WORLD HEALTH DAY 2025: ಜೀವನಶೈಲಿಯ ರೋಗಗಳು ಇಂದು ಹೆಚ್ಚಾಗುತ್ತಿದ್ದು, 25 ವರ್ಷ ದಾಟಿದವರಲ್ಲೇ ಇವು ಕಂಡು ಬರುತ್ತಿವೆ. ಆರಂಭದಲ್ಲೇ ಈ ಕಾಯಿಲೆಗಳನ್ನು ಪತ್ತೆಮಾಡುವ ಮೂಲಕ ಜೀವನ ಮಟ್ಟ ಸುಧಾರಿಸಬಹುದು.

ಅನೇಕ ಬಾರಿ ದೊಡ್ಡ ದೊಡ್ಡ ಕಾಯಿಲೆಗಳು ಯಾವುದೇ ವಾರ್ನಿಂಗ್ ನೀಡದೆ ಸೈಲೆಂಟ್ ಆಗಿ ಯಾವುದೇ ನೋವು ಅಥವಾ ಲಕ್ಷಣಗಳಿಲ್ಲದೆ ಬಂದು ವಕ್ಕರಿಸಿರುತ್ತವೆ. ಈ ಹೊತ್ತಿಗಾಗಲೇ ನಮ್ಮ ದೇಹದಲ್ಲಿ ಎಲ್ಲವೂ ದಿಕ್ಕು ತಪ್ಪಿರುತ್ತೆ. ಸಾಮಾನ್ಯ ಚಿಕಿತ್ಸೆ ವಿಧಾನ ಅವಧಿ ದಾಟಿ, ಸಮಸ್ಯೆ ಕ್ಲಿಷ್ಟವಾಗುತ್ತದೆ. ಇದೇ ಕಾರಣಕ್ಕೆ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ರೋಗದ ಆರಂಭಿಕ ಪತ್ತೆ ಮಾಡಬೇಕು ಅಂತ ವೈದ್ಯರು ಹೇಳುತ್ತಾರೆ.
ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನ ಎಂದು ಆಚರಿಸಲಾಗುತ್ತದೆ. ಜೀವನಶೈಲಿ ರೋಗ ಅಂದರೆ.. ಮಧುಮೇಹ, ಬಿಪಿ, ಹೃದಯ ಸಮಸ್ಯೆ ಹಾಗೇ ಕ್ಯಾನ್ಸರ್ ಈಗ ಸಾಮಾನ್ಯ ಆಗುತ್ತಿದೆ. ಇಂತಹ ಸಮಸ್ಯೆಗಳ ನಿಮಗೆ ಗೊತ್ತಿಲ್ಲದೇ ದೇಹಕ್ಕೆ ಪ್ರವೇಶಿಸಿದ್ರೆ ಅವುಗಳನ್ನು ಆರಂಭಿಕ ಹಂತದಲ್ಲೇ ನಿಯಂತ್ರಿಸಬೇಕು.

ದೀರ್ಘಕಾಲದ ಅನಾರೋಗ್ಯದ ಸಮಸ್ಯೆ:
ಬಹುತೇಕ ದೀರ್ಘಕಾಲದ ಅಸ್ವಸ್ಥತೆಗಳು ದೊಡ್ಡ ಲಕ್ಷಣದೊಂದಿಗೆ ಕಂಡುಬರಲ್ಲ ಅಂತ ದೆಹಲಿ ಅಪೊಲೋ ಡಯಾಗ್ನಾಸ್ಟಿಕ್ನ ಕನ್ಸಲ್ಟಂಟ್ ಡಾ ತನಿಶ್ ಮಂಡಲ್ ಹೇಳುತ್ತಾರೆ. ಅಧಿಕ ರಕ್ತದೊತ್ತಡ ಅಥವಾ ಮಧುಮೇಹ ಸಮಸ್ಯೆ ಆಗುವವರೆಗೆ ನಮಗೆ ಅರಿವೆ ಬರಲ್ಲ. ಆದರೆ, ನಿಯಮಿತ ಚಿಕಿತ್ಸೆ ಮೂಲಕ ಇದರಿಂದ ಆಗುವ ಹಾನಿ ತಪ್ಪಿಸಬಹುದು ಅನ್ನುತ್ತಾರೆ.
ಆರಂಭಿಕ ಪತ್ತೆ ಮೂಲಕ ರೋಗವನ್ನು ನಿರ್ವಹಣೆ ಮಾಡುವುದು ಸಾಧ್ಯ. ಅಲ್ಲದೆ ಅಂಗಾಂಗ ಹಾನಿ, ದೀರ್ಘ ಕಾಲದ ಚಿಕಿತ್ಸೆಯಿಂದಲೂ ಪಾರಾಗಬಹುದು. ಈ ಮೂಲಕ ಆರೋಗ್ಯಯುತ ಜೀವನ ನಿರ್ವಹಣೆ ಮಾಡಬಹುದು. ಇಂದಿನ ಜಢತ್ವದ ಜೀವನಶೈಲಿ, ಉದ್ಯೋಗ, ಸಂಸ್ಕರಿತ ಆಹಾರ, ಅಧಿಕ ರಕ್ತದೊತ್ತಡ ಮತ್ತು ಕೌಟುಂಬಿಕ ಇತಿಹಾಸ, ಬಿಪಿ, ಶುಗರ್ ಹಾಗೇ ಭಾರತದಲ್ಲಿ ಹೆಚ್ಚಾಗುತ್ತಿರುವ ಕ್ಯಾನ್ಸರ್ ಕೂಡ ಕಾರಣವಾಗುತ್ತಿದೆ. ಇದು ಕೇವಲ ವಯಸ್ಸಾದವರಲ್ಲಿ ಮಾತ್ರ ಪತ್ತೆಯಾಗುತ್ತಿಲ್ಲ, ಯುವ ಜನತೆಯಲ್ಲೂ ಕಂಡುಬರುತ್ತಿದೆ. ಇದರಲ್ಲಿ ಮತ್ತೊಂದು ಆತಂಕದ ಅಂಶ ಅಂದ್ರೆ, ಜನರಿಗೆ ಈ ಸಮಸ್ಯೆ ಪತ್ತೆ ಆಗುವವರೆಗೆ ಯಾವುದೇ ಸುಳಿವು ನೀಡುವುದಿಲ್ಲ. ಹಾಗಾಗಿ ಅವರು ಆರೋಗ್ಯವಂತರೇ ಅಂತ ಭಾವಿಸಿರುತ್ತಾರೆ.
ಈ ಕುರಿತು ಮಾತನಾಡಿರುವ ಸ್ಟಾರ್ ಇಮೇಜಿಂಗ್ ಅಂಡ್ ಪಾಥ್ ಲ್ಯಾಬ್ ಲಿಮಿಟೆಡ್ನ ಡಾ. ಸಮೀರ್ ಭಾಟಿಯಾ, ರಕ್ತ ಪರೀಕ್ಷೆ ಮೂಲಕ ಕೆಲವು ಆರೋಗ್ಯ ಸಮಸ್ಯೆಗಳನ್ನು ಎಚ್ಚರಿಕೆಯಿಂದ ನಿರ್ವಹಣೆ ಮಾಡಲಾಗುವುದು. ಈ ಹಿನ್ನೆಲೆ ಈ ರೀತಿಯ ನಿಯಮಿತ ಆರೋಗ್ಯ ತಪಾಸಣೆ ಹೆಚ್ಚು ನಿರ್ಣಾಯಕವಾಗಿದೆ ಎಂದಿದ್ದಾರೆ.

ಯಾವ ಪರೀಕ್ಷೆಯನ್ನು ನಡೆಸಬೇಕು?
25 ವರ್ಷ ಮೇಲ್ಪಟ್ಟವರೂ ಈ ಆರೋಗ್ಯ ಪರೀಕ್ಷೆಗಳನ್ನು ನಡೆಸುವ ಮೂಲಕ ಆರೋಗ್ಯಯುತ ಜೀವನ ಶೈಲಿ ನಿರ್ವಹಿಸಬಹುದು.
ರಕ್ತದೊತ್ತಡ ಮತ್ತು ಲಿಪಿಡ್ ಪ್ರೊಫೈಲ್: ಈ ಎರಡು ರೋಗಗಳು ಹೃದಯಕ್ಕೆ ಅಪಾಯ ತರುತ್ತದೆ. ರಕ್ತದೊತ್ತಡವನ್ನು ಕನಿಷ್ಠ ಒಂದು ವಾರಕ್ಕೆ ಆದರೂ ಮನೆಯಲ್ಲಿಯೇ ನಡೆಸಬೇಕು. ಲಿಪಿಡ್ ಪ್ರೊಫೈಲ್ ಅನ್ನು ಕೊಲೆಸ್ಟ್ರಾಲ್ ಮತ್ತು ಹೃದಯದ ಬ್ಲಾಕೇಜ್ ಪತ್ತೆಗೆ ಸಹಾಯಕವಾಗಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟದ ಪರೀಕ್ಷೆ: ಮಧುಮೇಹಿ ಅಥವಾ ಪೂರ್ವ ಮಧುಮೇಹಕ್ಕೆ ಈ ಪರೀಕ್ಷೆ ಅಗತ್ಯ. ತಲೆ ಸುತ್ತು ಅಥವಾ ದೃಷ್ಟಿ ಮಂಜಾಗುವಿಕೆ ಲಕ್ಷಣದ ಹೊರತಾಗಿ ಇವುಗಳನ್ನು ಮೊದಲೇ ಮಾಡಿಸಬಹುದು. ಹತ್ತಿರದ ಡಯಾಗ್ನೊಸ್ಟಿಕ್ ಲ್ಯಾಬ್ನಲ್ಲಿ ಮಾಡಿಸಬಹುದು.
ಪಪ್ ಸ್ಮೆರ್: ಇದು ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪತ್ತೆ ಮಾಡುತ್ತದೆ.
ಮ್ಯಾಮೋಗ್ರಾಮ್: ಸ್ತನ ಕ್ಯಾನ್ಸರ್ನ ಆರಂಭಿಕ ಲಕ್ಷಣ ಪತ್ತೆ ಮಾಡುತ್ತದೆ. ಈ ಮೂಲಕ ಆರಂಭದಲ್ಲೇ ಸುಲಭವಾಗಿ ಅದಕ್ಕೆ ಚಿಕಿತ್ಸೆ ನೀಡಬಹುದು.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪರೀಕ್ಷೆ: ಮಹಿಳೆಯರು ಮತ್ತು ವಯಸ್ಕರಲ್ಲಿ ಅಸ್ಥಿಸಂಧಿವಾತ ಅಪಾಯ ತಡೆಗೆ ಇದು ಅವಶ್ಯ. ದುರ್ಬಲ ಮೂಳೆಗಳ ಚಲನೆ ಸಮಸ್ಯೆ, ಮುರಿತ ಮತ್ತಿತರ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಡಾ ಭಾಟಿಯಾ ತಿಳಿಸಿದ್ದಾರೆ.
ಯಕೃತ್ ಮತ್ತು ಮೂತ್ರಪಿಂಡ ಕಾರ್ಯಾಚರಣೆ ಪರೀಕ್ಷೆ: ಈ ಪರೀಕ್ಷೆಗಳು ಕೂಡ ಅಂಗಾಂಗಗಳು ಕಾರ್ಯ ನಿರ್ವಹಿಸುವ ಕುರಿತು ತಿಳಿಸುತ್ತದೆ. ಕಿಡ್ನಿ ಮತ್ತು ಲಿವರ್ ನಿರ್ಣಾಯಕವಾಗಿದ್ದು, ಇವುಗಳ ಹಾನಿ ಅನೇಕ ಬಾರಿ ಗಮನಕ್ಕೆ ಬಾರದೇ ಹೋಗಬಹುದು. 25 ವರ್ಷ ಮೇಲ್ಪಟ್ಟವರು ವಾರ್ಷಿಕವಾಗಿ ಈ ರೀತಿಯ ಪರೀಕ್ಷೆಗೆ ಒಳಗಾಗುವುದು ಅಗತ್ಯ.
ಅನಿಮಿಯಾ ಪರೀಕ್ಷೆ: ಭಾರತ ಮಹಿಳೆಯರಲ್ಲಿ ಈ ರಕ್ತಹೀತೆ ಹೆಚ್ಚಿದೆ. ಇದನ್ನು ಸಾಮಾನ್ಯ ರಕ್ತ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು. ಸುಸ್ತು ಅಥವಾ ಕಳಹೀನ ತ್ವಚೆ ಇದರ ಲಕ್ಷಣವನ್ನು ತೋರಿಸುತ್ತದೆ.

ನಿಯಮಿತವಾಗಿ ಪರೀಕ್ಷೆಗೆ ಒಳಗಾಗುವುದರಿಂದ ರೋಗದ ಆರಂಭಿಕ ಹಂತ ಪತ್ತೆ ಮಾಡುವ ಜೊತೆಗೆ ಭವಿಷ್ಯದಲ್ಲಿನ ಚಿಕಿತ್ಸೆಗೆ ಹಣ ಉಳಿತಾಯ ಹಾಗೂ ಗುಣಮಟ್ಟದ ಜೀವನ ಸುಧಾರಣೆಗೆ ಅನುಕೂಲವಾಗಲಿದೆ. ಈ ಹಿನ್ನೆಲೆ ಇಂದೇ ಈ ರೀತಿಯ ಚಿಕಿತ್ಸೆಗೆ ಒಳಗಾಗುವುದು ಅವಶ್ಯಕ. 25 ವರ್ಷ ದಾಟಿದ ಪ್ರತಿಯೊಬ್ಬರೂ ಈ ರೀತಿ ಪರೀಕ್ಷೆಗೆ ಒಳಗಾಗಬೇಕು. ಪೋಷಕರು, ಒಡಹುಟ್ಟಿದವರು ಹಾಗೂ ಸ್ನೇಹಿತರನ್ನು ತಪಾಸಣೆಗೆ ಪ್ರೇರೇಪಿಸುವ ಮೂಲಕ ಆರೋಗ್ಯಯುತ ಜೀವನ ಶೈಲಿ ಕಾಪಾಡಿಕೊಳ್ಳಬಹುದು.
ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1