Democratic Republic of Congo : ವಾಯುವ್ಯ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಭೀಕರ ಅಪಘಾತ ಸಂಭವಿಸಿದೆ. 200 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೋಟಾರ್ ಬೋಟ್ ಓವರ್ ಲೋಡ್ ನಿಂದಾಗಿ ಲುಲೋಂಗಾ ನದಿಯಲ್ಲಿ ಮುಳುಗಿದೆ.ಈ ಅಪಘಾತದಲ್ಲಿ 145 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ 55 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರೆಲ್ಲರೂ ತಮ್ಮ ಸರಕು ಮತ್ತು ಜಾನುವಾರುಗಳೊಂದಿಗೆ ರಿಪಬ್ಲಿಕ್ ಆಫ್ ಕಾಂಗೋಗೆ ತೆರಳುತ್ತಿದ್ದಾಗ ಬಸಾಂಕುಸು ಪಟ್ಟಣದ ಬಳಿ ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ. ಪ್ರಯಾಣಿಕರು, ಸರಕುಗಳು ಮತ್ತು ಜಾನುವಾರುಗಳು ತುಂಬಿದ್ದ ದೋಣಿ ನದಿಯಲ್ಲಿ ಮುಳುಗಿದೆ.
ಅಕ್ಟೋಬರ್ನಲ್ಲಿ, ಈಕ್ವಟೂರ್ ಪ್ರಾಂತ್ಯದ ಕಾಂಗೋ ನದಿಯಲ್ಲಿ ಇದೇ ರೀತಿಯ ದುರಂತ ಸಂಭವಿಸಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಡಿಆರ್ಸಿಯಲ್ಲಿ ದೋಣಿ ಅಪಘಾತಗಳು ಆಗಾಗ ನಡೆಯುತ್ತಿವೆ. ಇಲ್ಲಿ ರಸ್ತೆ ಇಲ್ಲದ ಕಾರಣ ಜನರು ದೋಣಿಗಳಲ್ಲಿ ಸಂಚರಿಸುತ್ತಾರೆ.
The post ಭೀಕರ ಜಲ ದುರಂತ : 145 ಮಂದಿ ಸಾವು…! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/4xeAPQ3
via IFTTT