📆 ಭೀಮನ ಅಮಾವಾಸ್ಯೆ | ಬುಧವಾರ | 24-07-2025.
📿 ದಿನದ ನಿತ್ಯ ಪಂಚಾಂಗ:
ಶಾಲಿವಾಹನ ಶಕೆ: 1948 – ವಿಶ್ವಾವಸು ಸಂವತ್ಸರ
ದಕ್ಷಿಣಾಯನ, ಋತು: ಗ್ರೀಷ್ಮ
ಸೌರ ಮಾಸ: ಕರ್ಕಾಟಕ
ಮಹಾನಕ್ಷತ್ರ: ಪುಷ್ಯಾ
ವಾರ: ಗುರು
ತಿಥಿ: ಅಮಾವಾಸ್ಯೆ
ನಿತ್ಯ ನಕ್ಷತ್ರ: ಪುನರ್ವಸು
ಯೋಗ: ವ್ಯಾಘಾತ
ಕರಣ: ಶಕುನಿ
ಸೂರ್ಯೋದಯ – 06:15 AM
ಸೂರ್ಯಾಸ್ತ – 07:03 PM
ರಾಹುಕಾಲ: 14:15 – 15:51
ಗುಳಿಕಕಾಲ: 09:27 – 11:03
ಯಮಗಂಡಕಾಲ: 06:15 – 07:51
📌 ಅಳಿಯನ ಅಮಾವಾಸ್ಯೆ ವಿಶೇಷ:
ಇಂದು ಭೀಮನ ಅಮಾವಾಸ್ಯೆ. ಧಾರೆ ಎರೆದ ಮಗಳ ಪತಿಯನ್ನು (ಅಳಿಯನನ್ನು) ಸತ್ಕರಿಸುವ ಸಂಪ್ರದಾಯ. ಭೀಮನಿಂದ ಆರಂಭವಾಗಿದೆ ಎಂಬ ನಂಬಿಕೆ ಇದೆ. ಅಮಾವಾಸ್ಯೆ ದಿನ – ಹೊಸ ಕಾರ್ಯ, ಸಾಹಸ ಪ್ರಯತ್ನ, ಓಡಾಟ ಅಥವಾ ದೀರ್ಘ ಪ್ರಯಾಣ ತಪ್ಪಿಸಿ, ದೇವಾಲಯಗಳಿಗೆ ಪ್ರಸಾದ ಸ್ವೀಕರಿಸುವುದು ಶ್ರೇಷ್ಠ.
🐏 ಮೇಷ ರಾಶಿ:
ಕಛೇರಿಯ ಕೆಲಸಕ್ಕೆ ಗೈರಾಗಿ ಸತ್ಯ ಹೇಳದೇ ಸಮಾರಂಭಗಳಿಗೆ ಹೋಗುವಿರಿ. ನಿಮ್ಮ ಹಲವು ದಿನಗಳ ಮನಸ್ಸಿನ ಗೊಂದಲವು ಪರಿಹಾರವಾಗುವುದು. ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ಆರ್ಥಿಕತೆಗೆ ಸಂಬಂಧಿಸಿದಂತೆ ಮನಸ್ತಾಪಗಳು ಬರಬಹುದು. ಕಾರ್ಯಗಳಲ್ಲಿ ಹಿನ್ನಡೆಯಾಗಲಿದೆ. ಮಾಡಬೇಕು ಎಂದುಕೊಂಡ ಕೆಲಸಗಳು ಆರಂಭವಾಗದೇ ಇರಬಹುದು. ಕಲಹಕ್ಕಿಂತ ಮೌನವೇ ಲೇಸು ಎನಿಸಬಹುದು. ನಿಮ್ಮನ್ನು ಕೊಂಡಾಡುವವರಿಂದ ದೂರವಿರುವುದು ಉತ್ತಮ. ಮನಸ್ಸಿನಲ್ಲಿ ಏಕಾಗ್ರತೆಯ ಕೊರತೆ ಕಾಣಲಿದೆ. ಉದ್ಯಮದಲ್ಲಿ ಸವಾಲುಗಳು ಬರಬಹುದು. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಿರಬಹುದು. ಯಾವ ಹಳ್ಳ ಎಷ್ಟು ಆಳವೆಂದು ಬಿದ್ದಮೇಲೆ ಗೊತ್ತಾಗುವುದು. ನಿಮ್ಮದಾದ ವಸ್ತುಗಳನ್ನು ನೀವು ಉಳಿಸಿಕೊಳ್ಳಲು ಪ್ರಯತ್ನಿಸಿ.
