ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ : ಆರ್ದ್ರಾ, ಯೋಗ: ಸೌಭಾಗ್ಯ, ಕರಣ: ಕಿಂಸ್ತುಘ್ನ, ಸೂರ್ಯೋದಯ – 06 : 07 am, ಸೂರ್ಯಾಸ್ತ – 07 : 03 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:13 – 15:50, ಯಮಘಂಡ ಕಾಲ 06:07 – 07:44, ಗುಳಿಕ ಕಾಲ 09:21 – 10:59
ಮೇಷ ರಾಶಿ: ಭಕ್ತಿಯ ಪರೀಕ್ಷೆ ನಡೆಯಬಹುದು. ಎಂತಹ ಕಷ್ಟದಲ್ಲಿಯೂ ನೆಮ್ಮದಿಯನ್ನೇ ಹುಡುಕುವಿರಿ. ಹೊಸ ಕಾರ್ಯವನ್ನು ಮಾಡಲು ಅತಿಯಾದ ಭಯವು ಬರಲಿದೆ. ಉಕ್ಕಿ ಬರುವ ಪ್ರವಾಹವನ್ನು ತಡೆಯಲು ಅಲ್ಪ ಶಕ್ತಿ ಸಾಲದು. ಅಧಿಕಾರದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ಇದರಿಂದ ನಿಮ್ಮ ಕೆಳಗಿನವರು ಸಿಟ್ಟಗೊಂಡಾರು. ನಿಮ್ಮ ಕೆಲಸದ ಮೇಲೆ ಇದರ ಪರಿಣಾಮವಿರಲಿದೆ. ನಿಮ್ಮ ನಂಬಿ ಹಣವನ್ನು ಕೊಡಬಹುದು. ಅದನ್ನು ಉಳಿಸಿಕೊಳ್ಳಿ. ಸರಿಯಾಗಿ ಸಮಯವನ್ನು ಬಳಸಿ. ನೀವೇ ಬಳಸಿ ಬಿಟ್ಟಿದ್ದ ಹಳೆಯ ವಸ್ತುಗಳನ್ನು ನೀವು ಬಳಸಲು ಆರಂಭಿಸುವಿರಿ. ಕಷ್ಟದಿಂದ ಮುಕ್ತಿ ಸಿಕ್ಕಿತೆಂಬ ಸಂತೋಷದಲ್ಲಿರುವಾಗ ನಿಮಗೆ ಅನಾರೋಗ್ಯ ಉಂಟಾಗಲಿದೆ. ಮಕ್ಕಳ ಜೊತೆ ಇರಲು ನಿಮಗೆ ಇಂದು ಅಸಾಧ್ಯವಾದೀತು. ಒಳ್ಳೆಯ ಕಾಲದ ನಿರೀಕ್ಷೆಯಲ್ಲಿ ಇರುವಿರಿ. ಯಾವುದೋ ಗಹನವಾದ ಆಲೋಚನೆಯಲ್ಲಿ ನೀವು ಮುಳುಗಿರುವಿರಿ. ಇನ್ನೊಬ್ಬರ ವಸ್ತುವನ್ನು ಕೇಳಿ ಪಡೆಯಿರಿ. ಆಪ್ತರ ಮಾತಿನಿಂದ ನಿಮ್ಮ ಕೆಲವು ಅಭಿಪ್ರಾಯವು ಬದಲಾಗುವುದು.
