ಸ್ಪರ್ಧಾತ್ಮಕ ಪರೀಕ್ಷೆಗಳು ಯುವ ಪೀಳಿಗೆಗೆ ಅನಿವಾರ್ಯ: ಶಿಕ್ಷಕ ವಸಂತ್ ಕುಮಾರ್.

ಶ್ರೀ ಸ್ವಾಮಿ ವಿವೇಕಾನಂದ ಟುಟೋರಿಯಲ್ ಉದ್ಘಾಟನೆ 


ಚಿತ್ರದುರ್ಗ ಸೆ. 16

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ಸ್ಪರ್ಧಾತ್ಮಕ ದಿನಗಳಲ್ಲಿ ಯುವ ಪೀಳಿಗೆ ಸಾಕಷ್ಟು ಪರೀಕ್ಷೆಗಳನ್ನು ಎದುರಿಸಬೇಕಿದೆ ಆ ಒಂದು ನಿಟ್ಟಿನಲ್ಲಿ ಇಂದಿನಿಂದಲೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಅತ್ಯಂತ ಅವಶ್ಯಕ ಎಂದು ಸ್ವಾಮಿ ವಿವೇಕಾನಂದ ಟ್ಯುಟೋರಿಯಲ್ ಶಿಕ್ಷಕ ವಸಂತ್ ಕುಮಾರ್ ತಿಳಿಸಿದರು.


ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸರ್ಕಾರಿ ಕಿರಿಯ ಪ್ರಾಥಮಿಕ ಸರ್ಕಾರಿಯಲ್ಲಿ ಆಯೋಜಿಸಿದ ಸ್ವಾಮಿ ವಿವೇಕಾನಂದ ಟುಟೋರಿಯಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಹಾಗಾಗಿ ಸರ್ಕಾರ ವಿಶೇಷ ಸರ್ಕಾರಿ ಶಾಲೆಗಳನ್ನು ತೆರೆಯುವುದರ ಮೂಲಕ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಕಿತ್ತೂರಾಣಿ ಚೆನ್ನಮ್ಮ, ಮುರಾರ್ಜಿ ವಸತಿ ಶಾಲೆ, ಏಕಲವ್ಯ, ಆದರ್ಶ  ಶಾಲೆಗಳನ್ನು ತೆರೆದು ಸರ್ಕಾರದಿಂದ ಉಚಿತವಾಗಿ ಗುಣಮಟ್ಟ ಶಿಕ್ಷಣವನ್ನು ನೀಡುತ್ತಿದೆ ಇಂತಹ ಶಾಲೆಗಳಲ್ಲಿ  ವ್ಯಾಸಂಗ ನಡೆಸಿ ಉನ್ನತ ಹುದ್ದೆಗಳಲ್ಲಿ ಸೇರಿ ಉತ್ತಮ ಬದುಕನ ರೂಪಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.


ಯುವ ಮುಖಂಡ ಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ  ಸರ್ಕಾರಿ ಕೆಲಸಗಳನ್ನು ಪಡೆದುಕೊಳ್ಳಬೇಕೆಂದರೆ ಸಾಕಷ್ಟು ಉನ್ನತ ವ್ಯಾಸಾಂಗವಾದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಜೊತೆಗೆ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಿದೆ ಹಾಗಾಗಿ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದಲೇ ಮುರಾರ್ಜಿ ದೇಸಾಯಿ ಶಾಲೆ, ಏಕಲವ್ಯ ವಸತಿ ಶಾಲೆ, ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆದು ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಈ ಸಂದರ್ಭದಲ್ಲಿ  ದೊಡ್ಡ ಸಿದ್ದವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ್, ಮಾಜಿ ಸದಸ್ಯರಾದ ನವಕೋಟಿ, ಶಿವರಾಜ್,  ಸ್ವಾಮಿ ವಿವೇಕಾನಂದ ಟುಟೋರಿಯಲ್ ಶಿಕ್ಷಕರಾದ ಮಹಾಂತೇಶ್,  ಸಂದೀಪ್,  ಪ್ರಶಾಂತ್, ಶಂಕರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Views: 218

Leave a Reply

Your email address will not be published. Required fields are marked *