ಭಾರತ ಹಾಗೂ ಅಮೆರಿಕ ದೇಶಗಳ ನಡುವಿನ ಸಹಯೋಗವನ್ನು ಬಲಪಡಿಸುವ ಸಂಬಂಧದಿಂದ ಅಮೆರಿಕವು ಭಾರತದ ಈ ಪರಮಾಣು ಕೇಂದ್ರಗಳಿಂದ ನಿರ್ಬಂಧವನ್ನು ತೆಗೆದು ಹಾಕಿದೆ. ಇದರ ಹಿಂದಿನ ಕೈಚಳಕ ಯಾರದ್ದು ಹಾಗೂ ಆ ಸಂಸ್ಥೆಗಳು ಯಾವುವು ಇಲ್ಲಿ ತಿಳಿಯಿರಿ.

ನವದೆಹಲಿ: ನಾಗರಿಕ ಪರಮಾಣು ಸಹಕಾರ (Civil nuclear cooperation) ವನ್ನು ಉತ್ತೇಜಿಸಲು ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ (Indira Gandhi Atomic Research Centre), ಬಾಬಾ ಪರಮಾಣು ಸಂಶೋಧನಾ ಕೇಂದ್ರ (Baba Atomic Research Centre) ದಂತಹ ಭಾರತ ಸರ್ಕಾರದ ಪರಮಾಣು ಕೇಂದ್ರಗಳ ಮೇಲಿನ ನಿರ್ಬಂಧಗಳನ್ನು ತಗೆದು ಹಾಕುವುದಾಗಿ ಅಮೆರಿಕಾದ ರಕ್ಷಣಾ ಸಲಹೆಗಾರ (US Defense Adviser) ಜೇಕ್ ಸುಲ್ಲಿವಾನ್ (Jake Sullivan) ತಿಳಿಸಿದ್ದಾರೆ.
ಅಮೆರಿಕ 47 ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಜನವರಿ 20 ರಂದು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಭಾರತಕ್ಕೆ ಆಗಮಿಸಿರುವ ನಿರ್ಗಮಿತ ಅಮೆರಿಕಾದ ರಕ್ಷಣಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ತಮ್ಮ ಎರಡು ದಿನಗಳ ಭಾರತ ಭೇಟಿಯಲ್ಲಿ ಪರಮಾಣು ತಂತ್ರಜ್ಞಾನದ ಕುರಿತು ಕೆಲಸ ಮಾಡುತ್ತಿರುವ ಭಾರತದ ಸಂಸ್ಥೆಗಳ ಮೇಲೆ ಅಮೆರಿಕ ಸರ್ಕಾರ ಹೊರಡಿಸಿರುವ ನಿರ್ಬಂಧಗಳನ್ನು ತೆಗದುಹಾಕುವುದಾಗಿ ತಿಳಿಸಿದರು.
ಭಾರತ ಭೇಟಿಯ ಕುರಿತು ಮಾತನಾಡಿದ ಅವರು ನಾನು ರಕ್ಷಣಾ ಸಲಹೆಗಾರನಾಗಿ ನನ್ನ ಕೊನೆಯ ವಿದೇಶ ಪ್ರವಾಸವಾಗಿದೆ. ನನ್ನ ಅಂತಿಮ ಆಡಳಿತ್ಮಾಕ ವಿದೇಶ ಪ್ರವಾಸವು ಭಾರತಕ್ಕೆ ಭೇಟಿ ನೀಡುವುದರಿಂದ ಕೊನೆಗೊಳ್ಳುತ್ತಿದೆ. ಇದಕ್ಕಿಂತ ನಾನು ಉತ್ತಮ ಮಾರ್ಗವನ್ನು ಯೋಚಿಸಲು ಸಾಧ್ಯವಿಲ್ಲ ಎಂದರು. ಆದರೊಂದಿಗೆ ಭಾರತದ ಪರಮಾಣು ಕೇಂದ್ರಗಳ ಮೇಲಿನ ನಿರ್ಬಂಧವನ್ನು ತೆರವು ಮಾಡುತ್ತಿರುವುದ ನನ್ನ ಪಾಲಿನ ಐತಿಹಾಸಿಕ ಸಾಧನೆಯಾಗಿದೆ ಎಂದರು. ಇದರೊಂದಿಗೆ ಅವರು “ಅಮೆರಿಕ ಮತ್ತು ಭಾರತ ದೇಶಗಳು ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಪರಿಶೋಧನೆಯಲ್ಲಿ ದೊಡ್ಡ ದಾಪುಗಾಲುಗಳನ್ನಿಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
2000 ದಲ್ಲಿ ಭಾರತವು ವಾಜಪೇಯಿ ಪರಮಾಣು ರಾಷ್ಟ್ರವಾದಗಿನಿಂದಲೂ ತಕರಾರು ತಗೆದಿರುವ ಅಮೆರಿಕವು ಭಾರತದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತ್ತು. ಕಾಲನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬುಷ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೂ ಸಹ ಪರಮಾಣು ಕುರಿತು ಅಮೆರಿಕವು ಭಾರತದ ಮೇಲೆ ನಿರ್ಬಂಧವಿದ್ದವು. ಆದರೆ ಇಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಾರ್ಯದಿಂದ ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೇಲಿಂದಲೂ ತಗೆದು ಹಾಕಲಾಗುತ್ತದೆ. ಇದರೊಂದಿಗೆ ಭಾರತದ ಪರಮಾಣು ಸಂಸ್ಥೆಗಳು ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ವಿಶ್ವದ ಇತರೆ ರಾಷ್ಟ್ರಗಳ ಪರಮಾಣು ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸಬಹುದಾಗಿದೆ.
ಅಮೆರಿಕಾದಿಂದ ನಿರ್ಬಂಧ ಹೊಂದಿರುವ ಕೇಂದ್ರಗಳು
- ಬಾಬಾ ಪರಮಾಣು ಸಂಶೋಧನಾ ಕೇಂದ್ರ (BARC)
- ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ (IGCAR)
- ಅಭರ್ ಟೆಕ್ನಾಲಜೀಸ್ ಎಂಡ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್
- ಅಗ್ರಿಮ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್
- ಅನಲಾಗ್ ಟೆಕ್ನಾಲಜಿ ಲಿಮಿಟೆಡ್
ಈ ಕೇಂದ್ರಗಳನ್ನು ನಿರ್ಬಂಧದ ಪಟ್ಟಿಯಿಂದ ತೆಗೆದುಹಾಕುವುದರೊಂದಿಗೆ ಭಾರತೀಯ ಸಂಸ್ಥೆಗಳು ಅಮೆರಿಕಾದ ಸಂಸ್ಥೆಗಳೊಂದಿಗೆ ಕೆಲಸ ಮಾಡಬಹುದಾಗಿದೆ. ಹಾಗೂ ರಕ್ಷಣಾ ಸೇರಿದಂತೆ ಹಲವಾರು ಉದ್ದೇಶಗಳಿಗಾಗಿ ಪರಮಾಣು ತಂತ್ರಜ್ಞಾನದ ಪ್ರವೇಶವನ್ನು ಪಡೆಯಬಹುದಾಗಿದೆ.