ನೀವು ದೈನಂದಿನ ಆಹಾರದಲ್ಲಿ ಮೊಸರು ಸೇವಿಸುತ್ತೀರಾ? ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ: ಅಧ್ಯಯನ.

Reduces The risk of Colon Cancer: ಊಟದ ಸಮಯದಲ್ಲಿ ಯಾವುದೇ ಪದಾರ್ಥಗಳಿದ್ದರೂ ಕೊನೆಯಲ್ಲಿ ಸ್ವಲ್ಪ ಮೊಸರು ಸೇವಿಸುವ ಅಭ್ಯಾಸ ಹಲವು ಜನರಿಗೆ ಇದ್ದೇ ಇರುತ್ತದೆ. ಇನ್ನು ಕೆಲವರು ಮೊಸರು ಮುಟ್ಟುವುದೇ ಇಲ್ಲ. ನಿಮ್ಮ ದೈನಂದಿನ ಆಹಾರದಲ್ಲಿ ಮೊಸರು ಸೇವಿಸುವುದರಿಂದ ಅಪಾಯಕಾರಿ ಕ್ಯಾನ್ಸರ್ ಬರುವುದನ್ನು ತಡೆಯಲು ಸಾಧ್ಯವಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಅಧ್ಯಯನ ಏನು ತಿಳಿಸುತ್ತದೆ?: ನಿಯಮಿತವಾಗಿ ಮೊಸರು ಸೇವನೆ ಮಾಡುವುದರಿಂದ ಇಡೀ ಜೀರ್ಣಾಂಗವ್ಯೂಹದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಜೊತೆಗೆ ಮಧುಮೇಹ ಬರುವ ಅಪಾಯವೂ ಕಡಿಮೆಯಾಗುತ್ತದೆ ಎಂದು ಕೆಲವು ಅಧ್ಯಯನಗಳು ಬಹಿರಂಗಪಡಿಸಿದೆ. ಇತ್ತೀಚಿನ ಅಧ್ಯಯನವೊಂದು ವಾರಕ್ಕೆ ಎರಡು ಇಲ್ಲವೇ ಅದಕ್ಕೂ ಹೆಚ್ಚು ಕಪ್ ಮೊಸರು ಸೇವನೆ ಮಾಡುವಂತ ಜನರಿಗೆ ಕರುಳಿನ (ಕೊಲೊನ್) ಕ್ಯಾನ್ಸರ್ ಬರುವ ಅಪಾಯ ಕಡಿಮೆ ಇರುತ್ತದೆ. ವಿಶೇಷವಾಗಿ ದೊಡ್ಡ ಕರುಳಿನ ಬಲಭಾಗದ ಕ್ಯಾನ್ಸರ್ ಬರುವುದನ್ನ ತಡೆಗಟ್ಟುತ್ತದೆ ಎಂದು ತಿಳಿಸಿದೆ.

COLON CANCER  CURD HEALTH BENEFITS  ಮೊಸರಿನ ಆರೋಗ್ಯದ ಪ್ರಯೋಜನಗಳು  CURD BENEFITS

ದೊಡ್ಡ ಕರುಳಿನ ಬಲಭಾಗದ ಕ್ಯಾನ್ಸರ್, ಎಡಭಾಗದ ಕ್ಯಾನ್ಸರ್​ಗಿಂತ ಹೆಚ್ಚು ಗಂಭೀರ ಮತ್ತು ಅಪಾಯಕಾರಿಯಾಗಿರುತ್ತದೆ. ಹಾರ್ವರ್ಡ್ ಟಿಎಚ್ ​​ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮತ್ತು ಬ್ರಿಗ್ಯಾಮ್ ಮತ್ತು ಮಹಿಳಾ ಆಸ್ಪತ್ರೆ ಆಫ್ ಮಾಸ್‌ನ ಸಂಶೋಧಕರು ಕೈಗೊಂಡಿರುವ ಜಂಟಿ ಅಧ್ಯಯನದಲ್ಲಿ ಈ ವಿಷಯವು ಬಹಿರಂಗವಾಗಿದೆ.

ಮೊಸರಿನಲ್ಲಿನ ಬ್ಯಾಕ್ಟೀರಿಯಾಗಳು ಕರುಳಿನಲ್ಲಿ ಬ್ಯಾಕ್ಟೀರಿಯಾದ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಸಂಶೋಧಕರು ಸುಮಾರು 3 ದಶಕಗಳಲ್ಲಿ 150,000ಕ್ಕೂ ಹೆಚ್ಚು ಜನರಿಂದ ಪಡೆದ ಡೇಟಾ ವಿಶ್ಲೇಷಣೆ ಮಾಡಿದ್ದಾರೆ. ಮೊಸರಿನಲ್ಲಿ ಬೈಫಿಡೋಬ್ಯಾಕ್ಟೀರಿಯಂ ಇರುತ್ತದೆ. ಹೀಗಾಗಿ ನಿಯಮಿತವಾಗಿ ಮೊಸರು ತಿನ್ನುವ ಜನರು ಪ್ರಾಕ್ಸಿಮಲ್ ಕೊಲೊರೆಕ್ಟಲ್ ಕ್ಯಾನ್ಸರ್ (ದೊಡ್ಡ ಕರುಳಿನ ಬಲಭಾಗದಲ್ಲಿ ಸಂಭವಿಸುವ ಕ್ಯಾನ್ಸರ್​) ಬರುವ ಅಪಾಯ ಕಡಿಮೆಯಿದೆ ಎಂದು ಸಂಶೋಧನೆ ಸ್ಪಷ್ಟವಾಗಿ ತಿಳಿಸಿದೆ.

COLON CANCER  CURD HEALTH BENEFITS  ಮೊಸರಿನ ಆರೋಗ್ಯದ ಪ್ರಯೋಜನಗಳು  CURD BENEFITS

”ಮೊಸರು ಆರೋಗ್ಯಕರ ಬ್ಯಾಕ್ಟೀರಿಯಾಗಳ ಸಮತೋಲನ ಕಾಯ್ದುಕೊಳ್ಳಲು ಉತ್ತೇಜಿಸುತ್ತದೆ. ಇದು ಕರುಳುಗಳು ಸದೃಢವಾಗಿರುತ್ತದೆ ಜೊತೆಗೆ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ. ಪ್ರಮುಖವಾಗಿ ಕೊಲೊನ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಅಧ್ಯಯನದ ಸಹ-ಹಿರಿಯ ಲೇಖಕ, ಹಾರ್ವರ್ಡ್ ಚಾನ್ ಶಾಲೆಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಸಹವರ್ತಿ, ಬ್ರಿಗ್ಯಾಮ್ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ರೋಗಶಾಸ್ತ್ರದ ಬೋಧಕ ಟೊಮೊಟಕಾ ಉಗೈ ತಿಳಿಸಿದರು.

ಮೊಸರು ಸೇವಿಸುವುದರಿಂದ ಲಭಿಸುವ ಲಾಭಗಳು:

  • ಮೊಸರಿನಲ್ಲಿ ಕ್ಯಾಲ್ಸಿಯಂ ಮೂಳೆಯ ಬಲ ಹಾಗೂ ಸಾಂದ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆ ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮೊಸರು ಇದು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
  • ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಮಲಬದ್ಧತೆ, ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.
  • ಮೊಸರಿನಲ್ಲಿ ಕೊಬ್ಬಿನಂಶ ಕಡಿಮೆಯಿದೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ತುಂಬಾ ಒಳ್ಳೆಯದು. ಹೀಗಾಗಿ ಹೃದಯದ ಆರೋಗ್ಯವನ್ನು ಸುಧಾರಿಸಲು ಪೂರಕವಾಗಿದೆ.
  • ಪ್ರತಿದಿನ ಮೊಸರು ಸೇವಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವೂ ಕಡಿಮೆಯಾಗುತ್ತದೆ. ಇದರ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ.
  • 2017ರಲ್ಲಿ ಯುರೋಪಿಯನ್ ಜರ್ನಲ್ ಆಫ್ ಕ್ಯಾನ್ಸರ್ ಪ್ರಿವೆನ್ಷನ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದಿನಕ್ಕೆ 50 ಗ್ರಾಂ ಮೊಸರು (ಸುಮಾರು 1/2 ಕಪ್) ತಿನ್ನುವ ಜನರಿಗೆ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವು ಶೇ.20ರಷ್ಟು ಕಡಿಮೆ ಇರುತ್ತದೆ ಎಂದು ಸಂಶೋಧಕರು ಅಧ್ಯಯನದಿಂದ ಕಂಡುಕೊಂಡಿದ್ದಾರೆ.

ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿರುವ ಎಲ್ಲ ಆರೋಗ್ಯ ಸಂಬಂಧಿತ ವಿಚಾರಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ಆಗಿರುತ್ತದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Source : https://www.etvbharat.com/kn/!health/health-benefits-of-curd-reduces-the-risk-of-colon-cancer-study-kas25031301033

Leave a Reply

Your email address will not be published. Required fields are marked *