
ಬೆಂಗಳೂರು: ಕುಂಭಮೇಳ ಟೂರ್ ಪ್ಯಾಕೇಜ್ (Kumbha Mela Tour Package) ನೆಪದಲ್ಲಿ ಜನರಿಗೆ 70 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜನಗರ (Govindarajanagar) ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ರಾವ್ ಬಂಧಿತ ಆರೋಪಿ. ಈತ ಪಾಂಚಜನ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಹೆಸರಲ್ಲಿ ಜಾಹೀರಾತು ನೀಡಿದ್ದ. ಜಾಹೀರಾತಿನಲ್ಲಿ ಅಯೋಧ್ಯೆ, ಕಾಶಿ, ಪ್ರಯಾಗ್‌ರಾಜ್ ಟೂರ್ ಪ್ಯಾಕೇಜ್ ಬಗ್ಗೆ ತಿಳಿಸಿ 7 ದಿನಗಳ ಪ್ಯಾಕೇಜ್‌ಗೆ ತಲಾ 49,000 ರೂ. ಪಡೆದು ಜನರಿಗೆ ವಂಚಿಸಿದ್ದ.
ರಾಘವೇಂದ್ರ ಸುಮಾರು ಇಪ್ಪತ್ತು ಜನರ ಬಳಿ ಹಣ ಪಡೆದು 70 ಲಕ್ಷ ರೂ. ವಂಚನೆ ಮಾಡಿದ್ದ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.