Opal Suchata Chuangsri: 22 ವರ್ಷದ ವಿದ್ಯಾರ್ಥಿನಿಗೆ ವಿಶ್ವ ಸುಂದರಿ ಪಟ್ಟ; ಯಾರಿವರು? ಏನಿವರ ಹಿನ್ನೆಲೆ?

Miss World 2025: ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಶನಿವಾರ (ಮೇ 31) 72ನೇ ವಿಶ್ವ ಸುಂದರಿ 2025 ಸ್ಪರ್ಧೆ ಅ‍ದ್ಧೂರಿಯಾಗಿ ನಡೆಯಿತು. ಥಾಯ್ಲೆಂಡ್‌ನ ಓಪ್ಲಾ ಸುಚಾತಾ ಚುಂಗಸಿರಿ (Opal Suchata Chuangsri) ಈ ಬಾರಿಯ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು. ಓಪಲ್‌ ಸುಚಾತಾಗೆ 2024ರ ಮಿಸ್‌ ವರ್ಲ್ಡ್‌ ಕ್ರಿಸ್ಟಿನಾ ಪಿಸ್ಕ್‌ಜೋವಾ ಕಿರೀಟ ತೊಡಿಸಿದರು. ಇನ್ನು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಭಾರತದ ನಂದಿನಿ ಗುಪ್ತಾ ಟಾಪ್‌ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದರು.

Opal Suchata Chuangsri: 22 ವರ್ಷದ ವಿದ್ಯಾರ್ಥಿನಿಗೆ ವಿಶ್ವ ಸುಂದರಿ ಪಟ್ಟ; ಯಾರಿವರು? ಏನಿವರ ಹಿನ್ನೆಲೆ? - Image 1
ಇನ್ನು ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಮೊದಲ ರನ್ನರ್ ಅಪ್ ಆದರೆ, ಪೋಲೆಂಡ್ನ ಮಜಾ ಕ್ಲಾಜ್ಡಾ 2ನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು. ಈ ವರ್ಷ ಒಟ್ಟು 108 ಸ್ಪರ್ಧಿಗಳು ಕಣದಲ್ಲಿದ್ದರು. 2016ರ ಮಿಸ್ ವರ್ಲ್ಡ್ ಸ್ಟೆಫೆನಿಡೆಲ್ ವ್ಯಾಲೆ ಕಾರ್ಯಕ್ರಮ ನಿರೂಪಿಸಿದರು.
Opal Suchata Chuangsri: 22 ವರ್ಷದ ವಿದ್ಯಾರ್ಥಿನಿಗೆ ವಿಶ್ವ ಸುಂದರಿ ಪಟ್ಟ; ಯಾರಿವರು? ಏನಿವರ ಹಿನ್ನೆಲೆ? - Image 2
22 ವರ್ಷದ ಓಪಲ್‌ 2003ರ ಸೆಪ್ಟೆಂಬರ್‌ 20ರಂದು ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಜನಿಸಿದರು. ಥಾಯ್‌, ಇಂಗ್ಲಿಷ್‌ ಮತ್ತು ಚೈನೀಷ್‌ ಭಾಷೆಯಲ್ಲಿ ಪರಿಣಿತಿ ಹೊಂದಿರುವ ಅವರು ಅಂತಾರಾಷ್ಟ್ರೀಯ ಸಂಬಂಧಗಳ ವಿದ್ಯಾರ್ಥಿನಿ. ಜತೆಗೆ ಮಾಡೆಲ್‌ ಆಗಿಯೂ ಜನಪ್ರಿಯರಾಗಿದ್ದಾರೆ.
Opal Suchata Chuangsri: 22 ವರ್ಷದ ವಿದ್ಯಾರ್ಥಿನಿಗೆ ವಿಶ್ವ ಸುಂದರಿ ಪಟ್ಟ; ಯಾರಿವರು? ಏನಿವರ ಹಿನ್ನೆಲೆ? - Image 3
ಮಾಡೆಲ್‌, ವಿದ್ಯಾರ್ಥಿನಿ ಮಾತ್ರವಲ್ಲ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಓಪಲ್‌ ಗುರುತಿಸಿಕೊಂಡಿದ್ದಾರೆ. 16ನೇ ವಯಸ್ಸಿನಲ್ಲಿ ಅವರು ಸ್ತನ ಆರೋಗ್ಯ ಜಾಗೃತಿಗಾಗಿ ಓಪಲ್ ಫಾರ್ ಹರ್ ಎಂಬ ಅಭಿಯಾನ ಪ್ರಾರಂಭಿಸಿದ್ದರು. ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣಕ್ಕಾಗಿ ಇದು ಕಾರ್ಯ ನಿರ್ವಹಿಸುತ್ತಿದೆ. ಓಪಲ್ ಸ್ತನ ಗಡ್ಡೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
Opal Suchata Chuangsri: 22 ವರ್ಷದ ವಿದ್ಯಾರ್ಥಿನಿಗೆ ವಿಶ್ವ ಸುಂದರಿ ಪಟ್ಟ; ಯಾರಿವರು? ಏನಿವರ ಹಿನ್ನೆಲೆ? - Image 4
ಓಪಲ್‌ ಮಿಸ್ ಯೂನಿವರ್ಸ್ ಥೈಲ್ಯಾಂಡ್ 2024 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ ಮತ್ತು ಮಿಸ್ ಯೂನಿವರ್ಸ್ 2024 ರಲ್ಲಿ ಮೂರನೇ ರನ್ನರ್-ಅಪ್ ಆಗಿ ಹೊರ ಹೊಮ್ಮಿದ್ದಾರೆ. ಈ ಬಾರಿ ಮಿಸ್ ವರ್ಲ್ಡ್ ಗೆದ್ದ ಅವರು ಈ ಪಟ್ಟಕ್ಕೇರಿದ ಮೊದಲ ಥಾಯ್ಲೆಂಡ್‌ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Opal Suchata Chuangsri: 22 ವರ್ಷದ ವಿದ್ಯಾರ್ಥಿನಿಗೆ ವಿಶ್ವ ಸುಂದರಿ ಪಟ್ಟ; ಯಾರಿವರು? ಏನಿವರ ಹಿನ್ನೆಲೆ? - Image 5
ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 108 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ 1 ತಿಂಗಳಿಂದ ನನಡೆದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಮೆರುಕ ಮತ್ತು ಕೆರಿಬಿಯನ್‌, ಯುರೋಪ್‌, ಏಷ್ಯಾ ಹಾಗೂ ಓಸಿನಿಯಾ ಎಂಬ 4 ವಿಭಾಗಗಳಲ್ಲಿ ನಡೆದ ಸ್ಪರ್ಧಗಳಿಂದ 1 ವಿಭಾಗದಿಂದ 10 ಜನರನ್ನು ಸೆಮುಫೈನಲ್‌ಗೆ ಆಯ್ಕೆ ಮಾಡಲಾಯಿತು. ನಂತ್‌ 16 ಸ್ಪರ್ಧಿಗಳನ್ನು ಫೂನಲ್‌ಗೆ ಆಯ್ಕೆ ಮಾಡಲಾಯಿತು. ಅದರಲ್ಲಿ ಟಾಪ್‌ 8 ಮತ್ತು ಫೈನಲ್‌ ನಡೆಯಿತು. ಕೊನೆಗೆ ಓಪ್‌ ಪಟ್ಟ ಅಲಂಕರಿಸಿದರು.

Vishwavani

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *