IND vs NZ Live Streaming: ಕಿವೀಸ್ ವಿರುದ್ಧ ಗೆದ್ದರಷ್ಟೇ ಭಾರತಕ್ಕೆ ವಿಶ್ವಕಪ್​ನಲ್ಲಿ ಉಳಿಗಾಲ! ಪಂದ್ಯ ಎಷ್ಟು ಗಂಟೆಗೆ ಆರಂಭ?

Hockey World Cup 2023 india vs new zealand match streaming when where to watch cross over match

ಒಡಿಶಾದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್​ನಲ್ಲಿ (Hockey World Cup 2023 ) ಇಂದು, ಅಂದರೆ ಜನವರಿ 22 ರ ಭಾನುವಾರದಂದು ಕ್ರಾಸ್-ಓವರ್ (cross over match) ಪಂದ್ಯಗಳು ನಡೆಯಲ್ಲಿವೆ. ಇಂದಿನ ಪಂದ್ಯಗಳಲ್ಲಿ ಗೆದ್ದ 4 ತಂಡಗಳು ಕ್ವಾರ್ಟರ್-ಫೈನಲ್​ಗೆ ಟಿಕೆಟ್ ಖಚಿತಪಡಿಸಿಕೊಳ್ಳಲಿವೆ. ಇವುಗಳಲ್ಲಿ ಭಾರತವೂ ಒಂದು. ವಿಶ್ವಕಪ್‌ನ ಆತಿಥೇಯ ಭಾರತ ತಂಡ ತನ್ನ ಸ್ವಂತ ತವರಿನಲ್ಲಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್ ತಲುಪಲು ಹೆಣಗಾಡುತ್ತಿದ್ದು, ಭಾನುವಾರದ ಪಂದ್ಯವು ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಭಾನುವಾರ ಸಂಜೆ ನಡೆಯಲಿರುವ ಕ್ರಾಸ್ ಓವರ್ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ (India Vs New Zealand) ಸೆಣಸಲಿದ್ದು, ಕ್ವಾರ್ಟರ್ ಫೈನಲ್ ತಲುಪಬೇಕಾದರೆ ನ್ಯೂಜಿಲೆಂಡ್ ತಂಡವನ್ನು ಯಾವುದೇ ಬೆಲೆ ತೆತ್ತಾದರೂ ಸೋಲಿಸಲೇಬೇಕಾಗಿದೆ.

ಭಾರತ ತಂಡ ತನ್ನ ಪೂಲ್‌ನಲ್ಲಿ ಆಡಿದ 3 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು, ಒಂದು ಪಂದ್ಯವನ್ನು ಗೋಲು ರಹಿತವಾಗಿ ಮುಕ್ತಾಯಗೊಳಿಸಿತ್ತು. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿದರೆ, ಇಂಗ್ಲೆಂಡ್ ವಿರುದ್ಧ ಆಡಿದ ಮುಂದಿನ ಪಂದ್ಯ 0-0ಯಿಂದ ಡ್ರಾ ಆಗಿತ್ತು. ಕೊನೆಯ ಪಂದ್ಯದಲ್ಲಿ ಭಾರತ, ವೇಲ್ಸ್ ತಂಡವನ್ನು ಎದುರಿಸಿತ್ತು. ಒಂದು ವೇಳೆ ಕ್ವಾರ್ಟರ್-ಫೈನಲ್‌ಗೆ ನೇರವಾಗಿ ಪ್ರವೇಶಿಸಬೇಕಾದರೆ ಕನಿಷ್ಠ 8 ಗೋಲುಗಳಿಂದ ಗೆದ್ದು ಬೀಗಬೇಕಿತ್ತು. ಆದರೆ ವೇಲ್ಸ್ ವಿರುದ್ಧ ಟೀಂ ಇಂಡಿಯಾ ಕೇವಲ 4-2 ಅಂತರದಿಂದ ಗೆದ್ದು, ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಳಿಸಿತು. ಹೀಗಾಗಿ ಟೀಂ ಇಂಡಿಯಾ ಕ್ವಾರ್ಟರ್-ಫೈನಲ್‌ಗೆ ಎಂಟ್ರಿಕೊಡಬೇಕಾದರೆ ಇದೀಗ ಕ್ರಾಸ್- ಓವರ್‌ ಪಂದ್ಯವನ್ನು ಆಡಲೇಬೇಕಾಗಿದೆ.

Hockey WC: ಗೆದ್ದು ಸೋತ ಭಾರತ ಹಾಕಿ ತಂಡ; ಈಗ ಕ್ವಾರ್ಟರ್ ಫೈನಲ್‌ಗೆ ಎಂಟ್ರಿಕೊಡುವುದು ಹೇಗೆ?

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹಾಕಿ ವಿಶ್ವಕಪ್ ಕ್ರಾಸ್- ಓವರ್‌ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹಾಕಿ ವಿಶ್ವಕಪ್ ಕ್ರಾಸ್- ಓವರ್‌ ಪಂದ್ಯವು ಜನವರಿ 22 ರ ಭಾನುವಾರದಂದು ನಡೆಯಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹಾಕಿ ವಿಶ್ವಕಪ್ ಕ್ರಾಸ್- ಓವರ್‌ ಪಂದ್ಯವನ್ನು ಎಲ್ಲಿ ಆಡಲಾಗುತ್ತದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹಾಕಿ ವಿಶ್ವಕಪ್ ಕ್ರಾಸ್- ಓವರ್‌ ಪಂದ್ಯವು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹಾಕಿ ವಿಶ್ವಕಪ್ ಕ್ರಾಸ್- ಓವರ್‌ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹಾಕಿ ವಿಶ್ವಕಪ್ ಕ್ರಾಸ್- ಓವರ್‌ ಪಂದ್ಯವು ಸಂಜೆ 7:00 ಗಂಟೆಗೆ ಪ್ರಾರಂಭವಾಗುತ್ತದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹಾಕಿ ವಿಶ್ವಕಪ್ ಪಂದ್ಯದ ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?

ಹಾಕಿ ವಿಶ್ವಕಪ್​ನ ಎಲ್ಲಾ ಪಂದ್ಯಗಳ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ವಿವಿಧ ಚಾನೆಲ್​ಗಳಲ್ಲಿ ವೀಕ್ಷಿಸಬಹುದಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹಾಕಿ ಕ್ರಾಸ್- ಓವರ್‌ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

2023 ರ ಹಾಕಿ ವಿಶ್ವಕಪ್‌ನ ಎಲ್ಲಾ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/hockey-world-cup-2023-india-vs-new-zealand-match-streaming-when-where-to-watch-cross-over-match-psr-au14-505946.html

Leave a Reply

Your email address will not be published. Required fields are marked *