ಚಿತ್ರದುರ್ಗ|ಮಕ್ಕಳ ಮನಸ್ಸನ್ನು ಓಪನ್ ಮಾಡುವ ಬದಲು, ಮಕ್ಕಳ ಮುಂದೆ ಕಂಪ್ಯೂಟರ್,ಮೊಬೈಲ್, ಟಿ.ವಿ.ಯನ್ನು ಓಪನ್ ಮಾಡಲಾಗುತ್ತಿದೆ: ಶಿವಲಿಂಗಾನಂದ ಶ್ರೀಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 12: ಮನೆಯಲ್ಲಿ ಪೋಷಕರು ಮಕ್ಕಳ ಮುಂದೆ ಕಂಪ್ಯೂಟರ್,ಮೊಬೈಲ್, ಟಿ.ವಿ.ಯನ್ನು ಓಪನ್ ಮಾಡಲಾಗುತ್ತಿದೆ, ಆದರೆ ಮಕ್ಕಳ
ಮನಸ್ಸ ನ್ನು ಓಪನ್ ಮಾಡುವಂತ ಕಾರ್ಯವನ್ನು ಮಾಡುತ್ತಿಲ್ಲ ಎಂದು ಕಬೀರಾನಂಧಾ ಶ್ರಮದ ಪೀಠಾಧ್ಯಕ್ಷರಾದ ಶ್ರೀ
ಶಿವಲಿಂಗಾನಂದ ಶ್ರೀಗಳು ವಿಷಾಧಿಸಿದರು.

ಚಿತ್ರದುರ್ಗ ನಗರದ ಶ್ರೀ ಕಬೀರಾನಂದಾಸ್ವಾಮಿ ವಿದ್ಯಾಪೀಠದ ವತಿಯಿಂದ ನಡೆಯುತ್ತಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಪೂರ್ವ ಮತ್ತು ಪ್ರಾಥಮಿಕ ಹಿರಿಯ ಪ್ರಾಥಮಿಕ ಪ್ರೌಢಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ಸಂಸ್ಕøತ ಪಾಠಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವತಿಯಿಂದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 2024-2025ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮಕ್ಕಳ ಮನಸ್ಸಿನಲ್ಲಿನ ಪೆಟ್ಟಿಗೆಯನ್ನು ತೆರೆಯುವ ಕಾರ್ಯವನ್ನು ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಮಾಡಬೇಕಿದೆ ಇದರಿಂದ ಮಾತ್ರ ಮಕ್ಕಳು ಪ್ರಗತಿಯನ್ನು ಹೊಂದಲು
ಸಾಧ್ಯವಿದೆ. ಇದರ ಬದಲು ಮಕ್ಕಳ ಬಳಿ ಕಂಪ್ಯೂಟರ್,ಮೊಬೈಲ್, ಟಿ.ವಿ.ಯನ್ನು ಓಪನ್ ಮಾಡಲಾಗುತ್ತಿದೆ. ಮಕ್ಕಳನ್ನು ಪ್ರವಾಸ
ಮಾಡಿಸಲಾಗುತ್ತಿದೆ. ಆದರೆ ಮಕ್ಕಳ ಮನಸ್ಸ್‍ನ್ನು ಓಪನ್ ಮಾಡುವಂತ ಕಾರ್ಯವನ್ನು ಮಾಡುತ್ತಿಲ್ಲ, ಇದಕ್ಕೆ ಮುಂಚೆ ಪೋಷಕರಿಗೆ
ಪಾಠವನ್ನು ಮಾಡಬೇಕಿದೆ, ಮಕ್ಕಳ ಬೆಳವಣಿಗೆಯನ್ನು ದಿನ ನಿತ್ಯ ಅವಲೋಕಿಸಬೇಕು ಪರೀಕ್ಷೆಯನ್ನು ಮಾಡಬೇಕಿದೆ. ಅದರಲ್ಲಿ
ಯಶಸ್ಸನ್ನು ಕಾಣಬೇಕಿದೆ. ಮಕ್ಕಳು ಕಲಿತ್ತಿದ್ದನ್ನು ನೋಡುವುದು ನಿಮ್ಮಗಳ ಜವಾಬ್ದಾರಿಯಾಗಿದೆ ಎಂದು ಶ್ರೀಗಳು ತಿಳಿಸಿದರು.

ಪ್ರತಿಯೊಬ್ಬ ಮನುಷ್ಯನಿಗೆ ಗುರುವಿನ ಅಗತ್ಯ ಇದೆ. ಗುರುವಿನ ಗುಲಾಮನಾಗದ ಹೊರೆತು ಮುಕ್ತಿ ದೂರೆಯುವುದಿಲ್ಲ ಎಂಬಂತೆ ಪ್ರತಿಯೊಬ್ಬರು ಸಹಾ ಗುರುವಿನ ಮೊರೆ ಹೊಗಲೇ ಬೇಕಿದೆ. ಕಚೇರಿಯಲ್ಲಿ ಒಬ್ಬ ಎಫ್‍ಡಿಸಿ ಬರೆದ ಪತ್ರಕ್ಕೆ ಅದರ ಅಧಿಕಾರಿ ಸಹಿಯನ್ನು ಹಾಕದಿದ್ದರೆ ಅದಕ್ಕೆ ಯಾವ ರೀತಿ ಬೆಲೆ ಸಿಗುವುದಿಲ್ಲವೂ ಅದೇ ರೀತಿ ನಿಮ್ಮ ಮಕ್ಕಳ ಪ್ರತಿಭೆಗೆ ಶಾಲೆಯ ಮುಖ್ಯೋಪಾಧ್ಯಯರು ಸಹಿಯನ್ನು ಮಾಡದಿದ್ದರೆ ಅಂಕಪಟ್ಟಿಗೆ ಬೆಲೆ ಸಿಗವುದಿಲ್ಲ, ಆದರೆ ಮಾನವನ ಸನ್ನಡತೆಗೆ ಗುರುವಿನ ಸಹಿ ಅಗತ್ಯವಾಗಿದೆ. ಇಂದಿನ ಕಾರ್ಯಕ್ರಮದ ಸಮಯದಲ್ಲಿ ಸಿದ್ದರೂಢರ ಜ್ಯೋತಿ ಯಾತ್ರೆಯೂ ಚಿತ್ರದುರ್ಗ ನಗರಕ್ಕೆ ಅಗಮಿಸಿದೆ ಎಂದರೆ ಮುಂದಿನ ದಿನಮಾನದಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂಬ ಮುನ್ಸೂಚನೆ ಇದಾಗಿದೆ ಎಂದು ತಿಳಿಸಿದರು.

ಮಂಜುನಾಥ್‍ಸ್ವಾಮಿ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷರು, ಹಾಗೂ ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯ
ಸಂಸ್ಥಾಪಕ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್ ಮಾತನಾಡಿ, ಮಾನವ ಹುಟ್ಟು ಸಾವು ಸಾಮಾನ್ಯ ಇದರ ಮಧ್ಯದಲ್ಲಿ
ಏನಾದರೂ ಕಲಿಯಬೇಕಿದೆ. ಇದಕ್ಕೆ ಮನೆಯೇ ಪಾಠ ಶಾಲೆಯಾಗಬೇಕಿದೆ. ಇಲ್ಲಿನ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠವನ್ನು
ಹೇಳಿದರೆ ಶ್ರೀಗಳು ಆರ್ಶಿವಚನವನ್ನು ನೀಡುತ್ತಾರೆ. ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದು ಆಗತ್ಯವಾಗಿದೆ. ತಂದೆ-ತಾಯಿಗಳಿಗೆ
ಮಕ್ಕಳಾದವರು ಗೌರವವÀನ್ನು ನೀಡಿ ಜೀವನದಲ್ಲಿ ಮುಂದೆ ಬರಬೇಕಿದೆ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಹೆಚ್ಚಾಗಿದೆ.
ಇಂದಿನ ದಿನಮಾನದಲ್ಲಿ ಮಕ್ಕಳನ್ನು ಪೋಷಕರು ಸರಿಯಾದ ರೀತಿಯಲ್ಲಿ ನೋಡುತ್ತಿಲ್ಲ, ತಂದೆ ದುಡಿಮೆಯನ್ನು ಮಾಡಲು ಹೋದರೆ
ಮನೆಯಲ್ಲಿ ತಾಯಿ ಟಿ.ವಿಯನ್ನು ನೋಡುವುದರಲ್ಲಿ ತಲ್ಲಿನರಾಗಿರುತ್ತಾರೆ. ಇದರಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಶಾಲೆಯಲ್ಲಿ ಮಕ್ಕಳ ಮೇಲೆ ಶಿಕ್ಷಕರು ಒತ್ತಡವನ್ನು ತಂದರೆ ಮನೆಯಲ್ಲಿ ಪೋಷಕರಾದವೆರು ತಮ್ಮ ಮಕ್ಕಳ ಮೇಲೆ
ನಿಗಾವಹಿಸಬೇಕಿದೆ. ಮಕ್ಕಳಲ್ಲಿ ಧೈರ್ಯವನ್ನು ತುಂಬುವ ಕಾರ್ಯವನ್ನು ಮಾಡಬೇಕಿದೆ. ಇಂದಿನ ದಿನಮಾನದಲ್ಲಿ ಮಕ್ಕಳ ಧೈರ್ಯ
ಕುಗ್ಗುತ್ತದೆ. ಇದರಿಂದ ಅವರ ತಮ್ಮ ಮುಂದಿನ ಜೀವನವನ್ನು ಎದುರಿಸುವುದು ಕಷ್ಠವಾಗತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪ ನಿರ್ದೆಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆಯ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ
ಕೆ.ಜಿ.ಪ್ರಶಾಂತ್, ನಗರಸಭಾ ಸದಸ್ಯರಾದ ಶ್ರೀಮತಿ ಪೂಜಾಯೋಗಿ ಮಂಜುನಾಥ್, ಈರಣ್ಣ ಎಸ್,ಪಾಳೇದ್, ಚಿದಾನಂದ ಶ್ರೀಗಳು
ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಮಲ್ಲಿಕಾರ್ಜನ್,
ಚಿತ್ರದುರ್ಗ ಪೂರ್ವದ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಸ್.ಗೋವಿಂದಪ್ಪ, ಸೇರಿದಂತೆ ಸಿದ್ದಾರೂಢ ಜ್ಯೋತಿ ಯಾತ್ರೆಯ ಸದಸ್ಯರು
ಭಾಗವಹಿಸಿದ್ದರು.

ಸುಬ್ರರಾಯಭಟ್ಟರು ವೇದ ಘೋಷಗಳನ್ನು ವಾಚಿಸಿದರೆ, 10ನೇ ತರಗತಿಯ ಮಕ್ಕಳು ಪ್ರಾರ್ಥಿಸಿದರು, ಮಂಜುಳ ಸ್ವಾಗತಿಸಿದರು.
ಸಿದ್ದೇಶ್ವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನುಗಳಿಸಿದ
ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳ ಪೋಷಕರಿಗೆ ಹಮ್ಮಿಕೊಂಡಿದ್ದ
ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ದರೂಢಸ್ವಾಮಿಯವರ ಮಠ ಟ್ರಸ್ಟ್ ಕಮಿಟಿವತಿಯಿಂದ ಶ್ರೀ ಸಿದ್ದಾರೂಢರ 190ನೇ
ಜಯಂತ್ಯುತ್ಸವ ಹಾಗೂ ಶ್ರೀ ಗುರುನಾಥಾರೂಢರ 115ನೇ ಜಯಂತ್ಯುತ್ಸವ ಶ್ರೀ ಸಿದ್ದರೂಢರ ಕಥಾಮೃತದ ಶತಮಾನೋತ್ಸವ
ಕಾರ್ಯಕ್ರಮದ ನಿಮಿತ್ತವಾಗಿ 2024 ಡಿ.23 ರಿಂದ 2025 ಫೆ.19ರವರೆಗೆ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ಸಿದ್ದಾರೂಢ
ಮಹಾಸ್ವಾಮಿಗಳವರ ಜ್ಯೋತಿ ಯಾತ್ರೆಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

Leave a Reply

Your email address will not be published. Required fields are marked *