ದಿನಕ್ಕೊಂದು ಸಪೋಟ ತಿಂದರೆ ಸಾಕು.. ರೋಗಗಳು ಮಾಯ!

ನಿತ್ಯವೂ ಸಪೋಟ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ಪೌಷ್ಟಿಕತಜ್ಞರು. ಸಪೋಟಾದಲ್ಲಿ ವಿಟಮಿನ್ ಎ ಇದೆ. ಇದು ಕಣ್ಣಿಗೆ ಒಳ್ಳೆಯದು. ಸಪೋಟಾ ನೈಸರ್ಗಿಕ ಗ್ಲೂಕೋಸ್‌ನಲ್ಲಿ ಸಮೃದ್ಧವಾಗಿದೆ. ಇದು ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ದಿನನಿತ್ಯ ಸಪೋಟಾ ಹಣ್ಣನ್ನು ತಿಂದರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು.

ಸಪೋಟಾ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ರಾತ್ರಿ ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ಹಣ್ಣನ್ನು ತಿಂದರೆ ನೆಮ್ಮದಿಯಿಂದ ನಿದ್ರಿಸಬಹುದು. ಸಪೋಟಾ ಹಣ್ಣನ್ನು ಸೇವಿಸುವುದರಿಂದ ವಯಸ್ಸಾದ ತ್ವಚೆಯನ್ನು ಹೋಗಲಾಡಿಸಬಹುದು.

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರೂ ಸಪೋಟಾ ಸೇವನೆಯಿಂದ ಪ್ರಯೋಜನ ಪಡೆಯಬಹುದು. ಸಪೋಟಾ ಹಣ್ಣುಗಳು ನರಗಳ ಒತ್ತಡ ಮತ್ತು ದೌರ್ಬಲ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಣ್ಣುಗಳನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಕಡಿಮೆಯಾಗುತ್ತದೆ.

ಅಧಿಕ ತೂಕ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ಸಪೋಟಾ ಹಣ್ಣುಗಳು ದೇಹದಲ್ಲಿನ ಉರಿಯೂತವನ್ನು ಹಲವಾರು ರೀತಿಯಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಪೋಟಾದಲ್ಲಿರುವ ವಿಟಮಿನ್ ಎ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಸಪೋಟಾದಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದ ಅಂಶವಿದ್ದು, ಮೂಳೆಗಳನ್ನು ಗಟ್ಟಿಯಾಗಿಸುತ್ತದೆ.

Source : https://tv9kannada.com/health/sapota-health-benefits-vitamin-a-energy-boost-and-more-aks-948016.html

Views: 0

Leave a Reply

Your email address will not be published. Required fields are marked *