ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕಲ್ಯಾಣ ಕರ್ನಾಟಕ ವೃಂದದ ಪೌರಾಡಳಿತ ನಿರ್ದೇಶನಾಲಯ, ಇಎಸ್ಐ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಹುದ್ದೆಗಳ ನೇಮಕಾತಿಗೆ ನವೆಂಬರ್ 6, 7 ಮತ್ತು 14 ರಂದು ಲಿಖಿತ ಪರೀಕ್ಷೆಗಳನ್ನು ನಡೆಸಲಿದೆ.
ಪರೀಕ್ಷಾ ವೇಳಾಪಟ್ಟಿ
- ನವೆಂಬರ್ 6: ಪೌರಾಡಳಿತ ನಿರ್ದೇಶನಾಲಯದ ಎಲೆಕ್ಟ್ರೀಷಿಯನ್ ಗ್ರೇಡ್-1 (3 ಹುದ್ದೆ) ಮತ್ತು ಗ್ರೇಡ್-2 (5 ಹುದ್ದೆ) ನಿರ್ದಿಷ್ಟ ಪತ್ರಿಕೆ ಪರೀಕ್ಷೆ.
- ನವೆಂಬರ್ 7: ಇಎಸ್ಐ ಫಾರ್ಮಸಿ ಅಧಿಕಾರಿ (11 ಹುದ್ದೆ) ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನರ್ಸಿಂಗ್ ಅಧಿಕಾರಿ (ಒಟ್ಟು 34 ಹುದ್ದೆಗಳು) ಪರೀಕ್ಷೆ.
- ನವೆಂಬರ್ 14 (ಬೆಳಗ್ಗೆ): ಪೌರಾಡಳಿತ ನಿರ್ದೇಶನಾಲಯದ ನೀರು ಸರಬರಾಜು ಆಪರೇಟರ್ (122 ಹುದ್ದೆ) ಮತ್ತು ಸಹಾಯಕ ನೀರು ಸರಬರಾಜು ಆಪರೇಟರ್ (80 ಹುದ್ದೆ) ನಿರ್ದಿಷ್ಟ ಪತ್ರಿಕೆ ಪರೀಕ್ಷೆ.
- ನವೆಂಬರ್ 14 (ಮಧ್ಯಾಹ್ನ): ಮೇಲಿನ ಎಲ್ಲಾ ಹುದ್ದೆಗಳಿಗೂ ಕಡ್ಡಾಯವಾಗಿರುವ ಸಾಮಾನ್ಯ ಜ್ಞಾನ ಪತ್ರಿಕೆಯ ಪರೀಕ್ಷೆ.


ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು
- ಪ್ರವೇಶದ ಸಮಯ: ತಪಾಸಣೆ (Frisking) ಮತ್ತು ಮುಖಚಹರೆ ಪರಿಶೀಲನೆ ಇರುವ ಕಾರಣ ಪರೀಕ್ಷಾ ಕೇಂದ್ರಕ್ಕೆ 2 ಗಂಟೆ ಮುಂಚಿತವಾಗಿ ಹಾಜರಿರುವುದು ಕಡ್ಡಾಯ.
- ಋಣಾತ್ಮಕ ಅಂಕಗಳು: ಪ್ರತಿ ತಪ್ಪು ಉತ್ತರಕ್ಕೆ 1/4 (0.25) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
- ಐದನೇ ಆಯ್ಕೆ (Option): ಉತ್ತರಿಸದಿರುವ ಪ್ರಶ್ನೆಗಳಿಗೆ 5ನೇ ವೃತ್ತವನ್ನು ಕಡ್ಡಾಯವಾಗಿ ಶೇಡ್ ಮಾಡಬೇಕು. ಇದಕ್ಕಾಗಿ ಪರೀಕ್ಷೆಯ ಕೊನೆಯಲ್ಲಿ 5 ನಿಮಿಷ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಓಎಂಆರ್ ಶೀಟ್ನಲ್ಲಿ ಯಾವುದೇ ವೃತ್ತವನ್ನು ಶೇಡ್ ಮಾಡದಿದ್ದರೂ 0.25 ಅಂಕಗಳು ಕಡಿತಗೊಳ್ಳುತ್ತವೆ. ಪೂರ್ಣ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್ಸೈಟ್ ಪರಿಶೀಲಿಸಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು