ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಚುನಾವಣೆ; ನಿಶಾನಿ ಜಯ್ಯಣ್ಣ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 24: ಚಿತ್ರದುರ್ಗ ನಗರದ ವಾಸವಿ ವೃತ್ತದಲ್ಲಿನ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ಗೆ ಮುಂದಿನ 5 ವರ್ಷಕ್ಕೆ ಚುನಾವಣೆ ನಡೆಯಲಿದ್ದು ಇಂದು ಮಾಜಿ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣರವರ ನೇತೃತ್ವದ ತಂಡ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.,ನ ಚುನಾವಣಾ ಅಧಿಕಾರಿಗಳು, ಹಾಗೂ ಅಧೀಕ್ಷರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಚಿತ್ರದುರ್ಗ ಉಪ ವಿಭಾಗದ ಅಧೀಕ್ಷಕರಾದ ಎಸ್.ಮೊಹಮ್ಮದ್ ಯೂನುಸ್ ಪರ್ವೀಜ್‍ರವರಿಗೆ ಸಲ್ಲಿಸಿತು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಸಾಮಾನ್ಯ ಚುನಾವಣೆಯಲ್ಲಿ ಚುನಾವಣಾ ದಿನಾಂಕದಿಂದ ಮುಂದಿನ 5
ವರ್ಷಗಳ ಅವಧಿಗೆ ಸಂಘದ ಸದಸ್ಯದಲ್ಲಿ ಆಡಳಿತ ಮಂಡಲಿಗೆ ನಿರ್ದೇಶಕರನ್ನಾಗಿ ಚುನಾಯಿಸಲು 12 ಸ್ಥಾನಗಳಿಗೆ ಚುನಾವಣೆ
ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜ. 25ರ ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶವನ್ನು ಕಲ್ಪಿಸಲಾಗಿದೆ, ಜ. 26ರ
ಭಾನುವಾರ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು ಜ. 27ರ ಮಧ್ಯಾಹ್ನ 3 ಗಂಟೆಯವರೆಗೆ 27 ಕೂನೆಯ ದಿನವಾಗಿದೆ.
ಈ ಚುನಾ ವಣೆಯಲ್ಲಿ 06 ಸಾಮಾನ್ಯ ಸ್ಥಾನಗಳು, 01 ಪರಿಶಿಷ್ಟ ಜಾತಿ ಮೀಸಲು ಸ್ಥಾನ. 01 ಪರಿಶಿಷ್ಟ ಪಂಗಡ ಮೀಸಲು, 01
ಹಿಂದುಳಿದ ವರ್ಗಗಳ (ಪ್ರವರ್ಗ-ಎ) ಮೀಸಲು ಸ್ಥಾನ, 01ಹಿಂದುಳಿದ ವರ್ಗಗಳ (ಪ್ರವರ್ಗ-ಬಿ) ಮೀಸಲು ಸ್ಥಾನ ಹಾಗೂ 02 ಮಹಿಳಾ
ಮೀಸಲು ಸ್ಥಾನವನ್ನು ಮೀಸಲಿರಿಸಲಾಗಿದೆ. ಈ ಚುನಾವಣೆ ಯಲ್ಲಿ 2030 ಷೇರುದಾರರು ಮತದಾನದ ಹಕ್ಕನ್ನು ಹೊಂದಿದ್ದಾರೆ. ಜ.
27 ರ ಮಧ್ಯಾಹ್ನ 3 ಗಂಟೆಗೆ ಅಂತಿಮ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗುವುದು. ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ
ಚಿಹ್ನೆಯನ್ನು ನೀಡಲಾಗುವುದು. ಫೆ. 2 ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ಮತದಾನ ಮುಗಿದ ನಂತರ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ನಿಶಾನಿ ಜಯ್ಯಣ್ಣ ತಂಡದಲ್ಲಿ ಸೂರ್ಯಪ್ರಕಾಶ್, ನಾಗರಾಜ್ ಬೇದ್ರೇ, ಸುರೇಶ್‍ಕುಮಾರ್(ಭಾಫ್ನ) ತಿಪ್ಪೇಸ್ವಾಮಿ, ಶ್ರೀಮತಿಚಂಪಕ,
ಶ್ರೀಮತಿಪುಷ್ಪವಲ್ಲಿ,ಡಾ.ರಹಮತ್ತುಲ್ಲಾ ಚಿಕ್ಕಣ್ಣ, ಚಂದ್ರಣ್ಣ, ಶ್ರೀನಿವಾಸ್, ಮೂರ್ತಿ, ರಾಜಕುಮಾರ್, ಕೇಶವಮೂರ್ತಿ, ಲಿಂಗೇಶ್
ನಾಮಪತ್ರ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *