
6-6-6 ವಾಕಿಂಗ್ ವಿಧಾನವು ಪ್ರತಿದಿನ 6000 ಹೆಜ್ಜೆಗಳನ್ನು ಮೂರು ಭಾಗಗಳಲ್ಲಿ ನಡೆಯುವುದನ್ನು ಸೂಚಿಸುತ್ತದೆ. ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ 6 ನಿಮಿಷಗಳ ವಾಕಿಂಗ್. ಇದು ಹೃದಯದ ಆರೋಗ್ಯ ಸುಧಾರಿಸುತ್ತದೆ.
ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಕ್ರಿಯಾಶೀಲವಾಗಿಟ್ಟುಕೊಳ್ಳಲು ಸರಳವಾದ ಮಾರ್ಗವೆಂದರೆ ಪ್ರತಿದಿನ ವಾಕ್ ಮಾಡುವುದು. ದಿನಾ ವಾಕ್ ಮಾಡುವುದರಿಂದ ತೂಕ ಇಳಿಕೆಯಷ್ಟೇ ಅಲ್ಲದೇ, ಹಲವು ರೀತಿಯ ಪ್ರಯೋಜನಗಳಿವೆ. ಜಿಮ್ಗೆ ಹೋಗಿ ದುಬಾರಿ ಸಲಕರಣೆಗಳೊಂದಿಗೆ ಹೆಣಗಾಡುವಷ್ಟು ಕಷ್ಟವಲ್ಲ ವಾಕಿಂಗ್. ಇದು ತುಂಬಾ ಸರಳವಾದ ವಿಧಾನವಾಗಿದೆ. ಆದರೆ, ಅನೇಕ ಮಂದಿ ತಮ್ಮ ಬಿಡುವಿಲ್ಲದ ಕೆಲಸದಿಂದ ಈ ಸರಳ ವ್ಯಾಯಾಮ ಮಾಡಲು ಕೂಡ ಸಮಯ ಸಿಗದೇ ಪರದಾಡುತ್ತಿದ್ದರೆ, ಆದರೆ ಈ 6-6-6 ವಾಕಿಂಗ್ ರೂಲ್ಸ್ ನಿಮ್ಮ ಉಪಯೋಗಕ್ಕೆ ಬರುತ್ತದೆ.
6-6-6 ವಾಕಿಂಗ್ ರೂಲ್ಸ್: 6-6-6 ವಾಕಿಂಗ್ ವಿಧಾನವು ಪ್ರತಿದಿನ ವಾಕಿಂಗ್ ಮಾಡುವುದಾಗಿದೆ. ಇದು ಸುಲಭವಾಗಿ ಮಾಡಬಹುದಾದ ವ್ಯಾಯಾಮವಾಗಿದ್ದು, ಅನೇಕ ಮಂದಿಯ ಗಮನ ಸೆಳೆಯುತ್ತದೆ. ಪ್ರತಿದಿನ ಸ್ವಲ್ಪ ಹೊತ್ತು ವಾಕಿಂಗ್ ಮಾಡುವುದರಿಂದ ಹೃದಯದ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಈ ವಾಕಿಂಗ್ ವಿಧಾನದಲ್ಲಿ ‘6-6-6’ ಎಂದರೆ ಮೂರು ಭಾಗಗಳಲ್ಲಿ 6000 ಹೆಜ್ಜೆಗಳನ್ನು ನಡೆಯುವುದನ್ನು ಸೂಚಿಸುತ್ತದೆ. ಅಂದರೆ ಉಪಾಹಾರದ ನಂತರ 6 ನಿಮಿಷಗಳ ವಾಕಿಂಗ್, ಮಧ್ಯಾಹ್ನದ ಊಟದ ನಂತರ 6 ನಿಮಿಷಗಳ ವಾಕಿಂಗ್ ಮತ್ತು ರಾತ್ರಿ ಊಟದ ನಂತರ 6 ನಿಮಿಷಗಳ ವಾಕಿಂಗ್ ಮಾಡುವುದಾಗಿದೆ.
ಈ ವಾಕಿಂಗ್ ವಿಧಾನವು ಮೂರು ಭಾಗಗಳಲ್ಲಿ 6000 ಹೆಜ್ಜೆಗಳನ್ನು ಪೂರ್ಣಗೊಳಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಉಪಾಹಾರದ ನಂತರ ಆರು ನಿಮಿಷಗಳು, ಮಧ್ಯಾಹ್ನದ ಊಟದ ನಂತರ ಆರು ನಿಮಿಷ ಮತ್ತು ರಾತ್ರಿಯ ಊಟದ ಆರು ನಿಮಿಷಗಳ ಕಾಲ ವಾಕ್ ಮಾಡಬೇಕು. ಪ್ರತಿ ಊಟದ ನಂತರ 2000 ಹೆಜ್ಜೆ ವಾಕಿಂಗ್ ಮಾಡಿದ್ದೇವೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ಇದಕ್ಕಾಗಿ ನೀವು ಪ್ರತಿ ಬಾರಿ ನಡೆಯುವಾಗ ನಿಮ್ಮ ಸಾಮಾನ್ಯ ನಡಿಗೆಯ ವೇಗಕ್ಕಿಂತ ಸ್ವಲ್ಪ ವೇಗವಾಗಿ ನಡೆಯಬೇಕು.
6-6-6 ನಡಿಗೆ ವಿಧಾನದ ಪ್ರಯೋಜನಗಳು: ಪ್ರತಿದಿನ 6000 ಹೆಜ್ಜೆಗಳನ್ನು ನಿರಂತರವಾಗಿ ನಡೆಯುವುದರಿಂದ ರಕ್ತದೊತ್ತಡ ಕಡಿಮೆ ಆಗುತ್ತದೆ, ರಕ್ತದ ಹರಿವು ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುವ ಮೂಲಕ ಹೃದಯದ ಆರೋಗ್ಯ ಸುಧಾರಿಸುತ್ತದೆ.
ಇತರ ರೀತಿಯ ವ್ಯಾಯಾಮದಂತೆ, ವಾಕಿಂಗ್ ಒತ್ತಡ, ಉದ್ವೇಗ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಮನಸ್ಥಿತಿಯನ್ನು ಸುಧಾರಿಸುವ ಎಂಡಾರ್ಫಿನ್ಗಳನ್ನು ಹೆಚ್ಚಿಸುತ್ತದೆ. ಸ್ಥಿರವಾದ ವಾಕಿಂಗ್ ದಿನಚರಿಯನ್ನು ಕಾಪಾಡಿಕೊಳ್ಳುವುದರಿಂದ ದೈನಂದಿನ ಕ್ಯಾಲೋರಿಗಳನ್ನು ಬರ್ನ್ ಮಾಡುವ ಮೂಲಕ ಮತ್ತು ಚಯಾಪಚಯ ಆರೋಗ್ಯವನ್ನು ಸುಧಾರಿಸುವ ಮೂಲಕ ತೂಕ ಇಳಿಸಿಕೊಳ್ಳಲು ಅಥವಾ ನಿರ್ವಹಿಸಲು ಸಹಾಯ ಮಾಡುತ್ತದೆ.
ವಾಕಿಂಗ್ ಕಡಿಮೆ ಪರಿಣಾಮ ಬೀರುವ ವ್ಯಾಯಾಮವಾಗಿದ್ದು, ಇದು ಕೀಲು ಮತ್ತು ಸ್ನಾಯುಗಳ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಕಾಲುಗಳು, ಸೊಂಟ ಮತ್ತು ಪೃಷ್ಠಕ್ಕೆ ವಿಶೇಷವಾಗಿ ಪರಿಣಾಮಕಾರಿ ವ್ಯಾಯಾಮವಾಗಿದೆ. ಈ ವಾಕಿಂಗ್ ವಿಧಾನವು ದೀರ್ಘಕಾಲದವರೆಗೆ ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನು ಪ್ರತಿದಿನ ಫಾಲೋ ಮಾಡುವ ಮೂಲಕ ನೀವು ನಿಮ್ಮ ತ್ರಾಣವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಒಂದು ದಿನದಲ್ಲಿ 10,000 ಹೆಜ್ಜೆಗಳಷ್ಟು ಸುಲಭವಾಗಿ ವಾಕ್ ಮಾಡಬಹುದು.
News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1