ಕೊಲೆ ಮಾಡಿರುವುದನ್ನು ಖಂಡಿಸಿದ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ಅಪರಾಧಿಗಳಿಗೆ ತಕ್ಷಣವೇ ಬಂಧಿಸಬೇಕು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹ.

ಚಿತ್ರದುರ್ಗ ಆ. 20

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಕೋವೆರಟ್ಟಿ ಗ್ರಾಮದ ತಿಪ್ಪೇಸ್ವಾಮಿ ಡಿ ಹಾಗೂ ಜ್ಯೋತಿ ಎಂಬ ದಂಪತಿಗಳ ಮಗಳಾದ
ವರ್ಷಿತಳನ್ನು ಬರ್ಬರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿದ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾಸಮಿತಿ ಅಪರಾಧಿಗಳಿಗೆ
ತಕ್ಷಣವೇ ಬಂಧಿಸಬೇಕು ಕೃತ್ಯ ಮಾಡಿದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ
ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಗ್ರಹಿಸಲಾಯಿತು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಕೊವೇರಟ್ಟಿ ಗ್ರಾಮದ ಮಾದಿಗ ಸಮಾಜದವರಾದ ತಿಪ್ಪೇಸ್ವಾಮಿ ಡಿ ಹಾಗೂ ಜ್ಯೋತಿ
ಇಬ್ಬರು ದಂಪತಿಗಳ ಮಗಳಾದ ವರ್ಷಿತ 19 ವರ್ಷ ವಯಸ್ಸಿನವಳಾದ ಚಿತ್ರದುರ್ಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ
ಈ ಯುವತಿಯನ್ನು ದಾರುಣವಾಗಿ ಮಾನವ ಕುಲವೇ #ಬೆಚ್ಚಿ ಬೀಳುವ ರೀತಿಯಲ್ಲಿ ಅತ್ಯಾಚಾರ ಹಾಗೂ ಕೊಲೆ ಮಾಡಿ ದೇಹವನ್ನು
ಸುಟ್ಟು ಭಾರತ ದೇಶವೇ ತಲೆತಗ್ಗಿಸುವಂತ್ತೆ ಮಾಡಿರುವ ಅಪರಾಧಿಗಳಿಗೆ ತಕ್ಷಣವೇ ಬಂಧಿಸಬೇಕು ಮಾಡಿರುವ ಕೃತ್ಯಕ್ಕೆ ಕಠಿಣ
ಕಾನೂನು ಕ್ರಮ ಜರುಗಿಸಿ ಅವರನ್ನ ಯಾವುದೇ ಕಾರಣಕ್ಕೂ ಅಪರಾಧಿಗಳಿಗೆ ದಿನಗಳನ್ನು ಕಳೆಯಬಾರದು ಬರ್ಬರವಾಗಿ
ಅತ್ಯಾಚಾರ ಹಾಗೂ ಕೊಲೆ ಮಾಡಿ ಹೋದಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕೊಡಬೇಕು ಮತ್ತು ಇಡೀ ದೇಶವೇ ಬೆಚ್ಚಿ ಬೀಳುವ
ರೀತಿಯಲ್ಲಿ ಈ ಕಿರಾತಕರುಗಳಿಗೆ ಸರ್ಕಾರ ಶಿಕ್ಷೆ ನೀಡಬೇಕು ಎಂದು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯು ತಮ್ಮಲ್ಲಿ
ಆಗ್ರಹಿಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕರ್ನಾಟಕ ಸರ್ಕಾರ ನೀಡಬೇಕೆಂದು ವಿನಂತಿಸಲಾಯಿತು.

ಅಂಬೇಡ್ಕರ್ ಸಂವಿಧಾನ ಸಂರಕ್ಷಣಾಸಮಿತಿ ಪದಾಧಿಕಾರಿಗಳು ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಿಂದ ಚಿತ್ರದುರ್ಗ ಜಿಲ್ಲಾ
ಕಚೇರಿಯವರೆಗೆ ಮೆರವಣಿಗೆ ಮುಖಾಂತರ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತ್ತು

ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ ರಾಮಚಂದ್ರ, ಬೆಂಗಳೂರು ವಿಭಾಗ ವಿಭಾಗೀಯ ಅಧ್ಯಕ್ಷರಾದ
ನರಸಿಂಹಸ್ವಾಮಿ, ದಲಿತ ಹಿರಿಯ ಮುಖಂಡರಾದ ಘಾಟ್ ರವಿ, ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಆರ್ ಶಿವರಾಜ್ ಕುಮಾರ್, ಜಿಲ್ಲಾ
ಉಪಾಧ್ಯಕ್ಷರಾದ ಕೆಂಚಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲ್ಲೇಶ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷರಾದ ನಿರಂಜನ್,
ಹಿರಿಯೂರು ತಾಲೂಕು ಗೌರವಾಧ್ಯಕ್ಷರಾದ ದೇವರಾಜ್, ತಾಲೂಕು ಕಾರ್ಯದರ್ಶಿ ತಿಪ್ಪೇಸ್ವಾಮಿ, ದಲಿತ ಮುಖಂಡರಾದ ಗಜ,
ಇನ್ನು ಮುಂದಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *