Natural Ways to Clean Lungs: ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಶ್ವಾಸಕೋಶವನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಬಹುದಾಗಿದೆ. ಜೊತೆಗೆ ಶ್ವಾಸಕೋಶದ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆ ನೈಸರ್ಗಿಕ ಪದಾರ್ಥಗಳು ಯಾವುವು ಎಂಬುದನ್ನು ತಿಳಿಯೋಣ.

Natural Ways to Clean Lungs: ಲಂಗ್ಸ್ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಈ ಶ್ವಾಸಕೋಶ ಆರೋಗ್ಯವನ್ನು ಕಾಪಾಡಿಕೊಳ್ಳಲು ತಜ್ಞರು ನಿಯಮಿತ ವ್ಯಾಯಾಮ ಹಾಗೂ ಸರಿಯಾದ ಆಹಾರ ಕ್ರಮಗಳನ್ನು ಅನುಸರಿಸಲು ತಜ್ಞರು ಸೂಚಿಸುತ್ತಾರೆ. ನೈಸರ್ಗಿಕವಾಗಿ ಲಭ್ಯವಿರುವ ಕೆಲವು ಪದಾರ್ಥಗಳು ಶ್ವಾಸಕೋಶದ ಆರೋಗ್ಯಕ್ಕೆ ತುಂಬಾ ಸಹಾಯಕವಾಗಿವೆ. ಇವುಗಳು ಶ್ವಾಸಕೋಶವನ್ನು ಶುಚಿಗೊಳಿಸುವುದು ಮಾತ್ರವಲ್ಲದೆ ಅವುಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ತುಳಸಿ: ಆಯುರ್ವೇದ ತಜ್ಞರು ತಿಳಿಸುವ ಪ್ರಕಾರ, ತುಳಸಿಯಲ್ಲಿ ಹಲವಾರು ಆರೋಗ್ಯಕಾರಿ ಗುಣಗಳಿವೆ. ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಸಾಕಷ್ಟು ಗುಣಗಳು ಇದರಲ್ಲಿವೆ. ತುಳಸಿಯು ಉತ್ಕರ್ಷಣ ನಿರೋಧಕ ಹಾಗೂ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಎಂದು ಜರ್ನಲ್ ಆಫ್ ಆಯುರ್ವೇದ ಅಂಡ್ ಇಂಟರಾಗೇಟಿವ್ (Journal of Ayurveda and Interrogative Medicine) ತಿಳಿಸಿದೆ. ತುಳಸಿ ಎಲೆಗಳು ಶ್ವಾಸಕೋಶವನ್ನು ಸ್ವಚ್ಛಗೊಳಿಸಲು ಮತ್ತು ನೇರವಾಗಿ ಅಥವಾ ಚಹಾದ ರೂಪದಲ್ಲಿ ಸೇವಿಸಿದರೆ ಉಸಿರಾಟ ಸುಲಭಗೊಳಿಸುತ್ತದೆ.

ಆಡುಸೋಗೆ: ಮಲಬಾರ್ ನಟ್ ಎಂದು ಕರೆಯಲ್ಪಡುವ ಆಡುಸೋಗೆ ಎಲೆಗಳು ಶ್ವಾಸಕೋಶವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿವೆ ಎಂದು ತಜ್ಞರು ತಿಳಿಸುತ್ತಾರೆ. ಇದರಲ್ಲಿರುವ ಆಲ್ಕಲಾಯ್ಡ್ ಗುಣಲಕ್ಷಣಗಳು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.

ಆಡುಸೋಗೆ ಎಲೆಗಳು ಕಫವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಕೆಮ್ಮನ್ನು ಸಹ ನಿವಾರಿಸುತ್ತದೆ. ಇದಲ್ಲದೆ, ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಉಸಿರಾಟದ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ಇಂಡಿಯನ್ ಜರ್ನಲ್ ಆಫ್ ಫಾರ್ಮಕಾಲಜಿಯಲ್ಲಿ ತೋರ್ಪಡಿಸಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಆಡುಸೋಗೆ ಎಲೆಗಳು ಉಸಿರಾಟದ ಪ್ರದೇಶವನ್ನು ಸ್ವಚ್ಛಗೊಳಿಸಲು ಹಾಗೂ ಲಂಗ್ಸ್ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಶುಂಠಿ: ಶುಂಠಿಯಲ್ಲಿರುವ ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳು ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್‌ನಲ್ಲಿ ಶುಂಠಿಯು ಉಸಿರಾಟದ ಸೋಂಕುಗಳು ಮತ್ತು ಉಸಿರಾಟದ ಪ್ರದೇಶದ ಉರಿಯೂತ ಕಡಿಮೆ ಮಾಡುವ ಅನೇಕ ಗುಣಗಳನ್ನು ಹೊಂದಿದೆ ಎಂದು ಬಹಿರಂಗಪಡಿಸಲಾಗಿದೆ. ದೈನಂದಿನ ಆಹಾರದಲ್ಲಿ ಶುಂಠಿಯನ್ನು ಸೇರಿಸುವುದು ಶ್ವಾಸಕೋಶವನ್ನು ಸ್ವಚ್ಛಗೊಳಿಸಲು ಹಾಗೂ ಉಸಿರಾಟದ ಕಾರ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಅತಿಮಧುರ: ಶ್ವಾಸಕೋಶದ ಕಾರ್ಯವನ್ನು ಸುಧಾರಿಸುವಲ್ಲಿ ಅತಿಮಧುರ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜರ್ನಲ್ ಆಫ್ ಎಥ್ನೋಫಾರ್ಮಾಕಾಲಜಿಯಲ್ಲಿ, ಅತಿಮಧುರ ಉರಿಯೂತದ ಗುಣಲಕ್ಷಣಗಳು ಉಸಿರಾಟದ ಪ್ರದೇಶದ ಸೋಂಕನ್ನು ನಿವಾರಿಸುತ್ತದೆ ಎಂದು ತಿಳಿದಿದೆ. ಅತಿಮಧುರ ಬ್ರಾಂಕೈಟಿಸ್ ಮತ್ತು ಉಸಿರಾಟದ ತೊಂದರೆಯನ್ನು ನಿವಾರಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಅರಿಶಿನ: ಅರಿಶಿನದಲ್ಲಿ ಉರಿಯೂತ ನಿವಾರಕ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಹೇರಳವಾಗಿವೆ. ಕರ್ಕ್ಯುಮಿನ್ ಉಸಿರಾಟದ ಸಮಸ್ಯೆಗಳನ್ನು ಪರಿಹರಿಸಲು ತುಂಬಾ ಉಪಯುಕ್ತವಾಗಿದೆ. ಅರಿಶಿನ ಆಸ್ತಮಾ, ಬ್ರಾಂಕೈಟಿಸ್ ಹಾಗೂ ಶ್ವಾಸನಾಳದ ಉರಿಯೂತದಂತಹ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಜರ್ನಲ್ ಆಫ್ ಕ್ಲಿನಿಕಲ್ ಬಯೋಕೆಮಿಸ್ಟ್ರಿ ಮತ್ತು ನ್ಯೂಟ್ರಿಷನ್‌ನಲ್ಲಿ ತೋರಿಸಲಾಗಿದೆ. ಅರಿಶಿನವನ್ನು ದಿನನಿತ್ಯದ ಆಹಾರದ ಭಾಗವಾಗಿ ಮಾಡುವುದರಿಂದ ಶ್ವಾಸಕೋಶಗಳು ಆರೋಗ್ಯಕರವಾಗಿರುತ್ತವೆ ಎಂದು ತಿಳಿದುಬಂದಿದೆ.
ಹಿಪ್ಪಲಿ: ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಹಿಪ್ಪಲಿ ಚೆನ್ನಾಗಿ ಕೆಲಸ ಮಾಡುತ್ತದೆ. ಇದರ ಜೈವಿಕ ಸಕ್ರಿಯ ಗುಣಲಕ್ಷಣಗಳು ಬ್ರಾಂಕೈಟಿಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹಿಪ್ಪಲಿ ಕಫವನ್ನು ತೆಗೆದುಹಾಕಲು ಹಾಗೂ ಉಸಿರಾಟದ ಕಾರ್ಯವನ್ನು ಸುಧಾರಿಸಲು ಸಹ ಬಹಿರಂಗವಾಗಿದೆ. ಆಸ್ತಮಾ ಮತ್ತು ಶ್ವಾಸಕೋಶದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಹಿಪ್ಪಲಿ ಕಾರ್ಯನಿರ್ವಹಿಸುತ್ತದೆ ಎಂದು ಜರ್ನಲ್ ಆಫ್ ಎಥ್ನೋಫಾರ್ಮಾಕಾಲಜಿಯಲ್ಲಿ (Journal of Ethnopharmacology) ತೋರಿಸಲಾಗಿದೆ.
ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.