ಹಾಕಿ ಏಷ್ಯಾಕಪ್ 2025: ಸೂಪರ್ 4ರಲ್ಲಿ ಮಲೇಷ್ಯಾವನ್ನು ಮಣಿಸಿದ ಟೀಂ ಇಂಡಿಯಾ.

Hockey Asia Cup 2025: 2025ರ ಪುರುಷರ ಹಾಕಿ ಏಷ್ಯಾಕಪ್‌ನ ಸೂಪರ್ 4 ಹಂತದಲ್ಲಿ ಭಾರತ ತಂಡ ಮಲೇಷ್ಯಾವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಮಹತ್ವದ ಗೆಲುವು ಸಾಧಿಸಿದೆ. ಪೂಲ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದ ಭಾರತ, ಸೂಪರ್ 4ನಲ್ಲಿ ಕೊರಿಯಾ ವಿರುದ್ಧ ಡ್ರಾ ಆಡಿದ ನಂತರ ಈ ಗೆಲುವು ಪಡೆದುಕೊಂಡಿದೆ. ಮನ್ಪ್ರೀತ್ ಸಿಂಗ್, ಸುಖ್ಜೀತ್ ಸಿಂಗ್, ಶಿಲಾನಂದ್ ಲಾಕ್ರಾ ಮತ್ತು ವಿವೇಕ್ ಸಾಗರ್ ಪ್ರಸಾದ್ ಗೋಲುಗಳನ್ನು ಗಳಿಸಿದರು. ಈ ಗೆಲುವು ಭಾರತದ ಫೈನಲ್ ಪ್ರವೇಶದ ಆಸೆಗಳನ್ನು ಜೀವಂತವಾಗಿರಿಸಿದೆ.

2025 ರ ಪುರುಷರ ಹಾಕಿ ಏಷ್ಯಾಕಪ್​ನ (Hockey Asia Cup 2025) ಸೂಪರ್ 4 ಸುತ್ತಿನಲ್ಲಿ ಭಾರತ ತಂಡ ಮೊದಲ ಗೆಲುವು ದಾಖಲಿಸಿದೆ. ಗುಂಪು ಹಂತದಲ್ಲಿ ತಾನು ಆಡಿದ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡು ಸೂಪರ್ 4 ಸುತ್ತಿಗೆ ಎಂಟ್ರಿಕೊಟ್ಟಿದ್ದ ಭಾರತ ತಂಡ ಇದೀಗ, ಈ ಸುತ್ತಿನ ಎರಡನೇ ಪಂದ್ಯದಲ್ಲಿ ಏಕಪಕ್ಷೀಯ ಗೆಲುವು ದಾಖಲಿಸಿದೆ. ವಾಸ್ತವವಾಗಿ ಈ ಸುತ್ತಿನಲ್ಲಿ ತನ್ನ ಮೊದಲ ಪಂದ್ಯವನ್ನು ಕೊರಿಯಾ ವಿರುದ್ಧ ಆಡಿದ್ದ ಭಾರತ ತಂಡ ಈ ಪಂದ್ಯವನ್ನು 2-2 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ಆದರೀಗ ತನ್ನ ಎರಡನೇ ಪಂದ್ಯದಲ್ಲಿ ಮಲೇಷ್ಯಾವನ್ನು 4-1 ಗೋಲುಗಳಿಂದ ಸೋಲಿಸುವ ಮೂಲಕ ಫೈನಲ್‌ಗೆ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಆರಂಭದಲ್ಲಿ ಮಲೇಷ್ಯಾ ಮೇಲುಗೈ

ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ 2025 ರ ಏಷ್ಯಾಕಪ್‌ನ ಸೂಪರ್-4 ಸುತ್ತಿನ ಮೊದಲ ಪಂದ್ಯವನ್ನು 2-2 ರಿಂದ ಡ್ರಾದಲ್ಲಿ ಅಂತ್ಯಗೊಳಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಿತ್ತು. ವಾಸ್ತವವಾಗಿ ಪೂಲ್ ಹಂತದಲ್ಲಿ ಇದೇ ಮಲೇಷ್ಯಾ ತಂಡ, ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿತ್ತು. ಹೀಗಾಗಿ ಭಾರತ ಹಾಗೂ ಮಲೇಷ್ಯಾ ನಡುವಿನ ಪಂದ್ಯ ತೀವ್ರ ಕುತೂಹಲ ಮೂಡಿಸಿತ್ತು.

ಇದಕ್ಕೆ ಪೂರಲವಾಗಿ ಪಂದ್ಯ ಆರಂಭವಾದ ಕೇವಲ 50 ಸೆಕೆಂಡುಗಳಲ್ಲಿ ಮಲೇಷ್ಯಾ ಮೊದಲ ಗೋಲು ಗಳಿಸಿ ಕ್ರೀಡಾಂಗಣದಲ್ಲಿ ಹಾಜರಿದ್ದ ಎಲ್ಲರನ್ನೂ ಅಚ್ಚರಿಗೊಳಿಸಿತು. ಇತ್ತ ಟೀಂ ಇಂಡಿಯಾ ಕೂಡ ಸತತ ಪ್ರಯತ್ನ ಮಾಡಿ ಪಂದ್ಯದ 17 ನೇ ನಿಮಿಷದಲ್ಲಿ ಮೊದಲು ಗೋಲು ಗಳಿಸಿತು. ಮನ್ಪ್ರೀತ್ ಸಿಂಗ್ ಮೊದಲ ಗೋಲು ಗಳಿಸಿದರು.

ಪೂಲ್-ಎ ನಲ್ಲಿ ಅಜೇಯ

ಭಾರತ ತಂಡವು ಪೂಲ್-ಎ ನಲ್ಲಿ ತನ್ನ ಮೂರು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಮೊದಲು ಚೀನಾ ತಂಡವನ್ನು ಮಣಿಸಿದ್ದ ಭಾರತ, ಆ ಬಳಿಕ ಜಪಾನ್ ಮತ್ತು ಕಝಾಕಿಸ್ತಾನ್ ತಂಡಗಳನ್ನು ಸೋಲಿಸಿತ್ತು. ಇದಾದ ನಂತರ, ಸೂಪರ್-4 ಪೂಲ್‌ನಲ್ಲಿ, ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-2 ಡ್ರಾ ಸಾಧಿಸಿತು.

Views: 3

Leave a Reply

Your email address will not be published. Required fields are marked *