ಗಿಲ್​​, ಅಯ್ಯರ್​​, ಕೊಹ್ಲಿ ಅಬ್ಬರ; ಇಂಗ್ಲೆಂಡ್​ಗೆ ಟೀಮ್​ ಇಂಡಿಯಾ ಬರೋಬ್ಬರಿ 357 ರನ್​ಗಳ ಟಾರ್ಗೆಟ್

ಸದ್ಯ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ ಟೀಮ್​ ಇಂಡಿಯಾ ಬಿಗ್​ ಟಾರ್ಗೆಟ್​ ಕೊಟ್ಟಿದೆ. ಬರೋಬ್ಬರಿ 357 ರನ್​​ಗಳ ಗುರಿಯನ್ನು ಇಂಗ್ಲೆಂಡ್​​​ ಭಾರತ ಕ್ರಿಕೆಟ್​ ತಂಡ ನೀಡಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ ಒಂದು ರನ್​ಗೆ ವಿಕೆಟ್​ ಒಪ್ಪಿಸಿದ್ರು. ರೋಹಿತ್​ ವಿಕೆಟ್​ ಬಿದ್ರೂ ಟೀಮ್​ ಇಂಡಿಯಾ ಪರ ಗಿಲ್​ ಅಬ್ಬರಿಸಿದರು. ಇವರು ಬರೋಬ್ಬರಿ 500 ದಿನಗಳ ನಂತರ ತಮ್ಮ ಏಕದಿನ ಶತಕ ಬಾರಿಸಿದ್ದಾರೆ. ಇಷ್ಟು ದಿನಗಳ ನಂತರ ಗಿಲ್​ ತಮ್ಮ 7ನೇ ಶತಕ ಪೂರೈಸಿದ್ರು.

ಕೊಹ್ಲಿ, ಅಯ್ಯರ್​ ಅಬ್ಬರ

ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್​ ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಿದರು. ತಾನು ಎದುರಿಸಿದ 55 ಬಾಲ್​ನಲ್ಲಿ 1 ಭರ್ಜರಿ ಸಿಕ್ಸರ್​​, 7 ಫೋರ್​ ಸಮೇತ 52 ರನ್​ ಸಿಡಿಸಿದರು. ಇವರಿಗೆ ಸಾಥ್​ ನೀಡಿದ ಶ್ರೇಯಸ್​ ಅಯ್ಯರ್​​ ಅವರು, 64 ಬಾಲ್​ನಲ್ಲಿ 2 ಸಿಕ್ಸರ್​​, 6 ಫೋರ್​ ಸಮೇತ 78 ರನ್​​​ ಬಾರಿಸಿದ್ರು.

ಕೆ.ಎಲ್​​ ರಾಹುಲ್​ ಹೊಡಿಬಡಿ ಆಟ

ಇನ್ನು, 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್​ ರಾಹುಲ್​ ಹೊಡಿಬಟ ಆಟ ಆಡಿದರು. ಕೇವಲ 29 ಬಾಲ್​ನಲ್ಲಿ 1 ಸಿಕ್ಸರ್​​, 3 ಫೋರ್​​ನೊಂದಿಗೆ 40 ರನ್​ ಚಚ್ಚಿದ್ರು.

ಹಾರ್ದಿಕ್​ ಪಾಂಡ್ಯ 17, ಅಕ್ಷರ್​ ಪಟೇಲ್​​, ವಾಷಿಂಗ್ಟನ್​ ಸುಂದರ್​​ 14, ಹರ್ಷಿತ್​ ರಾಣಾ 13 ರನ್​​ ಗಳಿಸಿದ್ರು. ಈ ಮೂಲಕ ಟೀಮ್​ ಇಂಡಿಯಾ 50 ಓವರ್​ನಲ್ಲಿ 10 ವಿಕೆಟ್​​ ನಷ್ಟಕ್ಕೆ 356 ರನ್​ ಕಲೆ ಹಾಕಿತ್ತು.

Source: https://newsfirstlive.com/team-india-big-target-england-team

Leave a Reply

Your email address will not be published. Required fields are marked *