ಆಗಸದಲ್ಲಿ ಖಗೋಳ ವಿಸ್ಮಯ, ಇಂದೂ ಕೂಡ ಮೂಡಿಬರಲಿದೆ ‘ಪಿಂಕ್​ ಮೂನ್​’:

ಚಂದಿರ ಕೊಂಚ ಚಿಕ್ಕದಾಗಿ ಗೋಚರಿಸಲಿದ್ದಾನೆ. ಇದನ್ನು ‘ಮೈಕ್ರೋಮೂನ್’ ಎಂದೂ ಸಹ ಕರೆಯಲಾಗುತ್ತದೆ. ಚಂದ್ರನ ಬಣ್ಣ ಗುಲಾಬಿ ಬಣ್ಣದ್ದಾಗಿಲ್ಲದಿದ್ದರೂ, ತುಂಬಾ ಸುಂದರವಾಗಿ ಕಾಣಲಿದೆ. ಪಿಂಕ್​ ಮೂನ್ ಎಂಬ ಹೆಸರು ವಸಂತಕಾಲದಲ್ಲಿ ಅರಳುವ ‘ಪಿಂಕ್ ಫ್ಲೋಕ್ಸ್’ ಹೂವುಗಳೊಂದಿಗೆ ಸಂಬಂಧ ಹೊಂದಿದೆ. ಸೂರ್ಯಾಸ್ತದ ಬಳಿಕ ಆಗಸದಲ್ಲಿ ಈ ವೈಶಿಷ್ಟ್ಯವನ್ನು ಕಣ್ತುಂಬಿಕೊಳ್ಳಬಹುದು.

ಪಿಂಕ್​ ಮೂನ್​ ವಿಶೇಷತೆ ಏನು?: ಪ್ರತಿ ವರ್ಷದಂತೆ ಈ ಬಾರಿಯೂ ಏಪ್ರಿಲ್‌ನಲ್ಲಿ ಆಕಾಶವು ಒಂದು ಸುಂದರವಾದ ಖಗೋಳ ಘಟನೆಗೆ ಸಾಕ್ಷಿಯಾಗಲಿದೆ. ಏಪ್ರಿಲ್ 12ರ ರಾತ್ರಿ ‘ಪಿಂಕ್​ ಮೂನ್​’ ಕಾಣಿಸಿಕೊಂಡಿದೆ. ಹೆಸರಿನಲ್ಲಿ ‘ಪಿಂಕ್​’ ಇದೆ ಎಂದ ಮಾತ್ರಕ್ಕೆ ಚಂದ್ರ ಗುಲಾಬಿ ಬಣ್ಣದಲ್ಲಿ ಕಂಗೊಳಿಸುವುದಿಲ್ಲ. ಬದಲಾಗಿ ಇದೊಂದು ವಿಶೇಷ ಹುಣ್ಣಿಮೆಯ ರಾತ್ರಿಯಾಗಿದ್ದು, ಇದನ್ನು ವೈಜ್ಞಾನಿಕವಾಗಿ ‘ಮೈಕ್ರೋಮೂನ್’ ಎಂದು ಕರೆಯಲಾಗುತ್ತದೆ.

‘ಪಿಂಕ್​ ಮೂನ್​’ ಎಂದು ಕರೆಯುವುದೇಕೆ?: ‘ಪಿಂಕ್​ ಮೂನ್​’ ಎಂಬ ಹೆಸರು ಸ್ಥಳೀಯ ಅಮೆರಿಕನ್ ಸಂಪ್ರದಾಯಗಳಿಂದ ಹುಟ್ಟಿಕೊಂಡಿದೆ. ಏಪ್ರಿಲ್ ತಿಂಗಳಲ್ಲಿ ವಸಂತಕಾಲ ಪ್ರಾರಂಭವಾದಾಗ, ‘ಮಾಸ್ ಪಿಂಕ್’ ಅಥವಾ ‘ಫ್ಲೋಕ್ಸ್’ನಂತಹ ಕೆಲವು ವಿಶೇಷ ಹೂವುಗಳು ಅರಳುತ್ತವೆ. ಈ ಹೂವುಗಳ ಸೌಂದರ್ಯ ಬಿಂಬಿಸಲು, ಏಪ್ರಿಲ್ ತಿಂಗಳ ಹುಣ್ಣಿಮೆಯನ್ನು ‘ಪಿಂಕ್​ ಮೂನ್​’ ಎಂದು ಕರೆಯಲಾಗುತ್ತದೆ. ಈಸ್ಟರ್ ಭಾನುವಾರದ ದಿನಾಂಕವನ್ನು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದರಿಂದ ‘ಪ್ಯಾಸ್ಕಲ್ ಮೂನ್’ ಅಂತಲೂ ಕರೆಯಲ್ಪಡುತ್ತದೆ.

