ಚಿತ್ರದುರ್ಗ ಆ. 22.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯ ಮಟ್ಟದ ಕುಳುವ ಜನಾಂಗದ ಸಮಾವೇಶ ಹಾಗೂ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ 918ನೇ
ಜಯಂತ್ರ್ಯೋತ್ಸವವೂ ಆ. 23ರ ಶನಿವಾರ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು
ಚಿತ್ರದುರ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ಹನುಮಂತಪ್ಪ ಗುಡೇರಿ,ಅಧ್ಯಕ್ಷರಾದ
ಕೆ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರುವ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕ ರಾಜಕೀಯವಾಗಿ ಅತ್ಯಂತ
ಹಿಂದುಳಿದ, ಅಸಂಘಟಿತ ಮತ್ತು ಶೋಷಣೆಗೊಳಗಾದ ಜನಾಂಗವೇ ಕುಳುವ. (ಕೊರಮ, ಕೊರವ, ಕೊರವಂಜಿ). ಸಾಮಾಜಿಕ
ನ್ಯಾಯ ಮತ್ತು ಉತ್ತಮ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿದ್ಯ ಮತ್ತು ಸರ್ಕಾರಿ ಸೌಲಭ್ಯ ರೀತಿಯಲ್ಲಿ ಸಿಗದೆ ಅನ್ಯಾಯಕ್ಕೆ
ಒಳಪಟ್ಟು ಅನೇಕ ಕುಂದು-ಕೊರತೆಗಳಿಂದ ಕೂಡಿದ ಈ ಜನಾಂಗವು ಹಿಂದಿನವರೆಗೆ ಬಡತನದ ಬಂಧನದಲ್ಲಿ ಸಿಲುಕಿದೆ. ಎಲ್ಲಾ
ರಾಜಕೀಯ ಪಕ್ಷಗಳು, ಈ ಜನಾಂಗಕ್ಕೆ ರಾಜಕೀಯ ಪ್ರಾತಿನಿದ್ಯ ನೀಡದೆ ದೊಡ್ಡಮಟ್ಟದಲ್ಲಿ ಅನ್ಯಾಯವೆಸಗಿವೆ. ಈ ಎಲ್ಲಾ
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಸಮಾಜದ ಬೇಡಿಕೆಗಳನ್ನು ಈ ಸರ್ಕಾರದ ಮುಂದೆ ಇಡಲು ಈ ವೇದಿಕೆ
ಸಾಕ್ಷಿಯಾಗಲಿದೆ ಎಂದಿದ್ದಾರೆ.
ಆ.23ರ ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಜನಾಂಗದ ಸಮಾವೇಶ ಹಾಗೂ ಜಯಂತ್ಯೋತ್ಸವದ ದಿವ್ಯ ಸಾನೀಧ್ಯವನ್ನು
ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಶ್ರೀಗಳು ಹಾಗೂ ಮಸ್ಕಿ ತಾಲ್ಲೂಕಿನ ಇರಕಲ್ ಮಠದ ಜಗದ್ಗುರು ಶ್ರೀ ಶಿವಶಕ್ತಿ
ಪೀಠದ ಶ್ರೀ ಬಸವಪ್ರಸಾದ ಶ್ರೀಗಳು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಹಿಂದುಳಿದ ವರ್ಗ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಯೋಜನಾ
ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ರ ನೇರವೇರಿಸಲಿದ್ದಾರೆ. ಸಂಸದರಾದ ಗೋವಿಂದ
ಕಾರಜೋಳ, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಎನ್.ವೈ ಗೋಪಾಲಕೃಷ್ಣ,
ಡಾ.ಎಂ.ಚಂದ್ರಪ್ಪ, ಮಾಜಿ ಸಂಸದರಾದ ಬಿಎನ್.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಶಕರಾದ
ಜಿ.ಎಚ್.ತಿಪ್ಪಾರೆಡ್ಡಿ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುವಿತಾ ರಘು, ನಗರಾಭೀವೃದ್ದಿ ಪ್ರಾಧಿಕಾರದ ಆಧ್ಯಕ್ಷರಾದ ತಾಜ್ ಪೀರ್,
ಆದಿ ಜಾಂಭವ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ದ್ರಾಕ್ಷರಸ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಯೋಗಿಶ್ ಬಾಬು
ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಕೊರಮ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಕೆ.ಕೃಷ್ಣಪ್ಪ
ವಹಿಸಲಿದ್ದಾರೆ.
ರಾಜ್ಯ ಮಟ್ಟದ ಕುಳುವ ಜನಾಂಗದ ಸಮಾವೇಶ ಹಾಗೂ ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ 918ನೇ
ಜಯಂತ್ರ್ಯೋತ್ಸವದ ಅಂಗವಾಗಿ ಆ. 23ರ ಬೆಳ್ಳಿಗೆ 8.30ಕ್ಕೆ ನಗರದ ನೀಲಕಂಠೇಶ್ವರ ದೇವಾಲಯದಿಂದ ಕುಲಗುರುಗಳಾದ
ಶರಣರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಬಿ.ಡಿ. ರಸ್ತೆ ಮುಖಾಂತರ ಡಾ.
ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ಗಾಯತ್ರಿ ಕಲ್ಯಾಣ ಮಂಟಪವನ್ನು ತಲುಪಲಿದೆ. ಇದರಲ್ಲಿ ವಿವಿಧ ಜಾನಪದ ಕಲಾತಂಡಗಳು,
ಭಾಗವಹಿಸಲಿದ್ದು ಇದನ್ನು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ಎಂ.ಭಜಂತ್ರಿ ಹಾಗೂ ಮಾಜಿ
ಶಾಸಕರಾದ ಜಿ.ಚಂದ್ರಣ್ಣ ಉದ್ಘಾಟಿಸಲಿದ್ದಾರೆ.