ಸಾಮಾನ್ಯವಾಗಿ ಮಹಿಳೆಯರು ಅಥವಾ ಮನೆಯಲ್ಲಿ ಇರುವವರು ಬೆಳಗ್ಗೆ ತಡವಾಗಿ ತಿಂಡಿ ತಿನ್ನುತ್ತಾರೆ. ಆದರೆ ಆ ತಪ್ಪು ಮಾಡಿದ್ರೆ ನಿಮ್ಮ ಆರೋಗ್ಯ ಹದಗೆಡಬಹುದು. ಮೊದಲು ಇದನ್ನು ತಪ್ಪಿಸಿ, ಇಲ್ಲವಾದ್ರೆ ಕಷ್ಟ.

ಮಹಿಳೆಯರು ಸಹಜವಾಗಿ ಬೆಳಿಗ್ಗೆ ಬೇಗನೆ ಎದ್ದು ಚಹಾ ಮಾಡುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಗಂಡಂದಿರಿಗೆ ಅಡುಗೆ ತಯಾರಿಸುವುದು, ಮನೆ ಸ್ವಚ್ಛಗೊಳಿಸುವುದು ಮತ್ತು ಪೂಜೆ ಮಾಡುವುದು ಸೇರಿದಂತೆ ತಮ್ಮ ಎಲ್ಲಾ ದೈನಂದಿನ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಇದೆಲ್ಲಾ ಕೆಲಸ ಮಾಡಿ ಅವರು ಮುಗಿಸುವಷ್ಟರಲ್ಲೇ ತಡವಾಗಿ ಬಿಡುತ್ತೆ. ಹೀಗಾಗಿ ಅವರ ಬೆಳಗ್ಗಿನ ತಿಂಡಿ ಕೂಡ ತಡವಾಗುತ್ತೆ.

ಬೆಳಗ್ಗೆ ಎದ್ದಾಗಿನಿಂದ ಮನೆ ಕೆಲಸದಲ್ಲಿ ಬ್ಯೂಸಿಯಾಗಿ ಎಲ್ಲಾ ಮುಗಿಸಿ ಮಹಿಳೆಯರು ತಿಂಡಿ ತಿನ್ನಲು ಕುಳಿತುಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲಾ ಕೆಲಸ ಮುಗಿಸಿದ ನಂತರವೇ ತಮಗಾಗಿ ಸಮಯ ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಅವರು ಉಪಾಹಾರ ಸೇವಿಸುವಾಗ ಬೆಳಿಗ್ಗೆ 11 ಅಥವಾ 12 ಗಂಟೆ ಸುಮಾರಿಗೆ ಇರುತ್ತದೆ. ಆದರೆ, ಈ ಅಭ್ಯಾಸ ಎಷ್ಟು ಒಳ್ಳೆಯದು ಎಂಬ ಪ್ರಶ್ನೆ ಮೂಡಿದೆ. ಬೆಳಗ್ಗೆ ಬೇಗ ಎದ್ದರೂ ತಡವಾಗಿ ತಿಂಡಿ ಮಾಡುವುದರಿಂದ ಆರೋಗ್ಯಕ್ಕೆ ಅಪಾರ ಹಾನಿಯಾಗುತ್ತದೆ.

