ಸುರೇಶ್ ಪಟ್ಟಣ್ ಸುದ್ದಿ ಮತ್ತು ಪೋಟೋಗಳು.

ಚಿತ್ರದುರ್ಗ ಏ. 30ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ (ರಿ.), ತರಳಬಾಳು ಜಗದ್ಗುರು ಶಾಖಾ ಮಠ, ಸಾಣೆಹಳ್ಳಿ ಹಾಗೂ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಂಸ್ಕೃತಿ ಕಮ್ಮಟವು ದಿನಾಂಕ 4.05.2025 ರಿಂದ 6.5.2025 ವರೆಗೆ ಮೂರು ದಿನಗಳು ವಿವಿಧ ವೈವಿಧ್ಯಮಯ ಕಾರ್ಯಕ್ರಮ ಜರುಗುತ್ತವೆ.
ಚಿತ್ರಕಲೆ ಹಸೆ ಚಿತ್ತಾರ ಸಂಗೀತ ಯಕ್ಷಗಾನ ಮೂಲ ಜಾನಪದ ನೃತ್ಯ ಕಲೆಗಳ ಬಗ್ಗೆ ಉಚಿತ ತರಬೇತಿ ನೀಡಲಾಗುವುದು. ಊಟ ಹಾಗೂ ವಸತಿ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದು ಊಟಕ್ಕೆ ತಟ್ಟೆ ಲೋಟ, ಮಲಗಲು ಜಮಖಾನವನ್ನು ತರುವುದು ಹಾಗೂ ಪ್ರಯಾಣ ಭತ್ಯೆ ನೀಡುವುದಿಲ್ಲ. ಈ ಕಾರ್ಯಕ್ರಮಕ್ಕೆ ನಮ್ಮ ಚಿತ್ರದುರ್ಗ ಜಿಲ್ಲೆಯ ವತಿಯಿಂದ 25 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತ ಮಕ್ಕಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಲು ಯೋಗೀಶ್ ಸಹ್ಯಾದ್ರಿ, ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಚಿತ್ರದುರ್ಗ. ಮೊ : 9972240239. ಮಾರುತಿ ನಾಯ್ಕ, ಪ್ರಧಾನ ಕಾರ್ಯದರ್ಶಿ, ಮ. ಸಾ. ಪ. ಚಿತ್ರದುರ್ಗ ಮೊ : 99863 36164. ವಿಜಯ್ ಕುಮಾರ್ ಬಿ. ಉಪಾಧ್ಯಕ್ಷರು ಮ, ಸಾ ಪ.ಮೊ : 96867 24546. ಹಾಲೇಶ್ ಸಿ.ಜಿ, ಸಂಘಟನಾ ಕಾರ್ಯದರ್ಶಿ, ಮ.ಸಾ.ಪ, ಚಿತ್ರದುರ್ಗ : ಮೊ 77609 32325. ಸಂಪರ್ಕ ಮಾಡಬಹುದಾಗಿದೆ ಮೊದಲು ಕರೆ ಮಾಡಿದವರಿಗೆ ಆದ್ಯತೆ ನೀಡಲಾಗುವುದು.