🐂 ವೃಷಭ ರಾಶಿ:
ಪ್ರಾಯೋಜಕತ್ವಕ್ಕೆ ನಿಮ್ಮನ್ನು ಜನರು ನಿರೀಕ್ಷಿಸಬಹುದು. ಇಂದು ಮಹಿಳೆಯರ ಸಂಘವು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವುದು. ನಿಮ್ಮ ಶ್ರಮಕ್ಕೆ ದೈವವು ಅನುಕೂಲವನ್ನು ಮಾಡಲಿದೆ. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ಮಾನಸಿಕವಾಗಿ ಆಗುವ ನೋವನ್ನು ಶಮನ ಮಾಡಿಕೊಳ್ಳಲು ದೂರಪ್ರಯಾಣ ಮಾಡಬಹುದು. ಸಹೋದ್ಯೋಗಿಗಳ ಜೊತೆ ವೈಮನಸ್ಯ ಉಂಟಾಗಬಹುದು. ಸುಮ್ಮನೇ ವಾಗ್ವಾದಗಳು ಬೇಡ. ಹೊಂದಣಿಕೆಯಿಂದ ಇತ್ಯರ್ಥ ಮಾಡಿಕೊಳ್ಳಿ. ನಿಮ್ಮ ಮೂಲ ಉದ್ದೇಶವು ಮರೆಯಾಗಬಹುದು. ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು. ಮನೆಯಲ್ಲಿ ಸಮ್ಮತಿ ಇಲ್ಲದೇ ಇದ್ದರೂ ನಿಮ್ಮ ಹಠವೇ ಮೇಲಾಗುವುದು. ಬೋಧನೆಯನ್ನು ಜಾಲತಾಣದ ಮೂಲಕ ಮುಂದುವರಿಸುವಿರಿ. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳ್ಳಬಹುದು. ಉಪಾಯದಿಂದ ನಿಮ್ಮ ಕಾರ್ಯವನ್ನು ಮಾಡುವುದು ಉತ್ತಮ. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ.
👬 ಮಿಥುನ ರಾಶಿ:
ನತದೃಷ್ಟರ ಜೊತೆ ಹೊದರೆ ಇರುವ ಅದೃಷ್ಟವೂ ನೂರು ಪಾಲಾಗುವುದು. ಇಂದು ನಿಮಗೆ ಯಾರಿಂದಲಾದರೂ ಹೊಗಳಿಕೆ ಸಿಗಲಿದೆ. ಇಂದು ಅನಗತ್ಯವಾಗಿ ಸುತ್ತಾಟವಾಗುವುದೇ ವಿನಃ ಪ್ರಯೋಜನವಾಗದು. ಇದರಿಂದ ಸಿಟ್ಟೂ ಹತಾಶೆಯೂ ಇರಲಿದೆ. ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ಕೋಪವು ನಿಮ್ಮನ್ನು ದಾರಿ ತಪ್ಪಿಸಬಹುದು. ನಿಮ್ಮ ಉದ್ಯೋಗವು ಕೆಲವು ವರ್ಷಗಳಿಗಾದರೂ ಚಿಂತೆ ಇರದಂತೆ ಮಾಡಿಕೊಳ್ಳಲು ಯೋಚಿಸಿ. ನಿಮ್ಮ ಫಲಿತಾಂಶವು ನಿನಗೆ ಖುಷಿಕೊಡುವುದು. ಭಿನ್ನಾಭಿಪ್ರಾಯಗಳು ಸಹಜವಿದ್ದರೂ ಅದನ್ನು ಉಳಿಸಿಕೊಳ್ಳುವುದು ಬೇಡ. ನಿಮ್ಮ ಸಮಯವನ್ನು ಯಾರಾದರೂ ಬಳಸಿಕೊಳ್ಳಬಹುದು. ಜಾಣತನದಿಂದ ಜವಾಬ್ದಾರಿಯನ್ನು ಬಿಡುವಿರಿ. ಪಡೆದುಕೊಳ್ಳುವುದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಉದ್ಯಮದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು. ನಿಮ್ಮ ವಸ್ತುವು ಕಳೆದುಹೋಗಬಹುದು.
🦀 ಕರ್ಕಾಟಕ ರಾಶಿ:
ಮನೆಯ ಖರೀದಿಗೆ ಅನಿರೀಕ್ಷಿತವಾಗಿ ಬರಬಹುದು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುವಿರಿ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಸ್ನೇಹಿತರ ಸಹಾಯದಿಂದ ಹೊಸ ಉದ್ಯಮವನ್ನು ಆರಂಭಿಸುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ನಿಮ್ಮ ನಿಲುವೂ ಮುಖ್ಯವೇ ಆಗುವುದು. ಅರ್ಥಿಕತೆಯನ್ನು ನೀವು ವೃದ್ಧಿ ಮಾಡಿಕೊಳ್ಳುವ ಅವಶ್ಯಕತೆ ಇರುವುದು. ಪ್ರಯಾಣದ ವೇಳೆ ನಿಮ್ಮ ದೇಹದ ಸುರಕ್ಷಿತ ಮುಖ್ಯವಾಗಿದ್ದು, ಪೂರ್ವತಯಾರಿ ಇಲ್ಲದೇ ಹೋಗಬೇಡಿ. ಸಮೂಹವನ್ನು ಮುನ್ನಡೆಸುವ ನಾಯಕರಾಗುವಿರಿ. ನಿಮ್ಮ ಸುಕೃತವು ಕಾಪಾಡಲಿದೆ. ನಿಮ್ಮ ದೃಷ್ಟಿಯನ್ನು ಶುದ್ಧ ಮಾಡಿಕೊಳ್ಳುವುದು ಉತ್ತಮ. ಸಾಮಾಜಿಕ ಚಟುವಟಿಕೆಗಳು ನಿಮಗೆ ಯಶಸ್ಸನ್ನು ತಂದು ಕೊಡುವುದು. ದೀರ್ಘಕಾಲದ ಹೂಡಿಕೆಗೆ ನಿಮ್ಮ ಗಟ್ಟಿಯಾದ ನಿಲುವಿರಲಿ. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ಯಾರಿಂದಲೂ ಆಗದ್ದನ್ನು ನೀವು ಮಾಡುವುದು ಬೇಡ. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು.
🦁 ಸಿಂಹ ರಾಶಿ:
ಜನಜಾಗರಣದ ಕಾರ್ಯದಲ್ಲಿ ಅನ್ಯರ ಪ್ರೇರಣೆಯಿಂದ ತೊಡಗುವಿರಿ. ಯಾರನ್ನೂ ಅಳೆಯುವಲ್ಲಿ ಸೋಲುವಿರಿ. ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ಉದ್ಯೋಗದಲ್ಲಿ ನಿಮ್ಮ ಲಾಭದ ಅಂಶವನ್ನು ಹೆಚ್ಚು ಮಾಡಿಕೊಳ್ಳಲು ಯೋಜನೆಯನ್ನು ಹಾಕಿಕೊಳ್ಳುವಿರಿ. ಸಂಗಾತಿಯನ್ನು ನೀವು ಸಂತೋಷ ಪಡಿಸುವಿರಿ. ಹರಟೆಯಿಂದ ಇಂದಿನ ದಿನವು ಮುಕ್ತಾಯವಾಗುವುದು. ವೈಯಕ್ತಿಕ ಪ್ರಚಾರವನ್ನು ಮಾಡಿಕೊಳ್ಳುವ ಅವಶ್ಯಕತೆವಿಲ್ಲ. ಅದು ತಾನಾಗಿಯೇ ಬರುವಂತೆ ಇರಲಿ. ಒತ್ತಡವು ಕಡಿಮೆಯಾಗಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಜೀವನೋಪಾಯಕ್ಕೆ ಯಾವುದಾದರೂ ಇನ್ನೊಂದು ವೃತ್ತಿಯನ್ನು ಆಶ್ರಯಿಸುವಿರಿ. ಹಳೆಯ ಗೆಳತಿಯರ ಭೇಟಿಯ ಸಾಧ್ಯತೆ ಇದೆ. ಬಂದ ಹಣವನ್ನು ಸದ್ವಿನಿಯೋಗದ ಕಡೆ ಹರಿಯಲಿ. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ವರ್ತನೆಯು ಬೇರೆಯವರಿಗೆ ಸರಿಯಾಗದು. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ. ಬಂಧುಗಳ ಬಗ್ಗೆ ನಿಮಗೆ ಸದಭಿಪ್ರಾಯ ಇರದು. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ.