ಡಾ. ವಿ.ಕೆ. ರಾಂಚಿಯ ಖ್ಯಾತ ಆಯುರ್ವೇದ ತಜ್ಞ ಪಾಂಡೆ, ತಿಂಡಿ ಮತ್ತು ಊಟದ ಬಗ್ಗೆ ಮತ್ತು ಸೇವನೆಯ ಸಮಯದ ಬಗ್ಗೆ ಮಾತ್ನಾಡಿದ್ದಾರೆ. ತಡರಾತ್ರಿ ಊಟ ಮಾಡುವುದು ಕೇವಲ ಅಭ್ಯಾಸವಲ್ಲ ಎಂದಿದ್ದಾರೆ. ತಡರಾತ್ರಿ ಊಟ ಮಾಡುವುದು ಆರೋಗ್ಯಕ್ಕೆ ತುಂಬ ಅಪಾಯಕಾರಿ ಎಂದು ವೈದ್ಯರು ಹೇಳಿದ್ದಾರೆ. ನಿಮಗೆ ತಡರಾತ್ರಿ ಊಟ ಮಾಡುವ ಅಭ್ಯಾಸವಿದ್ದರೆ ಮೊದಲು ಅದನ್ನು ತಪ್ಪಿಸಿ. ಕೆಲವರು ಕೆಲಸದ ಸಮಯ ಅಥವಾ ತಮ್ಮ ಅನುಕೂಲಕರ ಸಮಯ ನೋಡಿ ಊಟ ಮಾಡುತ್ತಾರೆ. ಆದರೆ ಊಟ ಮಾಡಲು ಸರಿಯಾದ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ತಡರಾತ್ರಿ ಊಟ ಮಾಡುವುದು 100 ರೋಗಗಳಿಗೆ ಮೂಲ ಕಾರಣವಾಗಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ತಡರಾತ್ರಿ ಊಟ ಮಾಡುವುದರ ಜೊತೆಗೆ ಬೆಳಿಗ್ಗೆ ತುಂಬಾ ತಡವಾಗಿ ತಿಂಡಿ ತಿನ್ನುವುದು ಕೂಡ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಹೇಳಿದ್ದಾರೆ. ಯಾಕಂದರೆ ಬೆಳಿಗ್ಗೆ ತಡವಾಗಿ ತಿಂಡಿ ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲವು (ಆ್ಯಸಿಡ್ ಅಂಶ) ಸಂಗ್ರಹವಾಗಲು ಪ್ರಾರಂಭಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಬೆಳಗ್ಗೆ ತಡವಾಗಿ ತಿಂಡಿ ತಿನ್ನುವುದರಿಂದ ಆಮ್ಲ ಸಂಗ್ರಹವಾಗಿ ಇದು ನಿಧಾನವಾಗಿ ಹೊಟ್ಟೆಯ ಒಳ ಪದರವನ್ನು ಹಾನಿಗೊಳಿಸುತ್ತದೆ, ಇದರಿಂದಾಗಿ ಆಮ್ಲೀಯತೆ (ಗ್ಯಾಸ್ಟ್ರಿಕ್) ಉಂಟಾಗುತ್ತದೆ. ಈ ಆಮ್ಲೀಯತೆಯು ಭವಿಷ್ಯದಲ್ಲಿ ಹುಣ್ಣುಗಳಂತೆ ಅಪಾಯಕಾರಿ ಕಾಯಿಲೆಯಾಗಿ ಪರಿಣಮಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ, ತಜ್ಞರು ಮಹಿಳೆಯರು ಬೆಳಿಗ್ಗೆ 8 ರಿಂದ 9 ರ ನಡುವೆ ಏನನ್ನಾದರೂ ತಿನ್ನಬೇಕೆಂದು ಸಲಹೆ ನೀಡುತ್ತಾರೆ. ಅದು ಹಣ್ಣುಗಳು, ಒಣಗಿದ ಹಣ್ಣುಗಳು ಅಥವಾ ಧಾನ್ಯಗಳಿಂದ ಯಾವುದಾದರೂ ಆಗಿರಬಹುದು. ಸಮಯವಿಲ್ಲ ಎಂದು ಹೇಳುವವರಿಗೆ, ನೀವು ಧಾನ್ಯಗಳನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ತಿನ್ನಬಹುದು.
ಮನೆಯನ್ನು ನೋಡಿಕೊಳ್ಳುವಲ್ಲಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವ ಮಹಿಳೆಯರಲ್ಲಿ ನೀವು ಒಬ್ಬರಾಗಿದ್ದರೆ, ಒಂದು ನಿಮಿಷ ಯೋಚಿಸಿ. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಉಪಾಹಾರ ಸೇವಿಸುವುದು ದೇಹಕ್ಕೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಸಮತೋಲನ ಮತ್ತು ಶಕ್ತಿಗೂ ಒಳ್ಳೆಯದು. ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ನೀವು ಆರೋಗ್ಯವಾಗಿದ್ದರೆ ಮಾತ್ರ ಮನೆಯಲ್ಲಿರುವವರನ್ನು ಆರೋಗ್ಯವಾಗಿಡಲು ಸಾಧ್ಯ.
ಮಹಿಳೆಯರೇ ಆಗಿರಲಿ ಅಥವಾ ಪುರುಷರೇ ಆಗಿರಲಿ ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ನಿಮಗಾಗಿ ನಿಮ್ಮ ಆರೋಗ್ಯಕ್ಕಾಗಿ ಸಮಯ ಕೊಡುವುದು ಮುಖ್ಯ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸೇವನೆ ಮುಖ್ಯ.ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
Source: News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1