ಹೈ ಶುಗರ್ ಮಾತ್ರವಲ್ಲ, ಲೋ ಶುಗರ್ ಕೂಡಾ ಅಪಾಯಕಾರಿಯೇ!ನಿಮಗೂ ಹೀಗಾಗುತ್ತಿದ್ದರೆ ಎಚ್ಚೆತ್ತುಕೊಳ್ಳಿ.

  • ಮಧುಮೇಹವು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆ
  • ಪ್ರಪಂಚದಾದ್ಯಂತ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.
  • ಮಧುಮೇಹದ ಲಕ್ಷಣಗಳನ್ನು ಗುರುತಿಸುವುದು ಮತ್ತು ನಿಯಂತ್ರಿಸುವುದು ಮುಖ್ಯ.

ಬೆಂಗಳೂರು : ಮಧುಮೇಹವು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ ತಜ್ಞರ ಪ್ರಕಾರ, ಜೀವನಶೈಲಿ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುವ ಮೂಲಕ ಮಧುಮೇಹವನ್ನು ಸುಲಭವಾಗಿ ನಿರ್ವಹಿಸಬಹುದು. ಪ್ರಪಂಚದಾದ್ಯಂತ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಮಧುಮೇಹವನ್ನು ತಡೆಗಟ್ಟಲು ಮತ್ತು ನಿರ್ವಹಿಸಲು, ಮಧುಮೇಹದ ಲಕ್ಷಣಗಳನ್ನು ಗುರುತಿಸುವುದು ಮತ್ತು ನಿಯಂತ್ರಿಸುವುದು ಮುಖ್ಯ.

ಕಡಿಮೆ ರಕ್ತದ ಸಕ್ಕರೆಯ ಲಕ್ಷಣಗಳು : 
ಮಧುಮೇಹದ ಲಕ್ಷಣಗಳ ಬಗ್ಗೆ ಮಾತನಾಡುವುದಾದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿ ದೊಡ್ಡ ಲಕ್ಷಣವಾಗಿದೆ. ಪದೇ ಪದೇ ಬಾಯಾರಿಕೆ, ಮೂತ್ರ ವಿಸರ್ಜನೆ ಮತ್ತು ಆಯಾಸದಂತಹ ಸಮಸ್ಯೆಗಳು ಕಂಡುಬರುತ್ತವೆ. ಮಧುಮೇಹದ ಹಲವು ಲಕ್ಷಣಗಳು ಕೈ ಅಥವಾ ಪಾದಗಳಲ್ಲಿ ಮಾತ್ರ ಕಂಡುಬರುತ್ತವೆ. ಕೈಗಳ ಚರ್ಮದಲ್ಲಿನ ಬದಲಾವಣೆಗಳ ಹೊರತಾಗಿ, ಇತರ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದರೂ ಅನೇಕ ಲಕ್ಷಣಗಳು ಗಂಭೀರವಾಗಬಹುದು.

ಬೆರಳುಗಳಲ್ಲಿ ನೋವು :
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದಾಗ, ಬೆರಳುಗಳಲ್ಲಿ ನೋವು ಮತ್ತು ಜುಮ್ಮೆನಿಸುವಿಕೆ ಅನುಭವವಾಗಬಹುದು. ಕೈಗಳ ಬೆರಳುಗಳಲ್ಲಿ ಮೃದುತ್ವವೂ ಹೆಚ್ಚಾಗುತ್ತದೆ. ಇದಲ್ಲದೆ, ಚರ್ಮದ ಬಣ್ಣ ಬದಲಾಗುವುದು ಮತ್ತು ಕೈಗಳ ಚರ್ಮ ಒಣಗುವುದು ಮುಂತಾದವು ಕೂಡಾ ಮಧುಮೇಹವಾಗಿರಬಹುದು. 

ತುಟಿಗಳು ಮರಗಟ್ಟುವುದು :
ಸಕ್ಕರೆ ಮಟ್ಟ ಕಡಿಮೆಯಾದಾಗ, ಮಧುಮೇಹಿಗಳ ತುಟಿಗಳು ಮರಗಟ್ಟಬಹುದು. ಇದರೊಂದಿಗೆ, ಕೆನ್ನೆಗಳಲ್ಲಿ ಮತ್ತು ನಾಲಿಗೆಯಲ್ಲಿ ಜುಮ್ಮೆನಿಸುವಿಕೆ ಸಂವೇದನೆಯು ಸಹ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಇರುವ ಲಕ್ಷಣಗಳಾಗಿರಬಹುದು.  

ತುಂಬಾ ಹಸಿವಾಗುವುದು :
ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದಾಗ ಹಸಿವು ಹೆಚ್ಚಾಗಬಹುದು. ಇದರಿಂದಾಗಿ, ಅವರಿಗೆ ಹೆಚ್ಚಾಗಿ ಹಸಿವಾಗುತ್ತದೆ. ಅಲ್ಲದೆ   ಸಿಹಿತಿಂಡಿ ತಿನ್ನುವ ಹಂಬಲ ಕೂಡಾ ಹೆಚ್ಚಾಗುತ್ತದೆ.

ಯಾವ ಕೆಲಸಕ್ಕೂ ಗಮನ ಹರಿಸುವುದು ಸಾಧ್ಯವಾಗುವುದಿಲ್ಲ : 
ಯಾವುದೇ ಕೆಲಸಕ್ಕೆ ಗಮನ ಹರಿಸುವುದು ಸಾಧ್ಯ ವಾಗದೇ ಇರುವುದು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದರ ಲಕ್ಷಣವೂ ಆಗಿರಬಹುದು. ಸಕ್ಕರೆ ಮಟ್ಟ ಕಡಿಮೆಯಾಗುವುದರಿಂದ ನೀವು ಗೊಂದಲಕ್ಕೊಳಗಾಗಬಹುದು ಮತ್ತು ಹೆಚ್ಚಿನ ಒತ್ತಡಕ್ಕೂ ಕಾರಣವಾಗಬಹುದು. 

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದುಗಳನ್ನು ಆಧರಿಸಿದೆ. SAMAGRASUDDI ಇದನ್ನು ಅನುಮೋದಿಸುವುದಿಲ್ಲ.

Source : https://zeenews.india.com/kannada/health/not-only-high-sugar-but-also-low-sugar-is-dangerous-know-the-symptoms-289623

Leave a Reply

Your email address will not be published. Required fields are marked *