ಈ ಹಣ್ಣು ‌ತಿನ್ನಿ ಸಾಕು ಕನ್ನಡಕವೇ ಬೇಕಿಲ್ಲ.. ಎಷ್ಟೇ ಕಣ್ಣು ಮಂಜಾಗುತ್ತಿದ್ದರೂ ದೃಷ್ಟಿ ಶಾರ್ಪ್‌ ಆಗುತ್ತೆ! 60 ವರ್ಷ ಕಳೆದರೂ ಬರೋದಿಲ್ಲ ಪೊರೆ ಸಮಸ್ಯೆ.

Kiwi Fruit Benefits: ಕಿವಿ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕಿವಿ ಹಣ್ಣು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಸಿಗುತ್ತವೆ. ಪ್ರತಿದಿನ 1 ಕಿವಿ ಹಣ್ಣು ತಿನ್ನುವುದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಕಣ್ಣಿನ ಪೊರೆ ಮತ್ತು ಅನೇಕ ಕಣ್ಣಿನ ಸಮಸ್ಯೆಗಳನ್ನು ದೂರವಿಡುತ್ತದೆ. 

ಕಿವಿಯಲ್ಲಿ ಕಂಡುಬರುವ ಜೀವಸತ್ವಗಳು ಮತ್ತು ಖನಿಜಗಳು ನರಮಂಡಲ ಮತ್ತು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಇದರಿಂದ ಕಣ್ಣುಗಳಿಗೆ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. 

ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಫೋಲೇಟ್, ಪೊಟ್ಯಾಸಿಯಮ್ ಕಿವಿಯಲ್ಲಿ ಕಂಡುಬರುತ್ತವೆ. ವಯಸ್ಸು ಹೆಚ್ಚಾದಂತೆ ದೃಷ್ಟಿ ಕಡಿಮೆಯಾಗುವುದನ್ನು ತಡೆಯಲು ಕಿವಿಯನ್ನು ತಿನ್ನಬೇಕು. ಕಿವಿ ತಿನ್ನುವುದರಿಂದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಹೇರಳವಾಗಿ ದೊರೆಯುತ್ತದೆ. 

ಕಿವಿ ಹಣ್ಣಿನ ಸೇವನೆ ಉತ್ತಮ ದೃಷ್ಟಿಗೆ ತುಂಬಾ ಉಪಯುಕ್ತವಾಗಿದೆ. ಕಿವಿಯಲ್ಲಿ ವಿಟಮಿನ್ ಎ ಹೇರಳವಾಗಿ ಕಂಡುಬರುತ್ತದೆ. ಇದರಲ್ಲಿರುವ ವಿಟಮಿನ್ ಸಿ ಪ್ರಮಾಣವು ಕಿತ್ತಳೆಗಿಂತ ದ್ವಿಗುಣವಾಗಿದೆ. ಕಿವಿಯಲ್ಲಿ ನಾರಿನಂಶವಿದ್ದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. 

ಕಿವಿಯಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಕಡಿಮೆ ಕ್ಯಾಲೋರಿಗಳಿವೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಕಿವಿಯಲ್ಲಿ ತಾಮ್ರವು ಹೇರಳವಾಗಿ ಕಂಡುಬರುತ್ತದೆ, ಇದು ಕಣ್ಣಿನ ನರಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಕಣ್ಣುಗಳಲ್ಲಿನ ಕಿರಿಕಿರಿ, ಊತ ಮತ್ತು ಕಣ್ಣು ಕೆಂಪಾಗುವುದನ್ನು ತಡೆಯುತ್ತದೆ. ಕಿವಿ ತಿನ್ನುವುದರಿಂದ ಮಧುಮೇಹದ ಅಪಾಯ ಕಡಿಮೆ. ಹೃದಯ ಆರೋಗ್ಯಕರವಾಗಿರುತ್ತದೆ. ಈ ಎರಡೂ ಅಂಗಗಳು ಕಣ್ಣುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

Source : https://zeenews.india.com/kannada/photo-gallery/vitamin-rich-kiwi-fruit-helps-to-keep-eyes-healthy-and-improves-vision-at-old-age-268432/kiwi-fruit-benefits-for-eyes-268433

Leave a Reply

Your email address will not be published. Required fields are marked *