ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. ೧೭ ಚಿಟ್ಸ್ ಫಂಡ್ನಲ್ಲಿ ಹಣವನ್ನು ತೊಡಗಿಸುವುದರ ಮೂಲಕ ಹಣವನ್ನು ಉಳಿತಾಯದ ಜೊತೆಗೆ ತಮ್ಮ ಮುಂದಿನ ಅಗತ್ಯಗಳಿಗೆ ಸಹಾ ಬಳಕೆ ಮಾಡಿಕೊಳ್ಳಬಹುದಾಗಿದೆ ಈಗಾಗಲೇ ಲಕ್ಷಾಂತರ ಜನ ಇದರ ಉಪಯೋಗವನ್ನು ಪಡೆದಿದ್ದಾರೆ ಎಂದು ಮಾರ್ಗದರ್ಶಿ ಚಿಟ್ಸ್ಪ್ರ ವೈಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀಮತಿ ಶೈಲಜಾ ಕಿರಣ್ ತಿಳಿಸಿದರು.

ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯಲ್ಲಿನ ಜಗಳೂರು ಮಹಾಲಿಂಗಪ್ಪ ಆರ್ಕೇಡ್‌ದಲ್ಲಿ ಸೋಮವಾರ ಪ್ರಾರಂಭವಾದ
ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ನ ೧೨೨ನೇ ಶಾಖೆಯನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
೧೯೬೨ರಲ್ಲಿ ಪ್ರಾರಂಭವಾದ ನಮ್ಮ ಚಿಟ್ಸ್ ಫಂಡ್ ಕರ್ನಾಟಕದಲ್ಲಿ (೨೬) ಆಂಧ್ರ ಪ್ರದೇಶದಲ್ಲಿ (೩೭) ತೆಲಂಗಾಣದಲ್ಲಿ (೪೧)
ಹಾಗೂ ತಮಿಳುನಾಡಿನಲ್ಲಿ (೧೮) ಶಾಖೆಗಳು ಕಾರ್ಯ ನಿರ್ವಹಿಸುತ್ತಿದೆ, ಇದು ಕರ್ನಾಟಕದಲ್ಲಿ ೨೬ನೇ ಶಾಖೆಯಾಗಿದೆ. ಈ
ಸಾಲಿನಲ್ಲಿ ನಮ್ಮ ವ್ಯವಹಾರದ ಗುರಿಯನ್ನು ೧೨ ಸಾವಿರ ಕೋಟಿಗೆ ನಿಗಧಿ ಮಾಡಿದ್ದು ಈಗಾಗಲೇ ೧೦.೫೦೦ ಕೋಟಿ
ವ್ಯವಹಾರವನ್ನು ಮಾಡಲಾಗಿದೆ ಉಳಿದ ಆರ್ಥಿಕ ವರ್ಷದಲ್ಲಿ ನಮ್ಮ ಗುರಿಯನ್ನು ಮುಟ್ಟಲಾಗುವುದು. ನಮ್ಮ ಈ ಚಿಟ್ಸ್ ಫಂಡ್ ನಲ್ಲಿ
ಸುಮಾರು ೨,೨೨,೦೦೦ಜನ ಸದಸ್ಯರಿದ್ದಾರೆ. ೬೦ ಲಕ್ಷ ಗ್ರಾಹಕರಿದ್ದಾರೆ ಎಂದರು.
ನಮ್ಮ ಚಿಟ್ಸ್ ಫಂಡ್ ನಲ್ಲಿ ಹಣವನ್ನು ವಿವಿಧ ರೀತಿಯಲ್ಲಿ ತೂಡಗಿಸಿರುವ ಜನತೆ ಅದನ್ನು ಅವರು ವಿವಿಧ ರೀತಿಯ
ಉಪಯೋಗಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಮಗಳ ಮದುವೆ, ಮಗನ ಶಿಕ್ಷಣ, ಭೂಮಿ ಖರೀದಿ, ಆರೋಗ್ಯ, ಉದ್ಯಮೆ
ಸ್ಥಾಪನೆ, ವ್ಯವಹಾರ ಸೇರಿದಂತೆ ವಿವಿಧಡೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ, ಜನತೆ ತಮ್ಮ ಮುಂದಿನ ಭವಿಷ್ಯಕ್ಕಾಗಿ ನಮ್ಮಲ್ಲಿ
ಚೀಟಿಯನ್ನು ಹಾಕುತ್ತಿದ್ದಾರೆ ನಾವು ಸಹಾ ಅವರ ಬೇಕು ಬೇಡಗಳಿಗೆ ಸ್ಫಂದನೆ ಮಾಡಲಾಗುತ್ತಿದೆ ಅವರ ಚೀಟಿ ಹಣವನ್ನು ಭದ್ರವಾಗಿ
ಇಡಲಾಗುತ್ತದೆ, ಇದರ ಮೇಲೆ ಸಾಲವನ್ನು ಸಹಾ ನೀಡುವ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.
ನಮ್ಮಲ್ಲಿ ಚೀಟಿ ಹಾಕಿದವರು ನಮ್ಮ ಲಾಭದಲ್ಲಿ ಲಾಭಾಂಶವನ್ನು ಸಹಾ ನೀಡಲಾಗುತ್ತಿದೆ ಇದುವರೆವಿಗೂ ಶೇ.೬ ರಷ್ಟು
ಲಾಭಾಂಶವನ್ನು ನೀಡುತ್ತಾ ಬರಲಾಗಿದೆ. ಕರ್ನಾಟಕದಲ್ಲಿ ಉತ್ತಮವಾದ ಗ್ರಾಹಕರಿದ್ದಾರೆ ನಮ್ಮೇಲ್ಲಾ ಕೆಸಲಗಳಿಗೆ ಸಹಕಾರ
ನೀಡುತ್ತಿದ್ದಾರೆ. ಇದ್ದಲ್ಲದೆ ಮತ್ತಷ್ಟು ಗ್ರಾಹಕರನ್ನು ನಮ್ಮತ್ತ ಸೆಳೆಯವುದರ ಮೂಲಕ ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ಗೆ
ಗ್ರಾಹಕರನ್ನಾಗಿ ಮಾಡಲಾಗುವುದು. ಚಿಟ್ಸ್‌ನಿಂದ ಉಳಿತಾಯದ ಜೊತೆಗೆ ತಮ್ಮ ಮುಂದಿನ ಭವಿಷ್ಯಕ್ಕೂ ಸಹಾ
ಅನುಕೂಲವಾಗಲಿದೆ. ನಮ್ಮ ಚಿಟ್ಸ್ ಫಂಡ್‌ನ್ನು ಮುಂದಿನ ದಿನದಲ್ಲಿ ಬೇರೆ ರಾಜ್ಯಗಳಿಗೂ ಸಹಾ ವಿಸ್ತಾರ ಮಾಡುವ ಆಲೋಚನೆ
ಇದೆ ಎಂದರು.
ನಮ್ಮ ಗ್ರಾಹಕರು ಹಾಕಿದ ಹಣಕ್ಕೆ ಶೇ.೧೦೦ ರಷ್ಟು ಭದ್ರತೆಯನ್ನು ನೀಡಲಾಗುತ್ತದೆ. ಇಲ್ಲಿ ಚೀಟಿ ಹಣವನ್ನು ಪಡೆಯುವಾಗ
ನಿರ್ಧಿಷ್ಟವಾದ ದಾಖಲೆಗಳನ್ನು ನೀಡುವುದರ ಮೂಲಕ ಹಣವನ್ನು ಪಡೆಯಬೇಕಿದೆ. ನಾವು ಗ್ರಾಹಕರು ನೀಡುವ ಹಣವನ್ನು ಭದ್ರವಾಗಿ
ಬ್ಯಾಂಕ್‌ನಲ್ಲಿ ಇಡುವುದರ ಮೂಲಕ ಹಣಕ್ಕೆ ಭದ್ರತೆಯನ್ನು ನೀಡಲಾಗುತ್ತದೆ. ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ
ಎಲ್ಲವನ್ನು ಸಹಾ ಪರಾದರ್ಶಕವಾಗಿ ಮಾಡಲಾಗುತ್ತದೆ ಎಂದು ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ನ ವ್ಯವಸ್ಥಾಪಕ
ನಿರ್ದೆಶಕರಾದ ಶ್ರೀಮತಿ ಶೈಲಜಾ ಕಿರಣ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಿ ಚಿಟ್ಸ್ ಪ್ರವೈಟ್ ಲಿಮಿಟೆಡ್‌ನ ಉಪಾಧ್ಯಕ್ಷರಾದ ಬಲರಾಮಪ್ಪ, ನಿರ್ದೆಶಕರಾದ ಲಕ್ಷ್ಣಣರಾವ್,
ಕರ್ನಾಟಕ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಎ.ಚಂದ್ರಯ್ಯ, ಟಿ.ನಂಜುಂಡಪ್ಪ ಸೇರಿದಂತೆ ಮಾರ್ಗದರ್ಶಿ ಚಿಟ್ಸ್ ಪ್ರವೈಟ್
ಲಿಮಿಟೆಡ್‌ನ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.