ಬೇಸಿಗೆಯಲ್ಲಿ ಮೊಸರಿನೊಂದಿಗೆ ಇವು ಡೆಡ್ಲಿ ಕಾಂಬಿನೇಷನ್; ಕೂಲ್​ ಆಗಿರಬೇಕಂತ ಅಪ್ಪಿತಪ್ಪಿಯೂ ತಿನ್ಬೇಡಿ!​

Sour cream. Organic dairy products on rustic wooden table

ಮೊಸರು ಭಾರತೀಯ ಆಹಾರ ಸಂಸ್ಕೃತಿಯ ಒಂದು ಭಾಗವಾಗಿದೆ. ಇದನ್ನು ಎಲ್ಲಾ ರಾಜ್ಯಗಳಲ್ಲಿ ಮಧ್ಯಾಹ್ನದ ಹೊತ್ತು ಊಟದೊಂದಿಗೆ ಸೇವಿಸಲಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಮೊಸರು ದೇಹವನ್ನು ತಂಪಾಗಿರಿಸುತ್ತದೆ. ಇದರಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಆದರೆ, ಆಯುರ್ವೇದವು ಮೊಸರನ್ನು ಇತರ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು ಎಂದು ಹೇಳುತ್ತದೆ. ಈ ರೀತಿ ತಪ್ಪಾದ ಆಹಾರ ಸಂಯೋಜನೆಗಳು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹಾಗಾದ್ರೆ ಬೇಸಿಗೆಯಲ್ಲಿ ಮೊಸರಿನೊಂದಿಗೆ ಯಾವ ಪದಾರ್ಥಗಳನ್ನು ಬೆರೆಸಿ ಸೇವಿಸಬಾರದು ಎಂದು ನೋಡೋಣ ಬನ್ನಿ.

ಮೀನಿನೊಂದಿಗೆ ಮೊಸರು ಬೆರೆಸಿ ಸೇವಿಸುವುದು ಬಹಳ ಕೆಟ್ಟ ಆಹಾರ ಸಂಯೋಜನೆಯಾಗಿದೆ. ಇವೆರಡನ್ನೂ ಒಟ್ಟಿಗೆ ತಿನ್ನಬಾರದು. ಮೀನಿನಲ್ಲಿ ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಮೊಸರಿನಲ್ಲಿ ತಂಪಾಗಿಸುವಿಕೆಯ ಗುಣವಿದೆ. ಒಟ್ಟಾರೆ ಇವೆರಡ ಗುಣಲಕ್ಷಣಗಳು ಸಂಪೂರ್ಣವಾಗಿ ವಿರುದ್ಧವಾಗಿವೆ.

ಈ ಸಂಯೋಜನೆ (ಮೊಸರು ಸಂಯೋಜನೆ ಆಹಾರ) ಹೊಟ್ಟೆಯಲ್ಲಿ ಅಸ್ವಸ್ಥತೆ ಮತ್ತು ಎದೆಯುರಿಯನ್ನು ಉಂಟು ಮಾಡುತ್ತದೆ. ಆಯುರ್ವೇದದ ಪ್ರಕಾರ, ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿನ ಶಾಖ ಮತ್ತು ಶೀತ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಇದರ ಪರಿಣಾಮದಿಂದಾಗಿ ಚರ್ಮ ಕೆಂಪಾಗುವಿಕೆ ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮೀನು ತಿಂದ ನಂತರ ಮೊಸರು ತಿನ್ನುವ ಮುನ್ನ ಕನಿಷ್ಠ ಎರಡು ಗಂಟೆಗಳ ಕಾಲ ಕಾಯಬೇಕು.

 ಮಾವಿನ ಹಣ್ಣನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ. ಆದರೆ ಅನೇಕ ಮಂದಿ ಇದನ್ನು ಮೊಸರಿನೊಂದಿಗೆ ಬೆರೆಸಿ ತಿನ್ನುತ್ತಾರೆ.  ಈ ಕಾಂಬಿನೇಷನ್ ದೇಹದಲ್ಲಿ ವಿಷವನ್ನು ಉತ್ಪಾದಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಮಾವಿನ ಹಣ್ಣನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ. ಆದರೆ ಅನೇಕ ಮಂದಿ ಇದನ್ನು ಮೊಸರಿನೊಂದಿಗೆ ಬೆರೆಸಿ ತಿನ್ನುತ್ತಾರೆ.  ಈ ಕಾಂಬಿನೇಷನ್ ದೇಹದಲ್ಲಿ ವಿಷವನ್ನು ಉತ್ಪಾದಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಮಾವಿನಕಾಯಿ ಉಷ್ಣ ಪದಾರ್ಥವಾಗಿದ್ದರೆ, ಮೊಸರು ತಂಪಾಗಿಸುವ ಗುಣವನ್ನು ಹೊಂದಿದೆ. ಇದರರ್ಥ ಇವೆರಡರ ಗುಣಗಳು ವಿರುದ್ಧ ಸ್ವಭಾವವನ್ನು ಹೊಂದಿವೆ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಸ್ಕಿನ್ ಅಲರ್ಜಿಗಳು ಉಂಟಾಗಬಹುದು. ಮಾವಿನಹಣ್ಣು ತಿಂದ ನಂತರ ಸ್ವಲ್ಪ ಸಮಯ ಕಾಯುವುದು ಮತ್ತು ನಂತರ ಮೊಸರು ತಿನ್ನುವುದು ಉತ್ತಮ.

 ಹಾಲು ಮತ್ತು ಮೊಸರನ್ನು ಮಿಶ್ರಣ ಮಾಡಬೇಡಿ. ಮೊಸರು ಮತ್ತು ಹಾಲು ಎರಡೂ ಹಾಲಿನ ಉತ್ಪನ್ನಗಳೇ ಹೌದು. ಆದರೆ, ಇವುಗಳನ್ನು ಒಟ್ಟಿಗೆ ತಿನ್ನುವುದು ಹಾನಿಕಾರಕ. ಹಾಲು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮೊಸರು ಸುಲಭವಾಗಿ ಜೀರ್ಣವಾಗುತ್ತದೆ.

ಹಾಲು ಮತ್ತು ಮೊಸರನ್ನು ಮಿಶ್ರಣ ಮಾಡಬೇಡಿ. ಮೊಸರು ಮತ್ತು ಹಾಲು ಎರಡೂ ಹಾಲಿನ ಉತ್ಪನ್ನಗಳೇ ಹೌದು. ಆದರೆ, ಇವುಗಳನ್ನು ಒಟ್ಟಿಗೆ ತಿನ್ನುವುದು ಹಾನಿಕಾರಕ. ಹಾಲು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮೊಸರು ಸುಲಭವಾಗಿ ಜೀರ್ಣವಾಗುತ್ತದೆ.

ಈ ವಿಭಿನ್ನ ಜೀರ್ಣಕ್ರಿಯೆ ಪ್ರಕ್ರಿಯೆಗಳು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತವೆ. ದೇಹದಲ್ಲಿನ ಈ ಅಸ್ವಸ್ಥತೆಯು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತ್ವಚೆಯು ಎಣ್ಣೆಯುಕ್ತವಾಗಬಹುದು ಮತ್ತು ಮೊಡವೆಗಳು ಉಂಟಾಗಬಹುದು. ಹಾಗಾಗಿ ಆಯುರ್ವೇದ ತಜ್ಞರು ಇವೆರಡರ ಸಂಯೋಜನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದ್ದಾರೆ. ಹಾಗಾಗಿ ಹಾಲು ಕುಡಿದ ನಂತರ ನೀವು ಸ್ವಲ್ಪ ವಿರಾಮ ತೆಗೆದುಕೊಂಡು ಮೊಸರು ತಿನ್ನಬೇಕು.

 ಪರಾಠಾ ಮತ್ತು ಪೂರಿಗಳಂತಹ ಎಣ್ಣೆಯುಕ್ತ ಆಹಾರಗಳೊಂದಿಗೆ ಸಾಕಷ್ಟು ಮಂದಿ ಮೊಸರು ಸೇವಿಸುತ್ತಾರೆ. ಆದರೆ ಈ ಸಂಯೋಜನೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮೊಸರು ಬೇಗನೆ ಜೀರ್ಣವಾಗುವ ಗುಣ ಹೊಂದಿದೆ. ಇದು ಹೊಟ್ಟೆ ಉಬ್ಬರ ಮತ್ತು ಆಯಾಸಕ್ಕೆ ಕಾರಣವಾಗಬಹುದು.

ಪರಾಠಾ ಮತ್ತು ಪೂರಿಗಳಂತಹ ಎಣ್ಣೆಯುಕ್ತ ಆಹಾರಗಳೊಂದಿಗೆ ಸಾಕಷ್ಟು ಮಂದಿ ಮೊಸರು ಸೇವಿಸುತ್ತಾರೆ. ಆದರೆ ಈ ಸಂಯೋಜನೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮೊಸರು ಬೇಗನೆ ಜೀರ್ಣವಾಗುವ ಗುಣ ಹೊಂದಿದೆ. ಇದು ಹೊಟ್ಟೆ ಉಬ್ಬರ ಮತ್ತು ಆಯಾಸಕ್ಕೆ ಕಾರಣವಾಗಬಹುದು.

ಚರ್ಮದ ಮೇಲೆ ಎಣ್ಣೆಯ ಅಂಶ ಹೆಚ್ಚಿದ್ದರೆ ಮೊಡವೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಣ್ಣೆಯುಕ್ತ ಆಹಾರವನ್ನು ಸೇವಿಸುವಾಗ ಮೊಸರನ್ನು ಪಕ್ಕಕ್ಕೆ ಇಡುವುದು ಉತ್ತಮ. ಇದರ ಬದಲಿಗೆ, ನೀವು ಲಘು ಆಹಾರಗಳೊಂದಿಗೆ ಮೊಸರು ಸೇವಿಸಿದರೆ ದೇಹವು ಆರಾಮದಾಯಕವಾಗಿರುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

do you know How To cut the Onion Without Tears

ಈರುಳ್ಳಿಯೊಂದಿಗೆ ಮೊಸರು ಬೆರೆಸಿ ತಯಾರಿಸಲಾಗುವ ರೈತಾ ಅನೇಕ ಮಂದಿಯ ಫೇವರೆಟ್ ಫುಡ್. ಆದರೆ ಈ ಸಂಯೋಜನೆಯು ದೇಹದಲ್ಲಿನ ಶಾಖ ಮತ್ತು ಶೀತ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಇವೆರಡೂ ವಿರುದ್ಧ ಸ್ವಭಾವ ಹೊಂದಿರುವುದರಿಂದ ಇದರಿಂದ ಜೀರ್ಣಕಾರಿ ಸಮಸ್ಯೆಗಳು ಮತ್ತು ಇತರ ಕಾಯಿಲೆಗಳು ಉಂಟಾಗಬಹುದು. ಚರ್ಮದ ಮೇಲೆ ದದ್ದುಗಳು ಮತ್ತು ಸೋರಿಯಾಸಿಸ್ ಸಮಸ್ಯೆಗಳ ಅಪಾಯವೂ ಇದೆ.

ಯಾವಾಗ ಮೊಸರು ತಿನ್ನಬೇಕು?: ಆಯುರ್ವೇದದ ಪ್ರಕಾರ, ಬೆಳಗ್ಗೆ ಅಥವಾ ಮಧ್ಯಾಹ್ನ ಮೊಸರು ತಿನ್ನುವುದು ಉತ್ತಮ. ಆದರೆ ರಾತ್ರಿ ಹೊತ್ತು ಇದನ್ನು ತಿನ್ನುವುದರಿಂದ ಕಫ ಹೆಚ್ಚಾಗುತ್ತದೆ. ಮೊಸರನ್ನು ಜೇನುತುಪ್ಪ, ನೆಲ್ಲಿಕಾಯಿ ಮತ್ತು ಬೇಳೆಯೊಂದಿಗೆ ಬೆರೆಸಿ ತಿನ್ನುವುದು ತುಂಬಾ ಒಳ್ಳೆಯದು. 

Source : https://kannada.news18.com/photogallery/lifestyle/avoid-these-foods-with-curd-in-summer-for-better-health-mnk-2027893-page-2.html

Leave a Reply

Your email address will not be published. Required fields are marked *