👧 ಕನ್ಯಾ ರಾಶಿ:
ನಿಮ್ಮ ಮೇಲಿನ ಕೋಪಕ್ಕೆ ನಿಮ್ಮನ್ನು ಸೋಲಿಸಲು ವಾದಕ್ಕೆ ಆಹ್ವಾನ ನೀಡುವರು. ನಿಮ್ಮ ಕಾರ್ಯದಲ್ಲಿ ಅಗತ್ಯದ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಬಹುದು. ಆಲಂಕಾರಿಕ ವಸ್ತುಗಳನ್ನು ಇಷ್ಟಪಟ್ಟು ಖರೀದಿಸುವಿರಿ. ನೀವು ಅಂದುಕೊಂಡದ್ದು ಮಾತ್ರ ಸತ್ಯ ಎನ್ನುವ ನಿರ್ಧಾರಕ್ಕೆ ಬರುವುದು ಬೇಡ. ಇನ್ನೊಂದು ಮುಖವನ್ನೂ ನೊಡುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವವರಿದ್ದೀರಿ. ಕಹಿ ವಾರ್ತೆಯಿಂದ ಕಷ್ಟವಾದೀತು. ಸ್ನೇಹಿತರ ಜೊತೆ ದೂರ ಪ್ರಯಾಣ ಹಿತವಾದ ಅನುಭವ ನೀಡುವುದು. ನೀವು ಶಿಕ್ಷಕರಾಗಿ ಇದ್ದರೆ ನಿಮಗೆ ನಿಮ್ಮ ವಿದ್ಯಾರ್ಥಿಗಳ ಸಹಾಯವು ಇಂದು ಸಿಗಲಿದೆ. ಸ್ನೇಹಿತರ ನಿಮ್ಮ ಜೊತೆ ಕಳೆಯಲು ಬಯಸಬಹುದು. ನೆರೆ – ಹೊರೆಯವರು ನಿಮ್ಮನ್ನು ಗಮನಿಸಬಹುದು. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ಕಾರ್ಯಭಾರವನ್ನು ವರ್ಗಾಯಿಸಲು ಪ್ರಯತ್ನಿಸುವಿರಿ. ನಿಮ್ಮ ನೇರ ಮಾತುಗಳು ಇಷ್ಟವಾಗದ ಕಾರಣ ನಿಮ್ಮಿಂದ ಯಾರಾದರೂ ದೂರವಿರಬಹುದು.
⚖ ತುಲಾ ರಾಶಿ:
ಘನ ವಸ್ತುಗಳ ಹಂಚಿಕೆ ಮಾಡುವವರಿಗೆ ನೌಕರರ ಕೊರತೆ ಕಾಣಿಸುವುದು. ಅತಿಥಿಗಳ ಆಗಮನದಿಂದ ನಿಮಗೆ ಕಷ್ಟವಾಗಬಹುದು. ಸಂಗಾತಿಯ ಪ್ರೀತಿಯನ್ನು ನೀವು ಒಪ್ಪಿಕೊಳ್ಳುವುದು ನಿಮಗೆ ಅನಿವಾರ್ಯವಾದೀತು. ನಿಮ್ಮ ಉಪಕಾರವನ್ನು ಸ್ಮರಿಸುವ ಜನರು ನಿಮಗೆ ಸಿಗುವರು. ಸೌಂದರ್ಯಕ್ಕೆ ಆಕರ್ಷಿತರಾಗುವಿರಿ. ಆರೋಗ್ಯದ ಖರ್ಚನ್ನು ನಿರ್ವಹಿಸಲು ವಿಮೆ ಮೊದಲಾದುದರ ಮೊರೆ ಹೊಗುವಿರಿ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಬೇಡ. ಕೆಲಸದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗದ ಸ್ಥಾನವನ್ನು ಬದಲಿಸುವ ನಿಮ್ಮನ್ನು ಬಿಟ್ಟುಕೊಡಲು ಕಛೇರಿಯು ಸಿದ್ಧವಿರುವುದಿಲ್ಲ. ನಿರ್ಧಾರವಾದ ವಿವಾಹವು ಮುಂದೆ ಹೋದೀತು. ನಿಮ್ಮ ಬಗ್ಗೆಯೇ ನಿಮಗೆ ತಪ್ಪಿತಸ್ಥಭಾವವು ಮೂಡಬಹುದು. ಒಮ್ಮೆ ವೃತ್ತಿಯ ಮೇಲೆ ಅಗೌರವ ಬರಬಹುದು. ಆಪ್ತರ ಬಗ್ಗೆ ಇರುವ ನಿಮ್ಮ ಭಾವವು ಪ್ರಕಟವಾಗಬಹುದು. ಕೆಲವು ಕೆಲಸದ ಭರಾಟೆಯಲ್ಲಿ ಇಂದು ಸಮಯವು ನಿಮ್ಮದಾಗಿರದು. ನಿಮ್ಮನ್ನು ಒಳ್ಳೆಯ ಕಾರ್ಯಕ್ಕೆ ಪ್ರೇರಣೆ ಕೊಡಬಹುದು.
🦂 ವೃಶ್ಚಿಕ ರಾಶಿ:
ನಿಮ್ಮ ಕಸುಬಿಗೆ ಬೇಕಾದ ಸಾಧನವನ್ನು ತಂದುಕೊಳ್ಳುವಿರಿ. ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ಸದವಕಾಶಗಳು ಸಿಗಲಿವೆ ಇಂದು ನಿಮಗೆ. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ನಿಮ್ಮ ಬಳಿ ಇರುವುದನ್ನು ಇನ್ನೊಬ್ಬರಿಗೆ ಕೊಡುವ ಮನಸ್ಸು ಇರದು. ಅಧಿಕವಾದ ಮಾತುಗಳು ನಿಮ್ಮ ಸ್ವಭಾವವನ್ನು ತಿಳಿಸುವುದು. ದೇಹಪೀಡೆಯಿಂದ ಕಷ್ಟವಾಗುವುದು. ಹೊಸ ತಂತ್ರಜ್ಞಾನವನ್ನು ಕಲಿಯುವ ಮನಸ್ಸಾದೀತು. ಹಿರಿಯರ ಮಾತಿಗೆ ಎದುರಾಡುವ ದುರಭ್ಯಾಸ ಆರಂಭವಾಗಲಿದೆ. ಮಾತಿನ ಬಂಡವಾಳವು ನಿಮ್ಮ ಮೇಲೆ ಪ್ರೀತಿ ಬರುವಂತೆ ಮಾಡುವುದು. ಈ ವಿಚಾರದಲ್ಲಿ ನಿಮ್ಮನ್ನು ಬದಲಿಸಿಕೊಳ್ಳಬೇಕಾದೀತು. ನಿಮ್ಮ ಉದ್ಯೋಗಕ್ಕೆ ಹೊಸ ದಿಕ್ಕು ಬರಬಹುದು. ಯಾವುದೇ ಚಿಂತೆಯಲ್ಲಿ ಹಣದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮನ್ನು ಅರ್ಥ ಮಾಡಿಕೊಳ್ಳುವವರ ಜೊತೆ ಮುಕ್ತವಾಗಿ ಮಾತನಾಡುವಿರಿ. ಸಂಗಾತಿಯಿಂದ ಬೈಗುಳಸಿಗಬಹುದು.
🏹 ಧನು ರಾಶಿ:
ಹಳೆಯ ಎಲ್ಲ ಸಣ್ಣ ಘಟನೆಗಳೂ ಸೇರಿ ಇಂದು ಸಂಗಾತಿಯಿಂದ ಸ್ಫೋಟವಾಗಲಿದೆ. ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲು ದೂರದಿಂದ ಹೋಗುವಿರಿ. ಮಕ್ಕಳ ಪ್ರೀತಿಯು ನಿಮಗೆ ಸಿಗಲಿದೆ. ಕುಟುಂಬದ ಜೊತೆ ಸಂತೋಷವನ್ನು ಹಂಚಿಕೊಳ್ಳಲು ಬಯಸುವಿರಿ. ನಿಮ್ಮ ಪ್ರೇಮವು ಬಹಳ ಅಚ್ಚುಕಟ್ಟಾಗಿ ಇರುವುದು. ವ್ಯವಹಾರದಲ್ಲಿ ತಿಳಿವಳಿಕೆ ಕಡಿಮೆಯಿರುವಂತೆ ತೋರುವುದು. ಯಾರಿಗೂ ತಿಳಿಸದೇ ಮನೆಯಿಂದ ಆಚೆ ಬಂದು ಆತಂಕ ಸೃಷ್ಟಿಯಾಗುವುದು. ಯಾರದೋ ಮಾತಿನ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ಪೂರ್ಣ ಸರಿಯಲ್ಲ. ನಿಮ್ಮ ಪರೀಕ್ಷೆಯೂ ಬೇಕಾದೀತು. ಶ್ರದ್ಧೆಯಿಂದ ಧಾರ್ಮಿಕ ಕಾರ್ಯದಲ್ಲಿ ತೊಡಗುವಿರಿ. ಕೃಷಿಯಲ್ಲಿ ಸಾಧಿಸುವ ಛಲವು ಬಂದೀತು. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ. ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ವಾತಾವರಣ ಕಂಡುಬರಲಿದೆ. ನಿಮ್ಮ ಖರೀದಿಯಲ್ಲಿ ಸಮಯವನ್ನು ಕಳೆಯುವಿರಿ.
🐐 ಮಕರ ರಾಶಿ:
ಪ್ರಯಾಣದ ಜವಾಬ್ದಾರಿ ನಿರ್ವಹಣೆ ಮಾಡುವವರಿಗೆ ಕಷ್ಟವಾಗಲಿದೆ. ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ಸಹೋದರರ ಜೊತೆ ಪ್ರೀತಿಯಿಂದ ಇರಲು ಬಯಸುವಿರಿ. ನಿಮ್ಮನ್ನು ಹಳಿದವರೇ ನಿಮ್ಮ ಸಹವಾಸ ಬಯಸಿ ಬರಬಹುದು. ಗುಣಮಟ್ಟದ ಜೀವನಕ್ಕೆ ಹೋಗಲು ಸತತವಾಗಿ ಮಾಡಿದ ಪ್ರಯತ್ನವು ಇಂದು ಫಲ ಕೊಡಬಹುದು. ಬೆಳೆಗಾರರಿಗೆ ನಷ್ಟದ ಚಿಂತೆ ಕಾಡಬಹುದು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವುದು ಬೇಡ. ಕಛೇರಿಯಲ್ಲಿ ಕೆಲಸದಲ್ಲಿ ಖುಷಿಯಿದ್ದು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮನ್ನು ಕಂಡು ಇತರರೂ ಖುಷಿಪಟ್ಟಾರು. ಮೇಲಧಿಕಾರಿಗಳ ಹೊಗಳಿಕೆಯು ನಿಮಗೆ ಸಿಕ್ಕೀತು. ಯಾವುದನ್ನೇ ಆದರೂ ಆಮೂಲಾಗ್ರ ಸರಿ ಮಾಡುವುದು ಉತ್ತಮ. ನಂಬಿದವರಿಂದ ಆಗದ ಕಾರ್ಯಕ್ಕೆ ಪರ್ಯಾಯ ಮಾರ್ಗವನ್ನು ಹುಡುಕುವಿರಿ. ಒತ್ತಾಯ ಪೂರ್ವಕವಾಗಿ ನಿಮ್ಮ ಸಾಲ ಮಾಡಿಸಬಹುದು. ಇದು ನಿಮ್ಮ ಎಲ್ಲ ನೋವನ್ನು ಮರೆಸಬಹುದು. ಮಾಡಬೇಕಾದುದನ್ನು ಮಾಡಿಯೇ ತೀರುವಿರಿ. ಕೌಟುಂಬಿಕ ವಿಚಾರಗಳಲ್ಲಿ ಒತ್ತಡಗಳು ದೂರವಾಗಿ ನೆಮ್ಮದಿ ಕಂಡುಬರಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಏರುಗತಿಯನ್ನು ಕಂಡು ಸಮಾಧಾನವಾಗಲಿದೆ.
🌊 ಕುಂಭ ರಾಶಿ:
ಸಂಗಾತಿಯಿಂದ ಖರೀದಿ ಹಾಗೂ ಧನವ್ಯಯದ ಬಗ್ಗೆ ಚಿಂತೆ. ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ಅದರ ಪರಿಣಾಮವನ್ನು ಎದುರಿಸಬೇಕಾದೀತು. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ನಿಮ್ಮ ಮನಸ್ಸಿಗೆ ವಿರುದ್ಧವಾದ ವಾತಾವರಣವಿದ್ದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಮುನ್ನಡೆಯುವಿರಿ. ಮಕ್ಕಳಿಗೆ ನೀವು ತೋರಿಸುವ ಪ್ರೀತಿಯು ಖುಷಿ ಕೊಡುವುದು. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲಿದ್ದೀರಿ. ಆಲಸ್ಯದಿಂದ ಮನೆಯಲ್ಲಿಯೇ ಇರುವಿರಿ. ಅಸಂಬದ್ಧ ಆಲೋಚನೆಗಳು ನಿಮ್ಮನ್ನು ವಿಚಲಿತ ಗೊಳಿಸೀತು. ಅಪಪ್ರಚಾರವು ನಿಮ್ಮ ಸದ್ಗುಣಕ್ಕೆ ಮಾರಕವಾದೀತು. ಖರ್ಚಿಗಾಗಿ ತಂದೆಯಿಂದ ಹಣವನ್ನು ಪಡೆಯುವಿರಿ. ವಿದ್ಯಾಭ್ಯಾಸಕ್ಕೆ ಒಳ್ಳೆಯ ಸ್ಥಾನ ಸಿಗುವುದು. ಇಂದು ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ನೀಡುವಿರಿ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ನೆಮ್ಮದಿ ತರಲಿದೆ.
🐟 ಮೀನ ರಾಶಿ:
ದ್ವೇಷಿಸುವವರು ನಿಮ್ಮನ್ನು ಇಂದು ಹೆಚ್ಚು ಗಮನಿಸುವರು. ಇಂದು ನಿಮ್ಮನ್ನು ಭೇಟಿ ಮಾಡುವವರನ್ನು ಅಗೌರವದಿಂದ ಕಾಣುವಿರಿ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ನಿಮಗೆ ಸೌಕರ್ಯಗಳು ಹೆಚ್ಚಾಯಿತು ಅನ್ನಿಸಬಹುದು. ಮುಕ್ತವಾಗಿ ಇರಲು ಕಷ್ಟವಾದೀತು. ಪವಿತ್ರ ಸ್ಥಳದಲ್ಲಿ ಕುಟುಂಬದ ಜೊತೆ ಸಮಯ ಕಳೆಯುವಿರಿ. ಇಷ್ಟಪಟ್ಟವರನ್ನು ಪಡೆಯುವ ತಂತ್ರವನ್ನು ಹೂಡಬಹುದು. ಆಪ್ತರಿಗೆಂದು ಉಡುಗೊರೆಯನ್ನು ಸಿದ್ಧಮಾಡಿಕೊಳ್ಳುವಿರಿ. ಅನಗತ್ಯ ಮಾತಿನಿಂದ ನಿಮಗೆ ಸುಸ್ತಾದೀತು. ಮಾತು ಸಾಕೆನಿಸಬಹುದು. ತಾಯಿಯ ಆರೈಕೆಯಲ್ಲಿ ಸಮಯವನ್ನು ಕಳೆಯುವಿರಿ. ಆಕಸ್ಮಿಕವಾಗಿ ದೇವಾಲಯಕ್ಕೆ ಹೋಗಬೇಕಾದೀತು. ಇದು ನಿಮ್ಮ ಶುಭವನ್ನು ಸೂಚಿಸುತ್ತದೆ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ. ಸಾಲದ ಬಗ್ಗೆ ಭಯವಿರುವುದು. ಶುಭ ಕಾರ್ಯದ ನಿರ್ಧಾರವು ಪ್ರಯತ್ನ ಬಲದಿಂದ ಫಲ ನೀಡಲಿದೆ. ಇಂದು ನಿಮ್ಮ ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ.