ಹುಲಿಗಳ ಸಾವಿನ ಪ್ರಕರಣ ಗಂಭೀರವಾಗಿ ಪರಿಗಣಿಸಲು ಬಿಜೆಪಿ ಮುಖಂಡೆ ಮಂಜುಳಾ ಸ್ವಾಮಿ ಆಗ್ರಹ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜೂ. 27 ಮಲೆ ಮಾದೇಶ್ವರ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳ ಮಾರಣ ಹೋಮ ನಡೆದಿದೆ ಇದಕ್ಕೆ ಯಾರು? ಹೊಣೆ, ಸರ್ಕಾರ ಶೀಘ್ರವೇ ಉತ್ತರ ಕೊಡಬೇಕಿದೆ ಎಂದು ಬಿಜೆಪಿ ಮುಖಂಡರಾದ ಮಂಜುಳಾ ಸ್ವಾಮಿಯವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಹೇಳೀಕೆಯನ್ನು ನೀಡಿರುವ ಭಾರತ ದೇಶದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ ಇದರ ನಡುವೆ ಐದು ಹುಲಿಗಳು
ಪ್ರಾಣ ಬಿಟ್ಟಿವೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ವೈಫಲ್ಯಾವೆ ಹೊರತು ಬೇರೆ ಏನು ? ಅಲ್ಲ, ಮಲೆ ಮಾದೇಶ್ವರ ಅರಣ್ಯ ಪ್ರದೇಶದ
ಅಧಿಕಾರಿಗಳ ನಿರ್ಲಕ್ಷತನದಿಂದ ಕಾಡು ಕಳ್ಳರು ಹುಲಿಗಳನ್ನ ಕೊಲೆ ಮಾಡಿದ್ದಾರೆ. ಮಲೆ ಮಾದೇಶ್ವರ ಅರಣಪ್ರದೇಶದಲ್ಲಿನ ಅರಣ್ಯ
ಅಧಿಕಾರಿಗಳು ಕೆಲಸ ಮಾಡದೆ ಅಲ್ಲಿನ ಮರಗಳನ್ನು ಸಹ ಮಾರಿಕೊಳ್ಳುತ್ತಿದ್ದಾರೆ. ಇದರ ನಡುವೆ 5 ಹುಲಿಗಳನ್ನು ಕೊಲ್ಲುವುದಕ್ಕೆ
ಇವರು ನೇರ ಕಾರಣರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಇದರ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ
ತಪ್ಪಿತಸ್ಥ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು ಹಾಗೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಳಿದು
ಹೋಗುತ್ತಿರುವ ಹುಲಿಗಳ ಸಂರಕ್ಷಣೆಯನ್ನು ಮಾಡಬೇಕಾಗಿದೆ ಎಂದು ಬಿಜೆಪಿ ಮುಖಂಡ ಮಂಜುಳಾ ಸ್ವಾಮಿಯವರು
ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *