ಎಲಾನ್ ಮಸ್ಕ್ Vs ಜೆ.ಡಿ.ವ್ಯಾನ್ಸ್ : ಅಮೆರಿಕಾದ ಉಪಾಧ್ಯಕ್ಷರನ್ನೂ ಕಾಡಿದ AI ತಂತ್ರಜ್ಞಾನ, ಸ್ಪಷ್ಟನೆ.

ಹೈಲೈಟ್ಸ್‌:

  • ಎಲಾನ್ ಮಸ್ಕ್ ಅಮೆರಿಕದ ಮಹಾನ್ ನಾಯಕನಂತೆ ನಟಿಸುತ್ತಿದ್ದಾರೆ ಎಂಬ ನಕಲಿ ಹೇಳಿಕೆಯ ಪೋಸ್ಟ್
  • ಎಲಾನ್ ಮಸ್ಕ್ ಅಮೆರಿಕದವರಲ್ಲ, ಅವರು ದಕ್ಷಿಣ ಆಫ್ರಿಕಾದಿಂದ ಬಂದವರು
  • AI ತಂತ್ರಜ್ಞಾನದಿಂದ ರಚಿತವಾದ ನಕಲಿ ಆಡಿಯೋ ಎಂದು ಅಮೆರಿಕಾದ ಉಪಾಧ್ಯಕ್ಷ ಸ್ಪಷ್ಟನೆ

ವಾಷಿಂಗ್ಟನ್ : ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಟಿಕ್ ಟಾಕ್ (TikTok) ನಲ್ಲಿ ವೈರಲ್ ಆದ ವಿಡಿಯೋ ಒಂದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ವೈರಲ್ ಆಗಿದ್ದ ವಿಡಿಯೋದಲ್ಲಿ ಟೆಕ್ ಬಿಲಿಯನೇರ್ ಮತ್ತು ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಅವರ ಅಮೆರಿಕಾದ ನಿಷ್ಠೆಯನ್ನು ಪ್ರಶ್ನೆ ಮಾಡುವ ವಿಚಾರದ್ದಾಗಿತ್ತು.

AI ತಂತ್ರಜ್ಞಾನದಿಂದ ಸೃಷ್ಟಿಯಾಗಿರುವ ನಕಲಿ ವಿಡಿಯೋ ಎನ್ನುವ ಸ್ಪಷ್ಟನೆಯನ್ನು ವ್ಯಾನ್ಸ್ ನೀಡಿದ್ದಾರೆ. ಈ ನಕಲಿ ಪೋಸ್ಟ್ ಅನ್ನು ಹಂಚಿಕೊಂಡಿರುವ ವ್ಯಕ್ತಿಯು ಎಐ ಅನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಷ್ಟು ಬುದ್ದಿಹೀನನಾಗಿದ್ದಾನೆ ಎಂದು ಕಿಡಿಕಾರಿದ್ದಾರೆ.

ಟಿಕ್ ಟಾಕ್ ನಲ್ಲಿ ವೈರಲ್ ಆಗಿರುವ ಪೋಸ್ಟ್ ಅನ್ನು ಈ ಕೂಡಲೇ ತೆಗೆದು ಹಾಕದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಇವೆಲ್ಲದರ ನಡುವೆ, ಎಲಾನ್ ಮಸ್ಕ್ ಮತ್ತು ಜೆ.ಡಿ.ವ್ಯಾನ್ಸ್ ನಡುವಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ನಿನ್ನೆ (ಮಾ.24) ವೈರಲ್ ಆಗಿರುವ ತುಣುಕನ್ನು ಹಂಚಿಕೊಂಡು ಜೆ.ಡಿ.ವ್ಯಾನ್ಸ್ ಪ್ರತಿಕ್ರಿಯಿಸಿದ್ದರು. ಆ ಪೋಸ್ಟ್ ಅನ್ನು Joseiitalia ಎಂಬ TikTok ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್ ಇದುವರೆಗೆ 15 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ.

ಆ ಆಡಿಯೋದಲ್ಲಿ, ವ್ಯಾನ್ಸ್ ಅವರು, ಎಲಾನ್ ಮಸ್ಕ್ ದಕ್ಷಿಣ ಆಫ್ರಿಕಾದವರಾಗಿದ್ದು, ಅಮೆರಿಕದ ನಾಯಕರಂತೆ ನಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ವ್ಯಾನ್ಸ್ ಅವರ ಧ್ವನಿಯಲ್ಲಿ, ಅವರು ಅಮೆರಿಕದವರಲ್ಲ. ಅವರು ದಕ್ಷಿಣ ಆಫ್ರಿಕಾದಿಂದ ಬಂದವರು. ಅವರು ಅಮೆರಿಕದ ಮಹಾನ್ ನಾಯಕನಂತೆ ನಟಿಸುತ್ತಿದ್ದಾರೆ” ಎಂದು ವ್ಯಾನ್ಸ್ ಧ್ವನಿಯಲ್ಲಿ ಹೇಳಲಾಗಿದೆ.

ಕೂಡಲೇ ವೈರಲ್ ಆಗಿರುವ ಪೋಸ್ಟ್ ಬಗ್ಗೆ ವ್ಯಾನ್ಸ್ ಪ್ರತಿಕ್ರಿಯೆಯನ್ನು ನೀಡಿದ್ದು, ಇದು ನನ್ನ ಧ್ವನಿಯಲ್ಲ ಎಂದು ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಇದು AI ತಂತ್ರಜ್ಞಾನದಿಂದ ರಚಿತವಾದ ನಕಲಿ ಆಡಿಯೋ ಎಂದು ಸ್ಪಷ್ಟಪಡಿಸಿದ್ದಾರೆ.

ಇದೊಂದು ನಕಲಿ AI ಸೃಷ್ಟಿಸಿದ ತುಣುಕು ಎನ್ನುವುದು ಯಾರಿಗಾದರೂ ಗೊತ್ತಾಗದೇ ಇರದು. ಪೋಸ್ಟ್ ಮಾಡಿರುವ ವ್ಯಕ್ತಿಗೆ ಈ ಸಣ್ಣ ಸತ್ಯವನ್ನು ಗುರುತಿಸಲು ಸಾಧ್ಯವಾಗದಷ್ಟು ಬುದ್ಧಿವಂತಿಕೆ ಇಲ್ಲದಿರುವುದಕ್ಕೆ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ ಎಂದು ಜೆ.ಡಿ.ವ್ಯಾನ್ಸ್ ಬರೆದುಕೊಂಡಿದ್ದಾರೆ.

ಮಾನನಷ್ಟ ಮೊಕದ್ದಮೆಯ ಎಚ್ಚರಿಕೆಯನ್ನು ನೀಡಿರುವ ವ್ಯಾನ್ಸ್, ಆ ವ್ಯಕ್ತಿ ಪೋಸ್ಟ್ ಅನ್ನು ಅಳಿಸುವ ಪ್ರಾಮಾಣಿಕತೆಯನ್ನು ಹೊಂದಿದ್ದಾರೆಯೇ ಎಂದು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ. ಎಲಾನ್ ಮಸ್ಕ್ ಬಗ್ಗೆ ಮಾತ್ರ ಆ ಪೋಸ್ಟ್ ನಲ್ಲಿ ಉಲ್ಲೇಖವಾಗದೇ, ಎಲಾನ್ ಮಸ್ಕ್ ಅವರಿಂದ ಟ್ರಂಪ್ ಆಡಳಿತ ಇನ್ನಷ್ಟು ಹದೆಗೆಡುತ್ತದೆ ಎಂದೂ ಹೇಳಲಾಗಿದೆ.

ವ್ಯಾನ್ಸ್ ಜೊತೆ ಅವರ ಕಚೇರಿಯೂ ಈ ಸಂಬಂಧ ಸ್ಪಷ್ಟನೆಯನ್ನು ನೀಡಿದ್ದು, ಇದೊಂದು ನೂರಕ್ಕೆ ನೂರು ನಕಲಿ ವಿಡಿಯೋ ಎಂದು ಸ್ಪಷ್ಟನೆಯನ್ನು ನೀಡಿದೆ. ಇತ್ತೀಚಿನ ದಿನಗಳಲ್ಲಿ ಎಲಾನ್ ಮಸ್ಕ್ ಮತ್ತು ಜೆ.ಡಿ. ವ್ಯಾನ್ಸ್ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಸಾಮೂಹಿಕ ಫೆಡರಲ್ ವಜಾಗೊಳಿಸುವಿಕೆಗಾಗಿ DOGE (Department of Government Efficiency) ಯೋಜನೆಗಳಲ್ಲಿ ಮಸ್ಕ್ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಎಂದು ವ್ಯಾನ್ಸ್ ಒಪ್ಪಿಕೊಂಡಿದ್ದಾರೆ. ನಕಲಿ ಪೋಸ್ಟ್ ಬಗ್ಗೆ ಎಲಾನ್ ಮಸ್ಕ್ ಅವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.

Source : Vijaykarnataka

 ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *