ಚಿತ್ರದುರ್ಗ ಅ. 28
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ಗೌರಸಂದ್ರ ಮಾರಮ್ಮ ದೇವಿ ಜಾತ್ರಾ ಮಹೋತ್ಸವವನ್ನು ದಿನಾಂಕ:05-09-2025 ರಿಂದ 11-09-2025 ರವರೆಗೆ ಪ್ರತಿ ವರ್ಷದ ಪದ್ದತಿಯಂತೆ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಗೌರಸಂದ್ರ ಮಾರಮ್ಮ ದೇವಸ್ಥಾನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಈ.ಚಂದ್ರಶೇಖರ್ ಕಾರ್ಯದರ್ಶಿ ಓ.ಬಿ.ಬಸವರಾಜಪ್ಪ, ಅರ್ಚಕರಾದ ಟಿ.ಚಂದ್ರಪ್ಪ ಹಾಗೂ ಕಾರ್ಯಕಾರಿ ಸದಸ್ಯರು ತಿಳಿಸಿದ್ದಾರೆ.
ದಿನಾಂಕ: 05-09-2025 ನೇ ಶುಕ್ರವಾರ ರಾತ್ರಿ 7.30 ಗಂಟೆಗೆ “ಮಂದಲಿಂಗಿತ್ತಿ” ಹಾಗೂ ಭಕ್ತಾಧಿಕಾರಿಗಳಿಗೆ ಅನ್ನಸಂತರ್ಪಣೆ ಏರ್ಪಾಡಿಸಲಾಗುವುದು. ದಿನಾಂಕ:08-09-2025 ನೇ ಸೋಮವಾರ ರಾತ್ರಿ 11.00 ಗಂಟೆಗೆ “ಹೊಳೆಪೂಜೆ” ದಿನಾಂಕ:09-09-2025ನೇ ಮಂಗಳವಾರ ಬೆಳಗ್ಗೆ 6.00 ರಿಂದ ರಾತ್ರಿ 9.00 ರವರೆಗೆ ” ಹಿಟ್ಟಿನ ಆರತಿ ಮತ್ತು ಬೇವಿನ ಸೀರೆ” ದಿನಾಂಕ:10-09-2025ನೇ ಬುಧವಾರ ರಾತ್ರಿ 8.00 ಗಂಟೆಗೆ “ಅಗ್ನಿಕುಂಡ” ದಿನಾಂಕ:11-09-2025 ನೇ ಗುರುವಾರ ಬೆಳಗ್ಗೆ 10.00 ಗಂಟೆಗೆ “ಓಕಳಿ ಮತ್ತು ಮುರುಘರಾಜೇಂದ್ರ ಮಠಕ್ಕೆ ಮತ್ತು ಭಕ್ತಾಧಿಗಳ ಮನೆಗಳಲ್ಲಿ ಪೂಜೆ ಸಲ್ಲಿಸಲಾಗುವುದು.
ಶ್ರೀ ಗೌರಸಂದ್ರ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ,ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗೌರಸಂದ್ರ ಮಾರಮ್ಮ ದೇವಸ್ಥಾನ ಕಾರ್ಯಕಾರಿ ಸಮಿತಿಯ ಕಾರ್ಯಕಾರಿ ಸದಸ್ಯರು ಕೋರಿದ್ದಾರೆ.
Views: 27