ಬಿಸಿಲಿಗೆ ಚರ್ಮ ಕೆಂಪಾಯಿತೇ? ಇಲ್ಲಿದೆ ಉಪಶಮನ

Health Tips: ಮಕ್ಕಳನ್ನು ಶಾಲೆಯಿಂದ ಕರೆತರುವುದು,ಆಫೀಸಿಗೆ ಹೋಗುವುದು ಅಥವಾ ಇನ್ನೇನೋ ಕೆಲಸಕ್ಕೆ ಬಿಸಿಲಲ್ಲಿ ಹೋಗುವುದು ಅನಿವಾರ್ಯ ಆಗಬಹುದು. ಹೀಗೆ ಹತ್ತಿಪ್ಪತ್ತು ನಿಮಿಷ ಬಿರುಬಿಸಿಲಿಗೆ ಒಡ್ಡಿಕೊಂಡರೂ ಚರ್ಮ ಕೆಂಪಾಗಿ ಸುಟ್ಟಂ ತಾಗುತ್ತದೆ. ಸನ್‌ಬರ್ನ್‌ ಅಥವಾ ಬಿಸಿಲಿಗೆ ಸುಡುವುದೆಂದರೆ ಚರ್ಮ ಕೆಂಪಾ ಗುವುದು ಮಾತ್ರವಲ್ಲ. ಕೆಲವೊಮ್ಮೆ ಸಣ್ಣ ಗುಳ್ಳೆಗಳೆದ್ದು, ಒಂದೆರಡು ದಿನಗಳಲ್ಲಿ ಸುಟ್ಟ ಚರ್ಮವೆಲ್ಲ ಸಿಪ್ಪೆ ಸುಲಿದಂತಾಗಿ ಸೂಕ್ಷ್ಮ ಚರ್ಮದವರಿಗಂತೂ ಇದು ಮತ್ತೂ ಕಷ್ಟ. ಈ ರೀತಿ ಬಿಸಿಲಿಗೆ ಚರ್ಮ ಸುಟ್ಟಂತಾದಾಗ ಸುರಕ್ಷಿತವಾದ ಮನೆಮದ್ದುಗಳೇನು?

Summer Tips: ಬೇಸಿಗೆಯ ತಾಪ ಜೋರಾಗುತ್ತಿದ್ದಂತೆ ಬಿಸಿಲಿನ ಸಮಯದಲ್ಲಿ ಹೊರಗೆ ಹೆಚ್ಚು ತಿರುಗಾಡಬೇಡಿ ಎಂಬ ಸಲಹೆ ಎಲ್ಲೆಡೆ ಕೇಳುತ್ತದೆ. ಆದರೆ ಅದನ್ನು ಯಥಾವತ್‌ ಪಾಲಿಸಲು ಸಾಧ್ಯ ವಾಗದೇ ಹೋಗಬಹುದು. ಮಕ್ಕಳನ್ನು ಶಾಲೆಯಿಂದ ಕರೆತರುವುದು, ಆಫೀಸಿಗೆ ಹೋಗುವುದು ಅಥವಾ ಇನ್ನೇನೋ ಕೆಲಸಕ್ಕೆ ಬಿಸಿಲಲ್ಲಿ ಹೋಗು ವುದು ಅನಿವಾರ್ಯ ಆಗಬಹುದು. ಹೀಗೆ ಹತ್ತಿಪ್ಪತ್ತು ನಿಮಿಷ ಬಿರುಬಿಸಿಲಿಗೆ ಒಡ್ಡಿಕೊಂಡರೂ ಚರ್ಮ ಕೆಂಪಾಗಿ ಸುಟ್ಟಂತಾಗುತ್ತದೆ. ಸನ್‌ಬರ್ನ್‌ ಅಥವಾ ಬಿಸಿಲಿಗೆ ಸುಡುವುದೆಂದರೆ ಚರ್ಮ ಕೆಂಪಾಗುವುದು ಮಾತ್ರವಲ್ಲ. ಮೊದಲಿಗೆ ಉರಿಯೊಂದಿಗೆ ಕೆಂಪಾಗಿ, ನಂತರ ಕಪ್ಪಾಗಿ, ತುರಿಕೆ ಆರಂಭವಾಗಿ, ಕೆಲ ವೊಮ್ಮೆ ಸಣ್ಣ ಗುಳ್ಳೆಗಳೆದ್ದು, ಒಂದೆರಡು ದಿನಗಳಲ್ಲಿ ಸುಟ್ಟ ಚರ್ಮವೆಲ್ಲ ಸಿಪ್ಪೆ ಸುಲಿದಂತಾಗಿ… ಇದೊಂಥರಾ ಸರಣಿ. ಇನ್ನು ಸೂಕ್ಷ್ಮ ಚರ್ಮದವರಿಗಂತೂ ಇದು ಮತ್ತೂ ಕಷ್ಟ. ಈ ರೀತಿ ಬಿಸಿಲಿಗೆ ಚರ್ಮ ಸುಟ್ಟಂತಾದಾಗ ಸುರಕ್ಷಿತ ವಾದ ಮನೆಮದ್ದುಗಳೇನು?

ಅರಿಶಿನ ಮತ್ತು ಗಂಧ: ಮನೆಯಲ್ಲಿ ಗಂಧದ ಕೊರಡಿದ್ದರೆ ಅದನ್ನು ಹಾಲಿನಲ್ಲಿ ತೇಯ್ದು, ತೆಳುವಾದ ಗಂಧವನ್ನು ಬಟ್ಟಲಿಗೆ ತೆಗೆದುಕೊಳ್ಳಿ. ಇದಕ್ಕೆ ಕೊಂಚ ಅರಿಶಿನವನ್ನು ಸೇರಿಸಿ. ಇದನ್ನು ಬಿಸಿಲಿಗೆ ಸುಟ್ಟಂತಾದ ಭಾಗಕ್ಕೆ ಹಚ್ಚುವುದು ಹಿತಕರ. ಅರಿಶಿನದಲ್ಲಿ ಉರಿಯೂತವನ್ನು ಶಮನ ಮಾಡುವ ಸಾಮರ್ಥ್ಯವಿದ್ದರೆ, ತಂಪುಂಟುಮಾಡುವ ಗುಣ ಗಂಧಕ್ಕಿದೆ. ಇವೆರಡರ ಮಿಶ್ರಣದಿಂದ ಸುಟ್ಟು ಕೆಂಪಾದ ಚರ್ಮದ ತೊಂದರೆ ಬೇಗನೆ ಗುಣವಾಗುತ್ತದೆ.

ಲೋಳೆಸರ: ಅಲೊವೇರಾ ಕೇವಲ ಸೌಂದರ್ಯವರ್ಧಕವಾಗಿ ಮಾತ್ರವೇ ಬಳಕೆಗೆ ಬರುವಂಥದ್ದಲ್ಲ. ಇದರ ಔಷಧೀಯ ಗುಣಗಳು ಬಹಳಷ್ಟಿವೆ. ಸುಟ್ಟಗಾಯಕ್ಕೂ ಲೋಳೆಸರ ಒಳ್ಳೆಯ ಮದ್ದಾಗಬಲ್ಲದು. ಸಮುದ್ರದ ದಂಡೆಯಲ್ಲಿ ಆಡುವಾಗ ಮುಖ ಮಾತ್ರವಲ್ಲದೆ, ಮೈ-ಕೈಯೆಲ್ಲಾ ಕೆಂಪಾಗಿದೆ ಎನಿಸಿದರೆ, ಲೋಳೆಸರವನ್ನು ಚಪ್ಪಟೆಯಾಗಿ ಉದ್ದಕ್ಕೆ ಕತ್ತರಿಸಿ. ಇದರಿಂದ ಒಳಗಿನ ಜೆಲ್‌ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಇದನ್ನು ಧಾರಾಳ ವಾಗಿ ಸುಟ್ಟ ಭಾಗಗಳಿಗೆಲ್ಲಾ ಲೇಪಿಸಿಕೊಳ್ಳಿ. ಇದು ಉರಿಯಿಂದ ತ್ವರಿತ ಉಪಶಮನವನ್ನು ನೀಡುತ್ತದೆ.

ಗುಲಾಬಿ ಜಲ: ಜನಪ್ರಿಯವಾಗಿ ರೋಸ್‌ ವಾಟರ್‌ ಎಂದೇ ಹೇಳಲಾಗುವ ಇದನ್ನು ಬಿಸಿಲಿಗೆ ಸುಟ್ಟ ಭಾಗಕ್ಕೆ ಧಾರಾಳವಾಗಿ ಲೇಪಿಸಬೇಕಾಗುತ್ತದೆ. ಇದರಲ್ಲಿರುವ ವಿಟಮಿನ್‌ ಇ ಮತ್ತು ಉತ್ಕರ್ಷಣ ನಿರೋಧಕಗಳು ಹಾನಿ ಗೊಳಗಾದ ಚರ್ಮದ ಕೋಶಗಳ ದುರಸ್ತಿಗೆ ನೆರವಾಗುತ್ತವೆ. ಸ್ವಚ್ಛವಾದ ಹತ್ತಿಯ ಬಟ್ಟೆಯೊಂದನ್ನು ಗುಲಾಬಿ ನೀರಿನಲ್ಲಿ ಅದ್ದಿ, ಅದನ್ನು ಕೆಂಪಾದ ಚರ್ಮದ ಮೇಲಿರಿಸಿ. ಇದನ್ನು ಸುಮಾರು ೧೫-೨೦ ನಿಮಿಷಗಳವರೆಗೆ ಹಾಗೆಯೇ ಚರ್ಮದ ಮೇಲಿರಿಸಿದ್ದರೆ ಸುಟ್ಟ ಉರಿ ಬೇಗನೆ ಗುಣವಾಗುತ್ತದೆ.

ಸೌತೇಕಾಯಿ: ಇದಕ್ಕಿರುವ ಜನಪ್ರಿಯತೆಯೇ ಇದರ ತಂಪಾದ ಗುಣಕ್ಕೆ ಸಾಕ್ಷಿ. ಫೇಸ್‌ಮಾಸ್ಕ್‌ ಮಾಡುವುದರಿಂದ ಹಿಡಿದು, ಕಣ್ಣು ತಂಪಾಗಿಸಲು, ಕಡೆಗೆ ಹೊಟ್ಟೆ ತಂಪಾಗಿಸುವುದಕ್ಕೂ ಇದು ಅಗತ್ಯ. ಸೌತೇಕಾಯಿಯ ತುರಿಯನ್ನು, ರಸದ ಸಮೇತವಾಗಿ ಸ್ವಚ್ಛ ಹತ್ತಿಯ ಬಟ್ಟೆಯಲ್ಲಿ ಕಟ್ಟಿ. ಅದನ್ನು ಸುಟ್ಟಭಾಗಗಳ ಮೇಲೆ ಇರಿಸುತ್ತಾ ಬನ್ನಿ. ಹಾಗಿಲ್ಲದಿದ್ದರೆ, ಈ ತರಕಾರಿ ಯನ್ನು ಗಾಲಿಯಂತೆ ಕತ್ತರಿಸಿಕೊಂಡು, ಆ ಗಾಲಿಗಳನ್ನು ಚರ್ಮದ ಮೇಲಿ ರಿಸಿ ಕೆಲಕಾಲ ಹಾಗೆಯೇ ಬಿಡಿ.

Source: Vishwavani

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *