಬಂಡುಕೋರರು ಸಿರಿಯಾ (Syria) ರಾಜಧಾನಿ ಡಮಾಸ್ಕಸ್‌ (Damascus) ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಬಶರ್‌ ಅಲ್‌ ಅಸ್ಸಾದ್‌ ಭಾನುವಾರ ಬೆಳಗ್ಗೆ ಸಿರಿಯಾವನ್ನು ತೊರೆದು ಅಜ್ಞಾತ ಸ್ಥಳದತ್ತ ತೆರಳಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಅವರಿದ್ದ ವಿಮಾನ (Plane) ಮಧ್ಯದಲ್ಲೇ ಪತನಗೊಂಡಿದೆ ಎಂದು ವರದಿಯಾಗುತ್ತಿದೆ.

ಡಮಾಸ್ಕಸ್‌ನಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವಾಗ ಅವರಿದ್ದ ವಿಮಾನ ಪತನಗೊಂಡಿರಬಹುದು ಅಥವಾ ಹೊಡೆದುರುಳಿಸಲ್ಪಟ್ಟಿರಬಹುದು ಎಂದು ವರದಿಯಾಗಿದೆ. ಇಲ್ಲಿಯವರೆಗೆ ಅಸ್ಸಾದ್‌ ವಿಮಾನ ಏನಾಯ್ತು ಎನ್ನುವುದರ ಬಗ್ಗೆ ಯಾರೂ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

Flightradar24.com ಮಾಹಿತಿಯ ಪ್ರಕಾರ ಸಿರಿಯನ್ ಏರ್ ಇಲ್ಯುಶಿನ್ Il-76T ವಿಮಾನ ಡಮಾಸ್ಕಸ್ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ. ವಿಮಾನವು ಆರಂಭದಲ್ಲಿ ಸಿರಿಯಾದ ಕರಾವಳಿ ಪ್ರದೇಶದ ಕಡೆಗೆ ಸಾಗುತ್ತಿತ್ತು. ದಾರಿ ಮಧ್ಯೆ ಅದು ವಿರುದ್ಧ ದಿಕ್ಕಿಗೆ ಸಾಗಿ ಕಣ್ಮರೆಯಾಗಿದೆ. 

ವಿಮಾನದ ಹಠಾತ್ ಕಣ್ಮರೆಯಾದ ಬೆನ್ನಲ್ಲೇ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕ್ಷಿಪಣಿ ದಾಳಿಯಿಂದ ವಿಮಾನ ಪತನಗೊಂಡಿರಬಹುದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲೆಬನಾನಿನ ವಾಯುಪ್ರದೇಶದ ಬಳಿ 3,650 ಮೀಟರ್‌ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ದಿಢೀರ್‌ 1,070 ಮೀಟರ್‌ಗೆ ಇಳಿದಿದೆ. ದಿಢೀರ್‌ ಇಳಿದಿದ್ದು ಮತ್ತು ಹಠಾತ್‌ ಕಣ್ಮರೆಯಾಗಿದ್ದನ್ನು ನೋಡಿದರೆ ವಿಮಾನವನ್ನು ಹೊಡೆದು ಉರುಳಿಸಿರಬಹುದು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

Source : https://publictv.in/syrian-president-bashar-al-assads-plane-shot-down-say-unconfirmed-reports

Leave a Reply

Your email address will not be published. Required fields are marked *