
ವರದಿ ಮತ್ತು ಪೋಟೋ ಕೃಪೆ: ಸುರೇಶ್ ಪಟ್ಟಣ್
ಚಿತ್ರದುರ್ಗ ಏ. 30 : ಬಸವ ಜಯಂತಿ ಅಂಗವಾಗಿ ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಾಳೇಕಾಯಿ, ಜಿ.ಎಸ್ ಸಂಪತ್ ಕುಮಾರ್ ಬಿಜೆಪಿ ಯುವ ಮುಖಂಡರಾದ ಸಿದ್ದಾರ್ಥ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಶಂಭು ಜೆ ಎಸ್, ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಾಂಡು, ಗ್ರಾಮಾಂತರ ಮಂಡಳದ ಅಧ್ಯಕ್ಷರಾದ ನಾಗರಾಜ್, ಮಾಜಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಕಲ್ಲೇಶಯ್ಯ, ಕಿರಣ್, ಮಹಾಂತೇಶ್, ಓಂಕಾರಪ್ಪ, ಪಾಪಣ್ಣ ಉಪಸ್ಥಿತರಿದ್ದರು.