ಚಿತ್ರದುರ್ಗ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ.

ಚಿತ್ರದುರ್ಗ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ, ಪಂಚ ಗ್ಯಾರಂಟಿ ಯೋಜನೆ : ಜನರ ಬದುಕಿನಲ್ಲಿ ಬೆಳಕು ಮೂಡಬೇಕು , ಅಧ್ಯಕ್ಷ ಪ್ರಕಾಶ್ .

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ಚಿತ್ರದುರ್ಗ ಫೆ 14: ರಾಜ್ಯ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು
ಸಮರ್ಪಕವಾಗಿ ಅನುಷ್ಠಾನವಾಗಬೇಕು. ಇವುಗಳಿಂದ ಜನರ ಬದುಕಿನಲ್ಲಿ ಬೆಳಕು ಮೂಡಬೇಕು ಎಂದು ಗ್ಯಾರಂಟಿ ಯೋಜನೆಗಳ
ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಆರ್.ಪ್ರಕಾಶ್ ಹೇಳಿದರು.

ಇಂದು ಚಿತ್ರದುರ್ಗ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಸಮಾಜದ ಹಿಂದುಳಿದ ವರ್ಗದ ಜನರನ್ನು ಆರ್ಥಿಕವಾಗಿ
ಸಬಲರನ್ನಾಗಿಸಲು ಅವರ ಜೀವನ ಮಟ್ಟ ಸುಧಾರಿಸಲು ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿ ಅವರನ್ನು ಸಮಾಜದ
ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಬೆಂಬಲವಾಗಿ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ
ಯೋಜನೆಗಳು ಸಹಕಾರಿಯಾಗಿವೆ ಎಂದರು.

ಯಾವ ಯಾವ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಯಾಗಿಲ್ಲ ಅಂತಹ ಪಡಿತರದಾರರ ಹಾಗೂ
ಅವರುಗಳು ಯಾವ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುತ್ತಾರೆಂಬ ಮಾಹಿತಿಯನ್ನು ಆಯಾ ಭಾಗದ ಪ್ರಾಧಿಕಾರದ ಪ್ರತಿನಿಧಿಗಳಿಗೆ
ನೀಡಬೇಕು, ಪ್ರತಿನಿಧಿಗಳಿಗೆ ಯೋಜನೆ ಸಂಬಂಧ ಸಹಕರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರದ
ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ತಾಲ್ಲೂಕಿ ಪ್ರತಿ ನಾಗರೀಕರಿಗೂ ತಲುಪಿಸಲು ಕಾರ್ಯಕ್ರಮಗಳನ್ನು ಆಯೋಜಿಸಿ
ವ್ಯಾಪಕ ಪ್ರಚಾರ ಮಾಡಿ ಅರಿವು ಮೂಡಿಸಲಾಗುತ್ತಿದೆ. ಯುವ ಜನತೆಗೆ ಉದ್ಯೋಗ ಸೃಷ್ಟಿಸಿ ಹಾಗೂ ಸ್ವಾವಲಂಭಬದುಕು
ನಿರ್ಮಿಸಿಕೊಡುವ ಉದ್ದೇಶದಿಂದ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು
ಕ್ರಮವಹಿಸಲಾಗುತ್ತಿದೆ. ಎಂದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರಗಳು ಹಾಗೂ ಬ್ಯಾನರ್‍ಗಳನ್ನು ಆಳವಡಿಸಿ ಯೋಜನೆಗಳ
ಕುರಿತು ಅರಿವು ಮೂಡಿಸಬೇಕಿದೆ ಎಂದರು.

ಸದಸ್ಯರಾದ ಮುದಸಿರ್ ಮಾತನಾಡಿ, ಸಭೆಯಲ್ಲಿ ನೀಡುವ ಮಾಹಿತಿಗಳು ಆಂಗ್ಲ ಭಾಷೆಯಲ್ಲಿದೆ ಇದರಿಂದ ನಮಗೆ
ಅರ್ಥವಾಗುವುದಿಲ್ಲ ಕನ್ನಡ ನಮ್ಮ ಭಾಷೆಯಾಗಿದ್ದು ಅದರಲ್ಲಿಯೇ ಮಾಹಿತಿಯನ್ನು ನೀಡಿ ಹಾಗೇಯೇ ಶಕ್ತಿ ಯೋಜನೆಯಡಿ
ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಬಸ್ಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯವವರ ಹೆಚ್ಚಾಗುತ್ತಿದ್ದಾರೆ ಇದರಿಂದ ಬಸ್ಸ್‍ಗಳ
ಸಂಖ್ಯೆಯನ್ನು ಹೆಚ್ಚಳ ಮಾಡುವಂತೆ ಈಗಲೇ ನಿಮ್ಮ ಮೇಲಿನ ಅಧಿಕಾರಿಗಳಿಗೆ ಪತ್ರವನ್ನು ಬರೆಯಿರಿ, ಗೃಹಜ್ಯೋತಿ ಯೋಜನೆಯಡಿ
ಇನ್ನೂ ಹಲವಾರು ಜನ ಅರ್ಜಿಯನ್ನು ಹಾಕಿಲ್ಲ ಸರ್ಕಾರ ಅವರಿಗಾಗಿ ಯೋಜನೆಯನ್ನು ಮಾಡಿದೆ ಅದರ ಸದುಪಯೋಗವನ್ನು
ಪಡೆಯವಂತೆ ಮನವೂಲಿಸಿ ನಿಮಗೆ ಆಗದಿದ್ದರೆ ನಾವು ಸಹಾ ಬರುತ್ತವೆ ಜನತೆಯ ಮನವೂಲಿಸುವುದಾಗಿ ತಿಳಿಸಿದಾಗ ಅಧ್ಯಕ್ಷರು
ಸಹಾ ಇದಕ್ಕೆ ಧ್ವನಿಗೂಡಿಸಿ ಮುಂದಿನ ಸಭೆಗೆ ಬರುವಾಗ ಎಲ್ಲಾ ಮಾಹಿತಿಯನ್ನು ಕನ್ನಡದಲ್ಲಿಯೇ ನೀಡಿ ಇದರಿಂದ ಎಲ್ಲರಿಗೂ ಸಹಾ

ಉಪಯೋಗವಾಗುತ್ತದೆ ನಮಗೆÀ ಆಂಗ್ಲ ಪದವನ್ನು ಈದಲು ಬರುವುದಿಲ್ಲ ನಾವೆಲ್ಲಾ ಕನ್ನಡದಲ್ಲಿಯೇ ಓದಿದ್ದು ಎಂದಾಗಿ
ಅಧಿಕಾರಿಗಳು ಮುಂದಿನ ಸಭೆಗೆ ಕನ್ನಡದಲ್ಲಿಯೇ ನೀಡುವುದಾಗಿ ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಜನವರಿ 2025ರ ಅಂತ್ಯಕ್ಕೆ 91618 ಜನರಿದ್ದು ಇದರಲ್ಲಿ ಓಬಿಸಿ 16278,
ಇತರೆ 25607 ಹಿಂದುಳಿದ 12176 ಎಸ್.ಟಿ.14608 ಎಸ್.ಸಿ.22949 ಜನರು ಇದರ ಲಾಭವನ್ನು ಪಡೆಯುತ್ತಿದ್ದಾರೆ. ಇದ್ದಲ್ಲದೆ
ಜಿ.ಎಸ್.ಟಿ. ಹಾಗೂ ಐ.ಟಿಯಲ್ಲಿ 1152 ಜನ ಬರಲಿದ್ದು ಇದರಲ್ಲಿ 300 ಜನ ಗೃಹಲಕ್ಷ್ಮಿ ಯೋಜನೆಗಾಗಿ ನಮಗೆ ಪುನರ್ ಅರ್ಜಿಯನ್ನು
ಸಲ್ಲಿಸಿದ್ದಾರೆ.ತಿದ್ದುಪಡಿಯಾದ ಪಡಿತರ ಚೀಟಿಗಳ, ಆದಾಯ ತೆರಿಗೆ ಪಾವತಿದಾರರಲ್ಲದ ಫಲಾನುಭವಿಗಳ ಪಟ್ಟಿಯನ್ನು ಸರಿಪಡಿಸಲು
ಕೇಂದ್ರ ಕಛೇರಿಗೆ ಕಳುಹಿಸಲಾಗಿದೆ. ಈಗಾಗಲೇ ಇಲಾಖೆಯಿಂದ ಈ ಯೋಜನೆಯಡಿ ನೊಂದಾಯಿಸಿಕೊಳ್ಳುವಂತೆ ಅವರಿಗೆ
ಉತ್ತೇಜನ ನೀಡುತ್ತಿದ್ದು, ಗ್ಯಾರಂಟಿ ಸಮಿತಿಯ ಪ್ರತಿನಿಧಿಗಳು ತಮ್ಮ ಗಮನಕ್ಕೆ ಬಂದಂತಹವರನ್ನು ಈ ಯೋಜನೆಗೆ
ನೊಂದಾಯಿಸಿಕೊಳ್ಳುವಂತೆ ತಿಳಿಸಬೇಕೆಂದು ಅಧಿಕಾರಿಗಳು ಸಭೆಗೆ ಹೇಳಿದರು.

ಶಕ್ತಿ ಯೋಜನೆಯಡಿ ಫೆಭ್ರವರಿ 11ರವರೆಗೆ ಚಿತ್ರದುರ್ಗ ತಾಲ್ಲೂಕಿನಲ್ಲಿ 1,73,57,322 ಜನ ಸಂಚಾರವನ್ನು ಮಾಡಿದ್ದು ಇದರಲ್ಲಿ
1,68,73,456 ಮಹಿಳೆಯರು, 4,83,866 ಮಕ್ಕಳು ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಸಂಚಾರ ಮಾಡಿದ್ದಾರೆ. ಈ ಬಾಬು ರೂ.
72,21,98,979 ಕೋಟಿ ಹಣ ಸರ್ಕಾರದಿಂದ ನಿಗಮಕ್ಕೆ ಬಿಡುಗಡೆ ಮಾಡಲಾಗಿದೆ ಚಿತ್ರದುರ್ಗ ವಿಭಾಗ ಇವರು ಸಭೆಗೆ ಮಾಹಿತಿ
ನೀಡಿದರು.

ಯುವನಿಧಿ ಯೋಜನೆಯಡಿ ಡಿಸೆಂಬರ್ 2024 ರವರೆಗೆ ಪದವಿ ಮತ್ತು ಡಿಪ್ಲೋಮೋದಲ್ಲಿ 1728 ವಿದ್ಯಾರ್ಥಿಗಳಿದ್ದು, ಇದರಲ್ಲಿ 1314
ವಿದ್ಯಾರ್ಥಿಗಳು ಹೆಸರನ್ನು ನೊಂದಾಯಿಸಿದ್ದು, ಪದವಿಯಲ್ಲಿ 1290 ಡಿಪೋಮದಲ್ಲಿ 24 ಜನ ವಿದ್ಯಾರ್ಥಿಗಳು ತಮ್ಮ ಹೆಸರನ್ನು
ನೊಂದಾಯಿಸಿದ್ದಾರೆ. ಇದರಿಂದ ಒಟ್ಟು 21,03,30000 ರೂ.ಗಳನಿರುದ್ಯೋಗ ಭತ್ಯೆಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ
ಡಿಬಿಟ್ಟ ಮೂಲಕ ವರ್ಗಾವಣೆಯಾಗಿರುತ್ತದೆ. ಜಿಲ್ಲಾ ಉದ್ಯೋಗಾಧಿಕಾರಿಯವರು ಸಭೆಗೆ ಮಾಹಿತಿ ನೀಡಿದರು.

2023 ಪದವಿ/ಸ್ನಾತಕೋತ್ತರ ಹಾಗೂ 2024ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನೊಂದಣಿ ಮಾಡಿಸಲು ನೋಂದಣಿ ಪ್ರಕ್ರಿಯೆ
ಆರಂಭಿಸಲು ಸರ್ಕಾರದಿಂದ ನಿರ್ದೇಶನವಿದೆ.ಪ್ರಾಧಿಕಾರದ ಎಲ್ಲ ಪ್ರತಿನಿಧಿಗಳು ಅರ್ಹ ಫಲಾನುಭವಿಗಳನ್ನು ಈ ಯೋಜನೆಯಡಿ
ನೊಂದಣಿ ಮಾಡಿಸುವಲ್ಲಿ ಸಹಕಾರ ನೀಡಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಮನವಿ ಮಾಡಿದರು.

ಚಿತ್ರದುರ್ಗ ತಾಲ್ಲೂಕಿನಲ್ಲಿ ಒಟ್ಟು 63570 ಪಡಿತರ ಚೀಟಿದಾರರಿದ್ದಾರೆ ಇವುಗಳಲ್ಲಿ 61179 ಪಡಿತರ ಚೀಟಿಗಳು ಡಿಬಿಟಿ ಯೋಜನೆಗೆ
ಅರ್ಹವಾಗಿದೆ. ಸೆಪ್ಟೆಂಬರ್ ಅಂತ್ಯದವರೆಗೆ 61179 ಪಡಿತರದಾರರಿಗೆ ಅಕ್ಕಿ ಬಾಯ್ಸನ ಹಣ ಪಡಿತರದಾರರ ಖಾತೆಗಳಿಗೆ
ವರ್ಗಾವಣೆಯಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದಾಗಿ 2391 ಪಡಿತರದಾರರಿಗೆ ಹಣ

ವರ್ಗಾವಣೆಯಾಗಿರುವುದಿಲ್ಲ. ಇವುಗಳನ್ನು ಪರಿಶೀಲಿಸಿ ಶೇಕಡ 100ರಷ್ಟು ಫಲಾನುಭವಿಗಳಿಗೆ ಹಣ ವರ್ಗಾವಣೆಗೆ
ಕ್ರಮವಹಿಸಲಾಗುವುದೆಂದು ಅಪಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮೂಲಕ ಸಭೆಗೆ ಮಾಹಿತಿ ನೀಡಿದರು.

ಗೃಹ ಜ್ಯೋತಿ ಯೋಜನೆಯಡಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಚಿತ್ರದುರ್ಗ ಗ್ರಾಮಾಂತರದಲ್ಲಿ ಒಟ್ಟು 45094 ಜನ ಗ್ರಾಹಕರಿದ್ದು ಇದರಲ್ಲಿ
42580 ಜನ ಗ್ರಾಹಕರು ಈ ಯೋಜನೆಯ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಇನ್ನೂ 2514 ಜನ ಗ್ರಾಹಕರು ಈ ಯೋಜನೆಯ
ಸದುಪಯೋಗವನ್ನು ಪಡೆಯಬೇಕಿದೆ, ಇದರಿಂದ ಜನವರಿ 2025ರ ಮಾಹೆ ಅಂತ್ಯಕ್ಕೆ 1,56,24,981.22 ರೂ ನಿಗಮಕ್ಕೆ
ಸಂದಾಯವಾಗಿದೆ. ಇದೆ ರೀತಿ ಚಿತ್ರದುರ್ಗ ನಗರ ಪ್ರದೇಶದಲ್ಲಿ 91329 ಜನ ಗ್ರಾಹಕರಿದ್ದು ಇದರಲ್ಲಿ 68691 ಜನ ಇದರ
ಸದುಪಯೋಗವನ್ನು ಪಡೆಯುತ್ತಿದ್ದರೆ 22638 ಜನ ಇದರ ಪ್ರಯೋಜವನ್ನು ಪಡೆದಿಲ್ಲ, ಗೃಹಜ್ಯೋತಿಯಿಂದಾಗಿ ನಿಗಮಕ್ಕೆ
3,32,88,294 ರೂ. ಸಂದಾಯವಾಗಿದೆ ಎಂದು ಬೆಸ್ಕಾಂನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಗ್ಯಾರೆಂಟಿ ಯೋಜನೆಯ ಸದಸ್ಯ ಕಾರ್ಯದರ್ಶಿಗಳಾದ ರವಿಕುಮಾರ್, ಗ್ಯಾರೆಂಟಿಯ ಚಿತ್ರದುರ್ಗ ತಾಲ್ಲೂಕು ಸಮಿತಿಯ
ಸದಸ್ಯರಾದ ನಜ್ಮತಾಜ್, ಆರ್.ಶಿವಮೂರ್ತಿ, ಶಶಿಕಿರಣ್, ಕಾಂತರಾಜ್, ಎಂ.ತಿಪ್ಪೇಸ್ವಾಮಿ, ಸೈಯದ್ ಸಾಧಿಕ್, ದಿನೇಶ್,
ಮಹಮ್ಮದ್ ಮುದಾಸಿರ್ ನವಾಜ್, ಮಂಜುನಾಥ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *