
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 01 : ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಟ್ಟೇ ಬಿಟ್ಟೇವು ಎಂಬಂತೆ ಚಿತ್ರದುರ್ಗ ಜಿಲ್ಲೆ ಜನರನ್ನು ಬಿಜೆಪಿಗರು ನಂಬಿಸಿದ್ದರು. ಈಗ ಹಿಂದಿನ ರೀತಿ ಮತ್ತೇ ವಂಚನೆ ಮುಂದುವರಿಸಿದ್ದಾರೆ ಜಿಲ್ಲೆ ಜೊತೆಗೆ ರಾಜ್ಯಕ್ಕೇ ತೀವ್ರ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ ದೂರಿದ್ದಾರೆ.
ಕೇಂದ್ರ ಸರ್ಕಾರ ಇಂದು ಮಂಡಿಸಿದ 2025-26ನೇ ಸಾಲಿನ ಆಯವ್ಯಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯ ಇದೆಯೆಂಬುದನ್ನೇ ಮರೆಯಲಾಗಿದೆ. ಈ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿದೆ.ಕುರ್ಚಿ ಉಳಿಸಿಕೊಳ್ಳಲು ಬಿಹಾರ, ಆಂಧ್ರಕ್ಕೆ ಸಿಂಹಪಾಲು ನೀಡಲಾಗಿದೆ. ಕನ್ನಡಿಗರಿಗ ಕಣ್ಣಿಗೆ ಸುಣ್ಣ ಎರಚಲಾಗಿದೆ. ಇದರ ವಿರುದ್ಧ ಪಕ್ಷಾತೀತ ಹೋರಾಟ ನಡೆಸದಿದ್ದರೇ ರಾಜ್ಯಕ್ಕೆ ಅಪಾಯ ಖಚಿತ ಎಂದು ಚಂದ್ರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.