July 8 : ಇತ್ತೀಚೆಗೆ ರಾಜ್ಯದಲ್ಲಿ ಯೌವನದಲ್ಲಿಯೇ ಹೃದಯಾಘಾತದಿಂದ ಅಕಾಲಿಕ ಸಾವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತೀವ್ರ ಗಂಭೀರತೆ ಪ್ರದರ್ಶಿಸಿ 8 ಮಹತ್ವದ ಆರೋಗ್ಯ ಸಂಬಂಧಿತ ನಿರ್ಧಾರಗಳನ್ನು ಪ್ರಕಟಿಸಿದೆ. ಆರೋಗ್ಯ ಸಚಿವ ಡಾ. ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಈ ನಿರ್ಧಾರಗಳನ್ನು ಪ್ರಕಟಿಸಲಾಗಿದೆ.
💡 ಪ್ರಮುಖ ನಿರ್ಧಾರಗಳು:
1️⃣ ಹೃದಯಾಘಾತ ‘ನೋಟಿಫೈಯಬಲ್ ಡಿಸೀಸ್’:
ಇನ್ನುಮುಂದೆ ಎಲ್ಲ ಹೃದಯಾಘಾತ ಪ್ರಕರಣಗಳನ್ನು ಆರೋಗ್ಯ ಇಲಾಖೆ ಬಳಿ ನೋಟಿಫೈ ಮಾಡಬೇಕಾಗುತ್ತದೆ. ಆಸ್ಪತ್ರೆಯ ಹೊರಗಡೆ ಮೃತಪಟ್ಟರೆ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕು.
2️⃣ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ:
ರಾಜ್ಯದ ಎಲ್ಲಾ ಶಾಲೆಗಳ 15 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೊಮ್ಮೆ ಹೃದಯ ತಪಾಸಣೆಯು ಕಡ್ಡಾಯ. ಹೃದಯ ಸಂಬಂಧಿತ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಲು ಈ ಕ್ರಮ ಕೈಗೊಂಡಿದ್ದಾರೆ.
3️⃣ ಪಠ್ಯಕ್ರಮದಲ್ಲಿ ಹೃದಯ ಆರೋಗ್ಯ:
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೃದಯಾಘಾತ ತಡೆಗೆ ಸಂಬಂಧಿಸಿದ ಪಾಠಗಳು ಪಠ್ಯಕ್ರಮದಲ್ಲಿ ಸೇರಿಸಲಾಗುವುದು.
4️⃣ “ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ” ವಿಸ್ತರಣೆ:
ಈ ಯೋಜನೆಯಡಿಯಲ್ಲಿ ಪ್ರತಿಯೊಂದು ತಾಲ್ಲೂಕು ಆಸ್ಪತ್ರೆಯಲ್ಲಿ ಈಸಿಜಿ ಯಂತ್ರಗಳು ಮತ್ತು ಕಾರ್ಡಿಯಾಲಜಿಸ್ಟ್ ಸೇವೆಗಳು ಲಭ್ಯವಾಗುತ್ತವೆ.
5️⃣ ಸಾರ್ವಜನಿಕ ಸ್ಥಳಗಳಲ್ಲಿ AED:
ಹೃದಯಾಘಾತದ ಸಂದರ್ಭದಲ್ಲಿ ತ್ವರಿತ ಚಿಕಿತ್ಸೆ ನೀಡಲು ಸಾರ್ವಜನಿಕ ಸ್ಥಳಗಳಲ್ಲಿ ಆಟೋಮೇಟೆಡ್ ಎಕ್ಸ್‌ಟರ್ನಲ್ ಡೆಫಿಬ್ರಿಲೇಟರ್ (AED) ಸ್ಥಾಪಿಸಲಾಗುತ್ತದೆ.
6️⃣ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ:
ರಾಜ್ಯದ ಎಲ್ಲಾ ಸರ್ಕಾರಿ, ಗುತ್ತಿಗೆ ಮತ್ತು ಖಾಸಗಿ ಉದ್ಯೋಗಿಗಳಿಗೆ ವಾರ್ಷಿಕ ಆರೋಗ್ಯ ತಪಾಸಣೆಯು ಕಡ್ಡಾಯ.
7️⃣ ನವೀಕರಿತ ಸ್ಕ್ರೀನಿಂಗ್ ಕಾರ್ಯಾಚರಣೆ:
ಆರೋಗ್ಯ ಇಲಾಖೆ ಈಗಾಗಲೇ ಮಾಸ್ಟರ್ ಹೆಲ್ತ್ ಚೆಕ್-ಅಪ್ ಕಾರ್ಯಕ್ರಮ ರೂಪಿಸುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚುರುಕು ಮಾಡಿದಂತೆ.
8️⃣ ಕೋವಿಡ್ ಲಸಿಕೆಯ ಅಪಪ್ರಚಾರಕ್ಕೆ ಮುಕ್ತಾಯ:
ಸಧ್ಯದ ಹೃದಯಾಘಾತಗಳ ಸಂಖ್ಯೆ ಏರಿಕೆಯಲ್ಲಿರುವುದಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸೋಂಕಿನ ನಂತರದ ಜೀವನಶೈಲಿ ಬದಲಾವಣೆ, ಧೂಮಪಾನ, ಒತ್ತಡ ಮತ್ತು ನಿಷ್ಕ್ರಿಯತೆಯು ಮುಖ್ಯ ಕಾರಣಗಳು.
ಹೃದಯಾಘಾತ ಕರ್ನಾಟಕ , ರಾಜ್ಯ ಸರ್ಕಾರ, ಆರೋಗ್ಯ ಯೋಜನೆ , ಶಾಲಾ ಮಕ್ಕಳ ತಪಾಸಣೆ ,ಪುಣೀತ್ ರಾಜ್‌ಕುಮಾರ್ ಹೃದಯ ಯೋಜನೆ , AED ಸ್ಥಾಪನೆ Heart Attack Karnataka Government,