ವೃಷಭ ರಾಶಿ: ವೃತ್ತಿಯ ಪರಿಶ್ರಮ ಸಾರ್ಥಕವಾಗಲಿದೆ. ನಿಮಗೆ ದುರಭ್ಯಾಸದಿಂದ ಉನ್ನತ ಸ್ಥಾನವು ತಪ್ಪಬಹುದು. ಒತ್ತಡವಿದ್ದರೂ ಅದನ್ನು ನಿಭಾಯಿಸಿಕೊಂಡು ಹೋಗುವಿರಿ. ತಂದೆಯಿಂದ ಬರಬಹುದಾದ ಧನವು ವಿಳಂಬವಾಗಲಿದೆ. ಎಂದೋ ಆಗಬೇಕಿದ್ದ ಕಾರ್ಯ ಕೊನೆಗೂ ತಾನಾಗಿಯೇ ಘಟಿಸಿದ್ದು, ಖುಷಿ ಇಲ್ಲದೇ ಬೇಸರವೂ ಇಲ್ಲದೇ ಯಥಾಸ್ಥಿತಿಯಲ್ಲಿ ಇರುವಿರಿ. ನಿಮ್ಮ ವಿವಾಹವನ್ನು ಮಾಡಿಸಬೇಕೆಂಬ ಪ್ರಯತ್ನವು ವ್ಯರ್ಥವಾದೀತು. ರಾಜಕಾರಿಣಿಗಳಿಗೆ ಒಳ್ಳೆಯ ಬೆಂಬಲ ಸಿಗಲಿದೆ. ಅನ್ಯ ವ್ಯಕ್ತಿಯ ಮೂಲಕ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಅಧಿಕಾರದಿಂದ ಕೆಳಗಿಳಿಯಬೇಕಾಗಿದೆ ಎಂಬ ಆತಂಕ ಇರಲಿದೆ. ಧನಲಾಭವಾಗುವುದೆಂದು ಕೆಟ್ಟ ಕಾರ್ಯದಲ್ಲಿ ಮಗ್ನರಾಗುವಿರಿ. ಎಷ್ಟೇ ಅನುಕೂಲವಿದ್ದರೂ ಪ್ರತಿಕೂಲ ಸನ್ನಿವೇಶಗಳನ್ನು ಚಿಂತಿಸುವಿರಿ. ಅಂದುಕೊಂಡಿದ್ದನ್ನು ಬಿಡದೇ ಮುಂದುವರಿಸಿ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ಸ್ಪರ್ಧಾತ್ಮಕವಾಗಿ ನೀವು ಕ್ರಿಯಾಶೀಲತೆಯನ್ನು ತೋರಿಸುವಿರಿ.
ಮಿಥುನ ರಾಶಿ: ಅಪರಿಚಿತರು ಬಂದು ನಿಮ್ಮಿಂದ ಸಹಾಯವನ್ನು ಕೇಳುವರು. ನಿಮ್ಮ ಇಂದಿನ ಹೊಸ ಪ್ರಯತ್ನಗಳು ಕಾರ್ಯಕ್ಕೆ ಬೇಕಾದ ಉತ್ಸಾಹವನ್ನು ಕೊಡುವುದು. ಸಣ್ಣ ವಿಚಾರಕ್ಕೂ ಕಲಹ ಮಾಡುವುದನ್ನು ಕಡಿಮೆ ಮಾಡಿ. ನಿಮ್ಮ ಬಗ್ಗೆ ಹಿಂದಿನಿಂದ ಮಾತನಾಡಿಕೊಳ್ಳುವರು. ಯಾರಿಗೂ ಕೇಡು ಬಯಸದೇ ನಿಮ್ಮಷ್ಟಕ್ಕೆ ನೀವಿರಿ. ಬಂಧುಗಳು ನಿಮ್ಮನ್ನು ಪ್ರೀತಿಸಬಹುದು. ಇಂದು ಹಣದ ಅವಶ್ಯಕತೆಯಿದ್ದು ಸಹೋದರನನ್ನು ಕೇಳುವಿರಿ. ನೂತನ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುವಿರಿ. ಆಪ್ತರಿಂದ ಹಣದ ವಿಚಾರದಲ್ಲಿ ಮೋಸ ಹೋಗುವಿರಿ. ಯಾರಾದರೂ ನಿಮಗೆ ಭಯ ಹುಟ್ಟಿಸಿಯಾರು. ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳು ಇರಲಿದ್ದಾರೆ. ಅವರ ಜೊತ ಸಮಯವನ್ನು ಕಳೆಯಲು ಬಯಸುವಿರಿ. ಆರ್ಥಿಕತೆಯ ಬಗ್ಗೆ ಹೆಚ್ಚು ಆಲೋಚನೆ ಇರುವುದು. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ಸಂಯಮದಿಂದ ವರ್ತಿಸುವ ಅವಶ್ಯಕತೆವಿರಲಿದೆ.
