ಅಣ್ಣಾಮಲೈರನ್ನು ಪೊಲೀಸರಿಗೆ ಒಪ್ಪಿಸಬೇಕು : ಮತ್ತೆ ಗುಡುಗಿದ ನಟಿ ಗಾಯತ್ರಿ ರಘುರಾಮ್..!

ಅಣ್ಣಾಮಲೈ ವಿರುದ್ಧ ನಟಿ ಗಾಯತ್ರಿ ರಘುರಾಮ್ ಮತ್ತೆ ಕೆಂಡಕಾರಿದ್ದಾರೆ. ಇವರು ಇರುವ ಕಡೆ ಯಾರಿಗೂ ರಕ್ಷಣೆ ಇಲ್ಲ ಎಂದು ಕಿಡಿಕಾರಿದ್ದಾರೆ. ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಇವರು ಚಲಿಸುವ ವಿಮಾನದಲ್ಲಿ ಹೋದವರಿಗೂ ತೊಂದರೆಯಾಗಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಡಿಸೆಂಬರ್ 10ರಂದು ಅಣ್ಣಾಮಲೈ ಹಾಗೂ ಸಂಸದ ತೇಜಸ್ವಿ ಸೂರ್ಯ ಇಬ್ಬರು ಏರ್ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಈ ವೇಳೆ ವಿಮಾನ ಸಿಬ್ಬಂದಿಗಳು ಪ್ರಯಾಣಿಕರಿಗೆ ಸೂಚನೆಗಳು ನೀಡಿದ್ದರು. ತುರ್ತು ನಿರ್ಗಮನದ ದ್ವಾರದ ಬಗ್ಗೆ ಸೂಚನೆ ನೀಡಿದ್ದರು. ಆದ್ರೆ ಅದ್ಯಾಕೋ ಸೂಚನೆಯೆಲ್ಲಾ ಕೇಳಿಸಿಕೊಂಡರು, ಸಂಸದ ತೇಜಸ್ವಿ ಸೂರ್ಯ, ದ್ವಾರವನ್ನು ತೆಗೆದಿದ್ದರು. ಇದರಿಂದ ವಿಮಾನ ತಡವಾಗಿತ್ತು.

ಈ ಬಗ್ಗೆ ಸುದ್ದಿ ಹಬ್ಬಿದ ಬಳಿಕ ನಟಿ ಗಾಯತ್ರಿ ರಘುರಾಮ್ ರಿಯಾಕ್ಟ್ ಮಾಡಿದ್ದು, ವಿಮಾನದ ಪ್ರಯಾಣಿಕ ಜೀವನವನ್ನು ಅಪಾಯಕ್ಕೆ ತಳ್ಳಿದ್ದಕ್ಕೆ ಇಂಡಿಗೋ ಕಂಪನಿ ಕ್ಷಮಾಪಣಾ ಪತ್ರವನ್ನು ಕಾನೂನು ಪ್ರಕಾರ ಸ್ವೀಕರಿಸುವಂತಿಲ್ಲ. ಪ್ರಯಾಣಿಕರ ಜೀವದ ಜೊತೆಗೆ ಆಟವಾಡಿದ ತೇಜಸ್ವಿ ಸೂರ್ಯ ಮತ್ತು ಅಣ್ಣಾಮಲೈ ವಿರುದ್ಧ ಇಂಡಿಗೋ ಏರ್ ಲೈನ್ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣ ದಾಖಲಿಸಿ ಪೊಲೀಸರಿಗೆ ಒಪ್ಪಿಸಬೇಕು ಎಂದಿದ್ದಾರೆ.

The post ಅಣ್ಣಾಮಲೈರನ್ನು ಪೊಲೀಸರಿಗೆ ಒಪ್ಪಿಸಬೇಕು : ಮತ್ತೆ ಗುಡುಗಿದ ನಟಿ ಗಾಯತ್ರಿ ರಘುರಾಮ್..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/n6kdQFq
via IFTTT

Leave a Reply

Your email address will not be published. Required fields are marked *