ಮೈಕ್ರೋಮೂನ್’ ಎಂದರೇನು?: ಚಂದ್ರನು ಭೂಮಿಯಿಂದ ಅತ್ಯಂತ ದೂರದಲ್ಲಿದ್ದಾಗ (ಅಪೋಜಿ) ಮತ್ತು ಹುಣ್ಣಿಮೆ ಅದೇ ಸಮಯದಲ್ಲಿ ಬಂದಾಗ ಅದನ್ನು ‘ಮೈಕ್ರೋಮೂನ್’ ಎಂದು ಕರೆಯಲಾಗುತ್ತದೆ. ಈ ವೇಳೆ ಚಂದ್ರನು ಸಾಮಾನ್ಯ ಹುಣ್ಣಿಮೆಗಿಂತ ಸ್ವಲ್ಪ ಚಿಕ್ಕದಾಗಿ ಮತ್ತು ಕಡಿಮೆ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ.

ಇಂದು ಸಹ ಪಿಂಕ್​ ಮೂನ್​: ‘ಪಿಂಕ್​ ಮೂನ್​’ ಏಪ್ರಿಲ್ 12ರಂದು ರಾತ್ರಿ 8:22ರ ವೇಳೆಗೆ ಅತ್ಯಂತ ಉತ್ತುಂಗದಲ್ಲಿರಲಿದೆ. ಸೂರ್ಯಾಸ್ತದ ನಂತರ ನೋಡುವುದು ಉತ್ತಮ. ರಾತ್ರಿಯಿಡೀ ಆಕಾಶದಲ್ಲಿ ಕಂಗೊಳಿಸಲಿರುವ ಚಂದಿರ, ಮರುದಿನ ಅಂದ್ರೆ ಏಪ್ರಿಲ್​ 13ರ ಬೆಳಗ್ಗೆ ಮತ್ತು ರಾತ್ರಿ ಚಂದ್ರ ಹುಣ್ಣಿಮೆಯಂತೆ ಪೂರ್ಣವಾಗಿ ಕಾಣಿಸಲಿದ್ದಾನೆ. ಹೀಗಾಗಿ, ಶನಿವಾರ ರಾತ್ರಿ ಈ ಕೌತುಕವನ್ನು ಮಿಸ್​ ಮಾಡಿಕೊಂಡವರಿಗೆ ಇಂದೂ ಕೂಡ ಮತ್ತೊಂದು ಅವಕಾಶ ಸಿಗಲಿದೆ.

ಸ್ಪಷ್ಟ ನೋಟ ಗೋಚರಿಸುವುದೆಲ್ಲಿ?: ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ಮೈದಾನ, ಬೀಚ್, ಗುಡ್ಡಗಾಡು ಪ್ರದೇಶ ಅಥವಾ ಗ್ರಾಮೀಣ ಪ್ರದೇಶದಂತಹ ಕಡಿಮೆ ಬೆಳಕಿರುವ ಸ್ಥಳವನ್ನು ಆಯ್ದುಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಪೂರ್ವ ದಿಕ್ಕಿನ ಮೇಲ್ಛಾವಣಿಯಿಂದ ಅಥವಾ ಎತ್ತರದ ಕಟ್ಟಡದಿಂದ ಚಂದ್ರನನ್ನು ಸುಲಭವಾಗಿ ನೋಡಬಹುದು.

ವಿಶೇಷತೆ ಏನು?: ಖಗೋಳ ಪ್ರಿಯರಿಗೆ ಮತ್ತೊಂದು ರೋಮಾಂಚನಕಾರಿ ವಿಷಯವೆಂದರೆ, ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಚಂದ್ರನು ಸ್ವಲ್ಪ ಸಮಯದವರೆಗೆ ಸ್ಪೈಕಾ ನಕ್ಷತ್ರವನ್ನು ಆವರಿಸುವುದನ್ನು ಕಾಣಬಹುದಾಗಿದೆ. ಈ ವಿದ್ಯಮಾನವನ್ನು ‘ನಿಗೂಢತೆ’ (Occultation) ಎಂದೂ ಕರೆಯಲಾಗುತ್ತದೆ.

Source: ETV Bharat

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *