ದೀಪಿಕಾ- ಶಾರುಖ್ ಖಾನ್ ಪಠಾಣ್ ಚಿತ್ರದ ವಿವಾದ:

ಭೋಪಾಲ್: ಶಾರುಖ್ ಖಾನ್ -ದೀಪಿಕಾ ಪಡುಕೋಣೆ ಅಭಿನಯದ ಹೊಸ ಚಿತ್ರ ‘ಪಠಾಣ್’ ಬಿಡುಗಡೆ ಪೂರ್ವದಲ್ಲಿ ವಿವಾದಕ್ಕೆ ಗುರಿಯಾಗಿದೆ. ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಬಿಕಿನಿ ದೃಶ್ಯದ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಅದು ಮಾನ ಮರ್ಯಾದೆ ಇಲ್ಲದ ದೃಶ್ಯ. ಅರೆನಗ್ನವಾಗಿ ನರ್ತಿಸುತ್ತಿರುವುದರಿಂದ ಯಶಸ್ಸು ಸಿಗುತ್ತದೆ ಎನ್ನುವುದು ಭ್ರಮೆ. ಚಿತ್ರದ ಬೇಷರಮ್ ರಂಗ್’ ಎನ್ನುವ ಹಾಡು ನೋಡಲು ಅಸಹ್ಯ ಎನಿಸುತ್ತದೆ. ಇದರಲ್ಲಿನ ಕೇಸರಿ ಬಣ್ಣದ ಬಿಕಿನಿ ದೃಶ್ಯ ಕೈ ಬಿಡದಿದ್ದರೆ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’ ಎಂದು ಸರ್ಕಾರದ ವಕ್ತಾರರು ಆಗಿರುವ ಮಿಶ್ರ ಎಚ್ಚರಿಸಿದ್ದಾರೆ.

ಬೆಷರಮ್ ರಂಗ್ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅರೆನಗ್ನ ಉಡುಗೆಯಲ್ಲಿ ದೀಪಿಕಾ ಅವರು ನೃತ್ಯದ ದೃಶ್ಯವೊಂದು ವಿವಾದದ ಧೂಳೆಬ್ಬಿಸಿದೆ. “ಜವಹರಲಾಲ್ ನೆಹರು ವಿವಿಯಲ್ಲಿ ಇರುವ ತುಕ್ಡೆ ತುಕ್ಡೆ ಗ್ಯಾಂಗ್ ನ ಬೆಂಬಲಿಗರಾದ ದೀಪಿಕಾ ಪಡುಕೋಣೆ ಅವರಿಗೆ ಸಬ್ಯತೆಯ ಪಾಠ ಹೇಳಿ ಕೊಡಬೇಕಿದೆ.” ಎಂದು ಸಚಿವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪಟಾಣ್’ ಚಿತ್ರ ಜನವರಿ 25ರಂದು ತೆರೆ ಕಾಣಲಿದೆ.

Leave a Reply

Your email address will not be published. Required fields are marked *