ಕಡಲೆಬೇಳೆ ಹಿಟ್ಟಿನಿಂದ ಎಷ್ಟು ಪ್ರಯೋಜನಗಳಿವೆ ಗೊತ್ತಾ? ಮೊಡವೆ, ತಲೆಹೊಟ್ಟು ಸೇರಿ ಹಲವು ಸಮಸ್ಯೆಗೆ ಪರಿಹಾರ.

Besan Flour Benefits for Face: ಕಡಲೆಬೇಳೆ ಹಿಟ್ಟನ್ನು ಕೂದಲಿಗೆ ಹಚ್ಚಿಕೊಂಡರೆ, ಇದು ಉತ್ತಮ ಕಂಡೀಷನರ್​ನಂತೆ ಕೆಲಸ ಮಾಡುತ್ತದೆ. ಕಡಲೆಬೇಳೆ ಹಿಟ್ಟಿನಿಂದ ಅನೇಕ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

Besan Flour Benefits for Face: ಮನೆಯಲ್ಲಿಯೇ ದೊರೆಯುವ ಕಡಲೆಬೇಳೆ ಹಿಟ್ಟಿನಿಂದ ಹಲವು ರೀತಿಯ ತ್ವಚೆಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಜೊತೆಗೆ ಡ್ಯಾಂಡ್ರಫ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಹಿಂದಿನ ಕಾಲದಲ್ಲಿ ಕಡಲೆ ಹಿಟ್ಟನ್ನು ಹೊಳೆಯುವ ಚರ್ಮಕ್ಕಾಗಿ ಬಳಸಲಾಗುತ್ತಿತ್ತು. ಆ ನಂತರ ಮಾರುಕಟ್ಟೆಗೆ ನಾನಾ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳು ಬಂದ ನಂತರ ಕಡಲೆ ಹಿಟ್ಟಿನ ಬಳಕೆಯು ಕ್ರಮೇಣವಾಗಿ ಕಡಿಮೆಯಾಯಿತು. ಕಡಲೆ ಹಿಟ್ಟು ದೇಹಕ್ಕೆ ಆಗುವ ಪ್ರಯೋಜನಗಳನ್ನು ಇಲ್ಲಿ ತಿಳಿಯೋಣ….

  • ಬೇಳೆ ಹಿಟ್ಟನ್ನು ನೀರು ಇಲ್ಲವೇ ಮೊಸರಿನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚಿಕೊಂಡರೆ, ತ್ವಚೆಯಲ್ಲಿರುವ ಕೊಳೆ ನಿವಾರಣೆಯಾಗುತ್ತದೆ. ರಂಧ್ರಗಳು ತೆರೆದುಕೊಳ್ಳುತ್ತವೆ. ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
  • ಕಡಲೆ ಹಿಟ್ಟಿಗೆ ಸ್ವಲ್ಪ ಹಾಲು ಹಾಗೂ ಅರಿಶಿನ ಸೇರಿಸಿ ಮುಖಕ್ಕೆ ಹಚ್ಚಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆಗಳನ್ನು ಹಾಗೂ ಅವುಗಳಿಂದ ಉಂಟಾಗುವ ಉರಿಯೂತ ಕಡಿಮೆ ಮಾಡುತ್ತದೆ. 2011 ರಲ್ಲಿ ಜರ್ನಲ್ ಆಫ್ ಫಾರ್ಮಸಿ ರಿಸರ್ಚ್‌ (Journal of Pharmacy Research)ನಲ್ಲಿ “Antimicrobial activity of gram flour against human pathogens” ಎಂಬ ಕುರಿತು ಸಂಶೋಧನಾ ವರದಿ ಪ್ರಕಟವಾಗಿದೆ.
  • ಕಡಲೆಹಿಟ್ಟನ್ನು ರೋಸ್ ವಾಟರ್​ಗೆ ಬೆರೆಸಿ ಮುಖಕ್ಕೆ ಹಚ್ಚಿದರೆ, ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮವು ನೈಸರ್ಗಿಕವಾಗಿ ಹೊಳೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.
  • ಸೌತೆಕಾಯಿ ತಿರುಳನ್ನು ಮೊಸರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿದರೆ ಸೂರ್ಯನ ಬಿಸಿಲು ಹಾಗೂ ಮಾಲಿನ್ಯದಿಂದ ತ್ವಚೆಯಲ್ಲಿ ಉಂಟಾಗಿರುವ ಕಲೆಗಳು, ದದ್ದುಗಳು ಕಡಿಮೆಯಾಗುತ್ತದೆ. ಜೊತೆಗೆ ತ್ವಚೆ ಫ್ರೆಶ್ ಆಗಿ ಕಾಣುತ್ತದೆ.
  • ಕಡಲೆ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಬೇಕಾಗುತ್ತದೆ. ಈ ಮಿಶ್ರಣವನ್ನು ತಲೆಗೆ ಹಚ್ಚಬೇಕು. ಈ ರೀತಿ ಮಾಡುವುದರಿಂದ ಕೊಳೆಯಲ್ಲಾ ಹೋಗಿ ಕೂದಲಿಗೆ ಉತ್ತಮ ಕಂಡೀಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
  • ಕಾಳು ಹಿಟ್ಟಿನಲ್ಲಿ ಶಿಲೀಂಧ್ರನಾಶಕ ಗುಣಗಳು ಹೇರಳವಾಗಿವೆ. ತೆಂಗಿನೆಣ್ಣೆ, ನಿಂಬೆರಸ, ಕಡಲೆಹಿಟ್ಟು ಹಾಕಿ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.
  • ಕಡಲೆ ಹಿಟ್ಟಿನಲ್ಲಿರುವ ಪ್ರೋಟಿನ್ ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಕಡಲೆಹಿಟ್ಟನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಂಡರೆ ಕೂದಲುಗಳು ಗಟ್ಟಿಯಾಗುತ್ತವೆ.
  • ನಿಮ್ಮ ತ್ವಚೆ ಮತ್ತು ಕೂದಲು ಕಡಲೆಹಿಟ್ಟನ್ನು ಇಷ್ಟಪಡುತ್ತದೆಯೇ ಎಂಬುದನ್ನು ಪ್ರಯತ್ನಿಸಿ ನೋಡಿದ ನಂತರವೇ ಈ ಪ್ಯಾಕ್‌ಗಳನ್ನು ಬಳಕೆ ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ.

Source: https://www.etvbharat.com/kn/!health/do-you-know-the-benefits-of-chickpea-flour-a-solution-to-many-problems-including-acne-and-dandruff-kas25011701485

Leave a Reply

Your email address will not be published. Required fields are marked *