ಕರ್ಕಾಟಕ ರಾಶಿ: ಮನೆಯಿಂದ ಹೊರಡುವಾಗ ನಿಮಗೆ ಅಶುಭದ ಸೂಚನೆ ಸಿಗಲಿದ್ದು, ಗಮನಿಸದೇ ದುಃಖ ಪಡುವಿರಿ. ಇಂದು ನೀವು ಎಂತಹ ಚಟುವಟಿಕೆಯಿಂದ ಇದ್ದರೂ ನಿಮ್ಮ ಕೆಲಸ ಮಾತ್ರ ಆಗದೇ ಇರುವುದು. ನಿಮ್ಮ ಮಾತಿನ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಆಮೇಲೆ ಅದಕ್ಕೆ ಬೆಲೆಯೇ ಇಲ್ಲದಂತಾದೀತು. ಕೃಷಿಯ ಚಟುವಟಿಕೆಯಲ್ಲಿ ತೊಡಗುವ ಮನಸ್ಸಾದೀತು. ನಿಮ್ಮ ಮೇಲಿರುವ ದೂರನ್ನು ತಳ್ಳಿಹಾಕುವಿರಿ. ಬೇವರಿನ ಹನಿಯ ಮಹತ್ತ್ವ ಗೊತ್ತಾಗುವ ದಿನ ಇಂದು. ಉದ್ಯೋಗದಲ್ಲಿ ಸಿಗುವ ಪದೋನ್ನತಿಯು ಸಿಗುವುದು ತಪ್ಪಲಿದೆ. ಆಪ್ತರ ಜೊತೆ ಈ ಕುರಿತು ಸಮಾಲೋಚನೆ ಮಾಡುವಿರಿ. ಸಕಾರಾತ್ಮಕವಾದ ಚಿಂತನೆ ಇರಲಿ. ಮನೆಯಿಂದ ದೂರ ಬರುವ ನಿಮಗೆ ಸ್ವತಂತ್ರ ಸಿಕ್ಕಂತೆ ಆಗುವುದು. ಹಿರಿಯರಿಗೆ ನೋವುಂಟು ಮಾಡದಂತೆ ಮಾತನಾಡಿ. ಮನಸ್ಸು ಭಾರವಾಗಬಹುದು. ವಾಯುವಿಹಾರ ಮಾಡಿ ಬನ್ನಿ. ನಿಮ್ಮ ಮಾತುಗಳಿಂದ ನೋವಾಗಲಿದೆ. ಹೇಳಬೇಕಾದುದನ್ನು ನೇರವಾಗಿ ಹೇಳಿ. ನಿಮ್ಮಿಂದ ಆಗುವ ಕಾರ್ಯವನ್ನು ಮಾಡಿಕೊಡಿ.
ಸಿಂಹ ರಾಶಿ: ಮನೆಗೆ ಬಂದವರು ನಿಮ್ಮ ಸಮಯವನ್ನು ಕಸಿದುಕೊಳ್ಳುವರು. ಇಂದು ನಿಮ್ಮ ಗೃಹ ನಿರ್ಮಾಣದ ಕಡೆಗೆ ಗಮನವಾಗಬೇಕಾಗುವುದು. ಇಂದು ಸ್ನೇಹಿತರ ಜೊತೆ ಹೋಗಬೇಕಿದ್ದ ನಿಮ್ಮ ಪ್ರಯಾಣವು ತುರ್ತು ಕಾರ್ಯದಿಂದ ರದ್ದಾಗಬಹುದು. ಬಹಳ ಆಯಾಸವಾದರೂ ಒತ್ತಡಗಳಿದ್ದರೂ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಅಪರಿಚಿತ ದೂರವಾಣಿಯ ಕರೆಯಿಂದ ಲಾಭದಾಯಕವಾದ ಕೆಲಸವು ಸಿಗಬಹುದು. ಸರ್ಕಾರಿ ಕೆಲಸಗಳು ನಿಧಾನವಾಗಲಿದೆ. ಉತ್ಕಟವಾದ ಆಸೆಯು ಪೂರ್ಣ ಫಲಿಸದು. ಇನ್ನೊಬ್ಬರ ವಸ್ತುವನ್ನು ನಿಮ್ಮದನ್ನಾಗಿಸಿಕೊಳ್ಳುವಿರಿ. ಬೇಸರ ಪಡುವ ಅವಶ್ಯಕತೆ ಇಲ್ಲ. ನಿಧಾನವಾಗಿಯಾದರೂ ಚಲಿಸುತ್ತದೆ ಎಂಬ ಸಂತೋಷವಿರಲಿ. ನಿಮಗೆ ಆಗದವರು ತೊಂದರೆ ಕೊಡುತ್ತಿದ್ದಾರೆ ಎಂಬ ಅನುಮಾನವು ಬರಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ವಿದೇಶದವರ ಜೊತೆ ನಿಮ್ಮ ವ್ಯವಹಾರವು ನಡೆಯುವುದು. ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳುವಿರಿ.
ಕನ್ಯಾ ರಾಶಿ: ಉಳಿತಾಯಕ್ಕೆ ಹೊರಟರೂ ಮತ್ತೆಲ್ಲೋ ಸೋರುವಿಕೆ ಕಾಣಿಸುವುದು. ಇಂದು ಮಕ್ಕಳ ವಿಚಾರಕ್ಕೆ ಹಣವು ವ್ಯಯವಾಗಬಹುದು. ಅಕಾರಣವಾದ ವಿವಾದಗಳಿಂದ ಸಮಯವು ಹಾಳಾಗಬಹುದು. ಹಣ ಸಂಪಾದನೆಗೆ ದೂರಪ್ರಯಾಣ ಮಾಡಬೇಕಾದೀತು. ಮಾಡಲು ತುಂಬ ಕೆಲಸಗಳಿದ್ದು ಯಾವುದನ್ನು ಮಾಡುವುದು ಎಂಬ ಗೊಂದಲ ಸೃಷ್ಟಿಯಾಗಬಹುದು. ಹಿರಿಯರು ನಿಮ್ಮನ್ನು ಪ್ರಶಂಸಿಸುವರು. ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ಬರಬೇಕಾದ ಹಣಕ್ಕಾಗಿ ಕಾಯುವಿರಿ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳಬೇಕಾದೀತು. ಇಂದು ಬರುವ ಅತಿಥಿಗಳನ್ನು ಸತ್ಕರಿಸಿ. ತುಂಬ ಸಮಸ್ಯೆಗಳು ಬಂದಂತೆ ಕಾಣಬಹುದು. ಹೊಸ ಉದ್ಯೋಗವನ್ನು ಮಾಡುವ ಸಾಮರ್ಥ್ಯ ಇದ್ದರೂ ಅಳುಕು ನಿಮ್ಮನ್ನು ಹಿಂದೆ ಸರಿಯುವಂತೆ ಮಾಡುವುದು. ಸಂಗಾತಿಯಾಗುವವರ ಜೊತೆ ಭವಿಷ್ಯದ ಮಾತುಕತೆ ಇರಲಿದೆ. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಮಾನಸಿಕ ತೊಳಲಾಟವನ್ನು ಪ್ರಯತ್ನಪೂರ್ವಕವಾಗಿ ಕಡಿಮೆ ಮಾಡಿಕೊಳ್ಳಿ. ನಿಮ್ಮ ಬಗ್ಗೆ ಬರುವ ಆರೋಪವನ್ನು ಸುಳ್ಳು ಮಾಡಿ ತೋರಿಸುವ ಕಾರ್ಯಕ್ಕೆ ಮುಂದಾಗುವಿರಿ.
ತುಲಾ ರಾಶಿ: ತಂದೆಗಾಗಿ ಏನನ್ನಾದರೂ ಮಾಡುವ ಇಚ್ಛೆ ಬರಲಿದೆ. ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ವಾಸಸ್ಥಳದ ಬದಲಾವಣೆಯಿಂದ ನೆಮ್ಮದಿ ಇರುವುದು. ಪ್ರಭಾವಿ ಜನರ ಭೇಟಿಯಿಂದ ಹೊಸ ದಿಕ್ಕು ಲಭಿಸುವುದು. ಆಸ್ತಿ ಖರೀದಿಯ ಬಗ್ಗೆ ಹೆಚ್ಚಿನ ಒಲವಿರಲಿದೆ. ಭೂಮಿಯನ್ನು ಪಡೆಯುವ ತವಕದಲ್ಲಿ ವ್ಯವಹಾರವನ್ನು ಸರಿಯಾಗಿ ನೋಡಿಕೊಳ್ಳಿ. ಮನೆ ಅಥವಾ ಭೂಮಿಯನ್ನು ಖರೀದಿ ಮಾಡುವಿರಿ. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡುವಿರಿ. ಧಾರ್ಮಿಕಕ್ಷೇತ್ರಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಕ್ಕೆ ನಿಮ್ಮನ್ನು ಗೌರವಿಸಲಿದ್ದಾರೆ. ಪ್ರೇಮದಲ್ಲಿ ಬಿರುಕು ಬಂದು ಪರಸ್ಪರ ಆರೋಪಗಳು ಆಗಬಹುದು. ವಿದೇಶ ಪ್ರವಾಸದ ಕನಸು ಕಾಣುತ್ತಿರುವವರು ನನಸು ಮಾಡಿಕೊಳ್ಳಬಹುದಾಗಿದೆ. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ನಿಮ್ಮ ಇಂದಿನ ಕಾರ್ಯವು ಬದಲಾಗಬಹುದು. ನಿಮ್ಮ ಇಂದಿನ ಗುರಿ ಬದಲಾಗಬಹುದು.
ವೃಶ್ಚಿಕ ರಾಶಿ: ಅಪವಾದಗಳಿಗೆ ಸೋಲುವುದು ಸಹಜ. ಆದರೆ ಗುಂಡಿಗೆ ಗಟ್ಟಿ ಇದ್ದರೆ ಅದನ್ನು ಚೂರು ಮಾಡಬಹುದು. ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಅನೇಕ ಅನುಮಾನಗಳಿಗೆ ಕಾರಣವಾಗಬಹುದು. ಸ್ತ್ರೀಯರು ಮಂಗಳ ಕಾರ್ಯಗಳಲ್ಲಿ ತೊಡಗುವರು. ಮನೆ ಬಳಕೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಹಣದ ವಿಚಾರದಲ್ಲಿ ನಿಮಗಿಂದು ನಿರಾಸಕ್ತಿ ಬರಬಹುದು. ಕಛೇರಿಯ ಜವಾಬ್ದಾರಿಯಲ್ಲಿ ಮಧ್ಯಪ್ರವೇಶದಿಂದ ಇತರರಿಗೆ ಅಸಹನೆ. ಆಲೋಚನೆಗೆ ತಕ್ಕಂತೆ ಯಾವುದೂ ನಡೆಯದು ಎಂಬ ಬೇಸರವು ಹೆಚ್ಚಾಗಿ ಕಾಡಬಹುದು. ಹಳೆಯ ಮಿತ್ರರ ಭೇಟಿಯಾಗಲಿದೆ. ವೈಮನಸ್ಯ ಎದುರಾದಾಗ ಹೊಂದಾಣಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ. ನಿಮ್ಮ ಆದಾಯಕ್ಕೆ ಯಾರಾದರೂ ಅಡ್ಡಗಾಲು ಹಾಕುವವರಿರುವರು. ಬಂಧುಗಳ ವರ್ತನೆಯು ನಿಮಗೆ ಬೇಸರ ತರಿಸೀತು. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನ ಮಾಡುವುದು ಬೇಡ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ.
ಧನು ರಾಶಿ: ಇರುವ ವಾಹನವನ್ನು ಕೊಟ್ಟು ಹೊಸದನ್ನು ಪಡೆಯುವ ಯತ್ನ ಮಾಡುವಿರಿ. ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಪರರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ಆಗಿಹೋದ ವಿಷಯವನ್ನು ಮತ್ತೆ ನೆನಪಿಸಿಕೊಂಡು ದಾಂಪತ್ಯದಲ್ಲಿ ಜಗಳವಾಗಬಹುದು. ಶತ್ರುಗಳಿಂದ ಮನೆಯಲ್ಲಿ ಕಿರಿಕಿರಿಯಾಗಲಿದೆ. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ಆರ್ಥಿಕಸ್ಥಿತಿಯನ್ನು ಊರ್ಜಿತಗೊಳಿಸಲು ಬಹಳ ಶ್ರಮ ಪಡುವಿರಿ. ಪ್ರೇಮವನ್ನು ಒಪ್ಪಿಕೊಳ್ಳಲಾರಿರಿ. ಪಶ್ಚಾತ್ತಾಪದಿಂದ ಆಗಬೇಕಾದುದು ಏನಿಲ್ಲ ಎಂದು ಭಾವಿಸುವುದು ಬೇಡ. ತಂದೆ ಹಾಗು ತಾಯಿಯರ ಆಶೀರ್ವಾದವನ್ನು ಪಡೆದು ನಿಮ್ಮ ಕೆಲಸಕ್ಕೆ ತೆರಳಿ. ಪಾಲುದಾರಿಕೆಯ ವಿಚಾರದಲ್ಲಿ ನೀವು ಆತುರಪಡಬಾರದು. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ. ನೂತನ ವಾಹನದಲ್ಲಿ ಸಂಚರಿಸುವಿರಿ. ಅತಿಯಾಗಿ ಮಾತಾನಾಡಿ ಗುಟ್ಟನ್ನು ರಟ್ಟು ಮಾಡುವಿರಿ. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು.
ಮಕರ ರಾಶಿ: ಅನಾರೋಗ್ಯದಿಂದ ಪೀಡೆಗೊಳಗಾಗಿದ್ದರೆ ಸಹಾಯ ಮಾಡುವಿರಿ. ನೀವು ಅಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ವೃತ್ತಿಕ್ಷೇತ್ರದಲ್ಲಿ ಸಹೋದ್ಯೋಗಿಯಿಂದ ತೊಂದರೆ ಬರಬಹುದು. ಮಾತನಾಡಲು ಬಹಳ ಮುಜುಗರವಾದೀತು. ನಿಮಗೆ ಬೇಕಾದುದನ್ನೇ ಮಾಡಿಸಿಕೊಳ್ಳುವ ಹಠದ ಸ್ವಭಾವ ಹೆಚ್ಚಿರುವುದು. ಹೆಚ್ಚಿನ ಜವಾಬ್ದಾರಿಗಳು ಸಿಗಬಹುಸು. ನಿಂತ ಕೆಲಸಕ್ಕೆ ಚಾಲನೆ ಸಿಗಲಿದೆ. ಓಡಾಟದಿಂದ ದೇಹಕ್ಕೆ ಆಯಾಸವಾಗಬಹುದು. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ಜವಾಬ್ದಾರಿಯು ಹಿಡಿತ ತಪ್ಪಬಹುದು ಎಂಬ ಭಯವೂ ಇರಲಿದೆ. ಮಾತಿನಿಂದ ಕಲಹವಾಗಬಹುದು. ತಂದೆಗೆ ಸಮಾನರಾದವರ ಜೊತೆ ಕಲಹವನ್ನು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಅನುಕಂಪ ಬೇಕಾದೀತು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ.
ಕುಂಭ ರಾಶಿ: ಇಂದಿನ ಕುತೂಹಲವನ್ನು ತಣಿಸಿಕೊಳ್ಳಲಾಗದು. ಇಂದು ಉದ್ಯಮದ ಅಭಿವೃದ್ಧಿಗೆ ಬೇಕಾದ ಸಭೆಯನ್ನು ಕರೆಯುವಿರಿ. ಹಿತಶತ್ರುಗಳು ನಿಮಗೆ ಹಿನ್ನಡೆ ತಂದಾರು. ಸಂತೋಷದಿಂದ ಇಂದು ಇರುವಿರಿ. ನಿಮ್ಮ ಕಾರ್ಯಕ್ಕೆ ಉತ್ತಮವಾದ ಯಶಸ್ಸು ಸಿಗಲಿದೆ. ನಿಮ್ಮನ್ನು ಪರಿಚಿತರು ಮಾತನಾಡಿಸದೇ ಇರಬಹುದು. ಕೃಷಿಕರು ಇಂದು ತಮ್ಮ ಕಾರ್ಯದಲ್ಲಿ ಮಂದಗತಿಯನ್ನು ಕಾಣಬಹುದಾಗಿದೆ. ಮುಕ್ತವಾದ ಮಾತುಗಳು ನಿಮ್ಮನ್ನು ಹಗುರಾಗಿಸುವುದು. ಭೂಮಿಯ ಮೇಲೆ ಹೂಡಿಕೆ ಮಾಡಲು ಸಲಹೆಗಳು ಬರಬಹುದು. ವೃತ್ತಿಪರರು ಬಹಳ ಉತ್ಸಾಹದಿಂದ ಕಛೇರಿಯಲ್ಲಿ ಕೆಲಸವನ್ನು ಮಾಡುವರು. ಮನಸ್ಸಿನಲ್ಲಿ ಕೆಟ್ಟದ್ದಿದ್ದರೆ ಜೀವನವೂ ಹಾಳಾಗುತ್ತದೆ ಎಂಬ ಸತ್ಯವು ನೆನಪಿನಲ್ಲಿ ಇರಲಿ. ಸಂಪತ್ತಿನ ವಿಚಾರದಲ್ಲಿ ಜಾಗಕರೂಕರಾಗಿರಿ. ನಿಮ್ಮನ್ನು ನಂಬಿಸಿ ಕೆಲಸ ಮಾಡಿಸಿಕೊಳ್ಳುವರು. ಪರಿಚಿತರ ಮೂಲಕ ನಿಮಗೆ ಅಪರಿಚಿತರ ಸಹಾಯ ದೊರೆಯುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು.
ಮೀನ ರಾಶಿ: ಸಹೋದ್ಯೋಗಿಗಳಿಗೆ ನಿಮ್ಮಿಂದ ಅನುಕೂಲ. ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ವಿಶೇಷ ದ್ರವ್ಯ ಲಾಭದಿಂದ ಸಂತೋಷಪಡುವಿರಿ. ವ್ಯಾಪಾರದಿಂದ ಅಧಿಕ ಹಣವು ಉಳಿತಾಯವಾಗಲು ಚಿಂತನೆ ನಡೆಸುವಿರಿ. ಕೆಲಸವನ್ನು ಮಾಡಿಸಿಕೊಳ್ಳಲು ಜಾಣ್ಮೆಯಿಂದ ಮಾತನಾಡುವಿರಿ. ವಾಹನ ಚಾಲನೆ ಐಚ್ಛಿಕವಾಗಿರಲಿ. ವಿದ್ಯಾರ್ಥಿಗಳು ಮುಂದಿನ ಓದಿಗೆ ಬೇಕಾದ ತಯಾರಿ ನಡೆಸುವರು. ಉದ್ಯೋಗದಲ್ಲಿ ಜವಾಬ್ದಾರಿ ಸ್ಥಾನವವನ್ನು ಪಡೆಯುವಿರಿ. ಯಾವುದನ್ನೇ ಆದರೂ ನಿಷ್ಠೆಯಿಂದ ಕಾರ್ಯ ಮಾಡುವಿರಿ. ಬಂಧುಗಳ ಬೆಂಬಲ ನಿಮ್ಮ ಕಾರ್ಯಕ್ಕೆ ಸದಾ ಇರಲಿದೆ. ಇಂದು ನಿಧಾನವಾಗಿ ಕೆಲಸಕಾರ್ಯಗಳು ನಡೆಯಲಿವೆ. ಪುಣ್ಯಕ್ಣೇತ್ರಗಳ ಭೇಟಿಯನ್ನು ಮಾಡುವಿರಿ. ಸಂಗಾತಿಯನ್ನು ಸಂಬಾಳಿಸಿಕೊಂಡು ಹೋಗಬೇಕಾಗುವುದು. ಸಾಲಬಾಧೆಯಿಂದ ನೀವು ಮುಕ್ತಾರಾಗಲಿದ್ದೀರಿ. ಮನೆಯ ಹಿರಿಯರ ಬಗ್ಗೆ ಪ್ರೀತಿ ಹೆಚ್ಚಾಗಬಹುದು. ಸಂಗಾತಿಯ ಜೊತೆ ಭಿನ್ನಮತವು ಬರಬಹುದು.